More

    ಸ್ವಕುಳಸಾಳಿ ಮಠ ಸರ್ವಶಕ್ತ ಆಗಲಿದೆ

    ಮೊಳಕಾಲ್ಮೂರು: ಶ್ರಮಸಂಸ್ಕೃತಿಯ ಸ್ವಕುಳಸಾಳಿ ಸಮಾಜದ ಗುರುಪೀಠವು, ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಲೆಂದು ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು ಶುಭ ಹಾರೈಸಿದರು.

    ಶ್ರೀ ರಾಘವೇಂದ್ರ ಸ್ವಾಮಿ ಮಠದ ವೃಂದಾವನ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಟ್ಟಣಕ್ಕೆ ಆಗಮಿಸಿದ್ದ ಶ್ರೀಗಳು, ಭಾನುವಾರ ಸ್ವಕುಳಸಾಳಿ ಸಮಾಜದ ಗುರುಪೀಠಕ್ಕೆ ತೆರಳಿ ಶ್ರೀ ಜಿಹ್ವೇಶ್ವರ ಗುರೂಜಿ ಅವರನ್ನು ಭೇಟಿಯಾಗಿ, ಸನಾತನ ಹಿಂದು ಸಮಾಜ, ಸಂಸ್ಕೃತಿಯ ಉನ್ನತಿ ಕುರಿತು ವಿಚಾರಧಾರೆಗಳನ್ನು ಹಂಚಿಕೊಂಡರು.

    ಸ್ವಕುಳಸಾಳಿ ಸಮಾಜ ರಾಜ್ಯದೆಲ್ಲೆಡೆಯೂ ಇದೆ. ಆದರೆ, ಯಾವ ಭಾಗದಲ್ಲೂ ಅದರ ಮಠಗಳಿಲ್ಲ. ಮಾರ್ಗದರ್ಶನ ನೀಡುವ ಗುರುವಿಲ್ಲವೆಂಬ ಕೊರಗಿಗೆ ಈಗ ತೆರೆಬಿದ್ದಿದೆ. ಜಿಹ್ವೇಶ್ವರ ಭಾರತಿ ಸ್ವಾಮೀಜಿ ದೊರೆತ್ತಿದ್ದಾರೆ. ಇವರ ಸಾಮಾಜಿಕ ಕಳಕಳಿ, ಅಪಾರ ಅನುಭವದಿಂದ ಪೀಠವು ಬಹು ಎತ್ತರಕ್ಕೆ ಬೆಳೆಯಲಿದೆ. ಹಸಿದವರಿಗೆ ಅನ್ನ, ಜ್ಞಾನದಾಹಿಗಳಿಗೆ ವಿದ್ಯೆ, ಭಕ್ತಿ ಮಾರ್ಗದಲ್ಲಿ ನಡೆವವರಿಗೆ ಧರ್ಮ ಅರಿವು ಮೂಡಿಸುವ ಕೆಲಸ ಮಾಡಲಿದೆ ಎಂದರು.

    ಶ್ರೀ ಜಿಹ್ವೇಶ್ವರ ಭಾರತಿ ಸ್ವಾಮೀಜಿ ಮಾತನಾಡಿ, 25ಕ್ಕೂ ಹೆಚ್ಚು ಒಳಪಂಗಡಗಳಿರುವ ಸ್ವಕುಳಸಾಳಿ ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯುವ ಜವಾಬ್ದಾರಿ ನನ್ನ ಮೇಲಿದೆ. ನೇಕಾರಿಕೆ ಕುಲಕಸುಬಿನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಮುದಾಯ ಬಡತನದ ಬೇಗೆಯಲ್ಲಿ ಬೇಯುತ್ತಿದೆ. ಮಕ್ಕಳೆಲ್ಲ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇವರೆಲ್ಲರ ಅಭ್ಯುದಯಕ್ಕಾಗಿ ಶ್ರೀಮಠ ಶ್ರಮಿಸಲಿದೆ ಎಂದರು.

    ಸಮಾಜದ ಮುಖಂಡರಾದ ಜ್ಞಾನದೇವ್, ಅಶೋಕ್ ಗಾಯಕ್ವಾಡ್, ಕಿರಣ್ ಕುಮಾರ್, ಜಿಂದಿ ವೀರಣ್ಣ, ಕಾಂಬ್ಳೆ ಸತೀಶ್, ವಿಜಯಕುಮಾರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts