More

    ಗಡಿ ಭಾಗದಲ್ಲಿ ಹದ್ದಿನ ಕಣ್ಣು

    ಮೊಳಕಾಲ್ಮೂರು: ದಿನ ಕಳೆದಂತೆ ತೀವ್ರ ಸ್ವರೂಪ ತಾಳುತ್ತಿರುವ ಕರೊನಾ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಸಕಲ ಸಿದ್ಧತೆ ಕೈಗೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ರಾಧಿಕಾರ ಹೇಳಿದರು.

    ಮೊಳಕಾಲ್ಮೂರು ಸಮೀಪದ ಆಂಧ್ರ ಮತ್ತು ಕರ್ನಾಟಕದ ಗಡಿ ಚೆಕ್ ಪೋಸ್ಟ್ ಕೇಂದ್ರ ಬಳಿ ಗುರುವಾರ ಆಯೋಜಿಸಿದ್ದ ಅಧಿಕಾರಿಗಳು, ಸಾರ್ವಜನಿಕರ ಸಭೆಯಲ್ಲಿ ಮಾತನಾಡಿ, ಕರೊನಾ ನಿಯಂತ್ರಣಕ್ಕೆ ನೌಕರರ ವರ್ಗ ಹಾಗೂ ಸಾರ್ವಜನಿಕರ ಪರಸ್ಪರ ಸಹಕಾರ ಸಹಭಾಗಿತ್ವ ಅತೀ ಮುಖ್ಯ ಎಂದರು.

    ಸದ್ಯದ ಪರಿಸ್ಥಿಯಲ್ಲಿ ನಮ್ಮ ಜಿಲ್ಲೆಯಲ್ಲಿ ಮಹಾಮಾರಿ ಸೋಂಕು ತೀವ್ರ ಸ್ವರೂಪ ತಾಳಲು ಬಿಟ್ಟಿಲ್ಲ. ಎಲ್ಲಿಯೂ ಬೇರೆ ರಾಜ್ಯದಿಂದ ಜಿಲ್ಲೆಗೆ ನುಸುಳದಂತೆ ಸುತ್ತಲು ವಜ್ರ ಕವಚದ ರೀತಿ ಭದ್ರತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಏನೇ ಅಗತ್ಯ ವಸ್ತುಗಳ ಬೇಡಿಕೆ ಇದ್ದರು ಗಡಿ ಕೇಂದ್ರದಲ್ಲಿಯೇ ವಿನಮಯ ಮಾಡಿಕೊಳ್ಳಬೇಕು. ವಾಹನಗಳಾಗಲಿ ಅಥವಾ ಜನರಾಗಲಿ ಜಿಲ್ಲೆಗೆ ಪ್ರವೇಶ ನೀಡುವಂತಿಲ್ಲ. ಅಲ್ಲಲ್ಲಿ ಇರುವ ಕಳ್ಳ ದಾರಿಗಳಿಗೂ ನಿರ್ಬಂಧ ಹಾಕುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಹದ್ದಿನ ಕಣ್ಗಾವಲು ವಹಿಸಲಾಗಿದೆ ಎಂದರು.

    ಸ್ಥಳೀಯ ಪೊಲೀಸ್ ಅಧಿಕಾರಿಗಳು ಸರ್ಕಾರದ ನಿಬಂಧನೆಗಳ ಬಗ್ಗೆ ಜನರಲ್ಲಿ ಮನವರಿಕೆ ಮಾಡಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿದ್ದು, ರೋಗ ನಿಯಂತ್ರಣಕ್ಕೆ ಸಹಕಾರಿ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ತಹಸೀಲ್ದಾರ್ ಎಂ.ಬಸವರಾಜ್, ಡಿವೈಎಸ್‌ಪಿ ರೋಷನ್ ಜಮೀರ್, ಸಿಪಿಐ ಗೋಪಾಲನಾಯ್ಕ, ಪಿಎಸ್‌ಐ ಬಸವರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts