More

    ಮೊಳಕಾಲ್ಮೂರು ರಸ್ತೆ ವಿಸ್ತರಣೆಗೆ ಓಕೆ, ಪ್ರಮಾಣಕ್ಕೆ ಕೊಕ್ಕೆ

    ವಿಜಯವಾಣಿ ವಿಶೇಷ ಮೊಳಕಾಲ್ಮೂರು: ಮೊಳಕಾಲ್ಮೂರು ಪಟ್ಟಣದ ಮುಖ್ಯರಸ್ತೆ ವಿಸ್ತರಣೆಯ ಪ್ರಮಾಣ ಎಷ್ಟು? 20 ಮೀಟರ್ ವಿಸ್ತರಿಸಬೇಕೋ ಅಥವಾ 30 ಮೀಟರ್‌ಗೆ ಹೆಚ್ಚಿಸಬೇಕೇ ಎಂಬ ಕುರಿತು ಗೊಂದಲ ಮೂಡಿದೆ.

    ಈಗಾಗಲೇ ರಸ್ತೆ ಮಧ್ಯದಿಂದ ಎರಡೂ ಬದಿ ತಲಾ 10 ಮೀ. ವಿಸ್ತರಿಸಲು ಸಚಿವ ಶ್ರೀರಾಮುಲು ಭೂಮಿಪೂಜೆ ನೆರವೇರಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 30 ಕೋಟಿ ರೂ. ಅನುದಾನ ಕೂಡ ಮಂಜೂರಾಗಿದೆ. ಪಿಟಿ ಹಟ್ಟಿಯಿಂದ- ಯದ್ದಲಬೋಮ್ಮಯ್ಯನಹಟ್ಟಿ ಗಡಿ ವರೆಗೆ ಹೊರ ವಲಯದಲ್ಲಿ 5 ಕಿ.ಮೀ. ರಸ್ತೆ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದೆ.
    ಆದರೆ, ಊರಿನ ಅಭಿವೃದ್ಧಿ ದೃಷ್ಟಿಯಿಂದ 30 ಮೀಟರ್ ವಿಸ್ತರಣೆ ಸೂಕ್ತ ಎಂಬ ತೀರ್ಮಾನಕ್ಕೆ ಬಂದ ಪಟ್ಟಣ ಪಂಚಾಯಿತಿ ಈ ಕುರಿತು ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದೆ.

    30 ಮೀಟರ್ ಅಗಲೀಕರಣಕ್ಕೆ ಪಪಂ ಪಟ್ಟು ಜಿಲ್ಲಾ ಸಚಿವ, ಜಿಲ್ಲಾಧಿಕಾರಿಗೆ ಮನವಿ

    ರಸ್ತೆ ವಿಸ್ತರಣೆ ಪದೇ ಪದೆ ಮಾಡುವಂಥದ್ದಲ್ಲ. ಭವಿಷ್ಯದ ದೃಷ್ಟಿಯಿಂದ ವಿದ್ಯುತ್ ದೀಪ, ಕುಡಿವ ನೀರಿನ ಪೈಪ್‌ಲೈನ್ ಅಳವಡಿಕೆ ಸೇರಿ ವಿವಿಧ ಪ್ರಗತಿ ಕಾರ್ಯ ಕೈಗೊಳ್ಳಲು ಜಾಗದ ಅಗತ್ಯವಿದೆ. ಹೀಗಾಗಿ ರಸ್ತೆ ಮಧ್ಯದಿಂದ ಆಚೆ 15ಮೀಟರ್- ಈಚೆ 15 ಮೀಟರ್ ವಿಸ್ತರಿಸುವುದು ಸೂಕ್ತ ಎಂದು ಜಿಲ್ಲಾಧಿಕಾರಿ ಮತ್ತು ಸಚಿವ ಶ್ರೀರಾಮುಲು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಬೆಳವಣಿಗೆಗಳ ನಡುವೆ ಈ ಹಿಂದೆ ತೆಗೆದುಕೊಂಡ ತೀರ್ಮಾನದಂತೆ 20 ಮೀಟರ್ ಅಗಲ ವಿಸ್ತರಿಸುವಂತೆ ಅಂಗಡಿ,ಮನೆ ಮಾಲೀಕರು ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ.

    ರಸ್ತೆಯ ಇಕ್ಕೆಲಗಳ ಅಂಗಡಿ, ಮನೆ ಮಾಲೀಕರಿಗೆ ನೋಟಿಸ್ ನೀಡುವ ಸಿದ್ಧತೆ ಚುರುಕಾಗಿದ್ದನ್ನು ಮನಗಂಡ ಮಾಲೀಕರು ವಿಸ್ತರಣೆ ಬಗ್ಗೆ ಸ್ಪಷ್ಟ ಮಾಹಿತಿ ಕೋರುವ ಜತೆಗೆ ಆಸ್ತಿಗೆ ಪರ್ಯಾಯವಾಗಿ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಸಚಿವರ ಮೊರೆ ಹೋಗಿದ್ದಾರೆ.

    ರಸ್ತೆ ಅಗಲೀಕರಣ ಊರಿನ ಅಭಿವೃದ್ಧಿಗೆ ಪೂರಕ. ಹೀಗಾಗಿ ಸರ್ವರೂ ಸಹಕರಿಸಬೇಕು. 20 ಮೀಟರ್ ವಿಸ್ತರಣೆ ಮಾಡಿದರೆ ಸಾಲದು.ಎರಡೂ ಬದಿ ಸೇರಿ ಕನಿಷ್ಠ 100 ಅಡಿ ವಿಸ್ತರಿಸಿದರೆ ಅನುಕೂಲ. ಇದಕ್ಕೆ ಕಾನೂನಾತ್ಮಕ ಕ್ರಮದ ಜತೆ ಬೇಕಾಗುವ ಹೆಚ್ಚುವರಿ ಅನುದಾನಕ್ಕೆ ಜಿಲ್ಲಾಧಿಕಾರಿ ಹಾಗೂ ಸಚಿವರ ಗಮನ ಸೆಳೆಯಲಾಗಿದೆ. ಇದು ಯಾರ ಪರ-ವಿರೋಧವಲ್ಲ.
    -ಪಿ.ಲಕ್ಷ್ಮಣ ಪಟ್ಟಣ ಪಂಚಾಯಿತಿ ಅಧ್ಯಕ್ಷ

    ಸಾರ್ವಜನಿಕರ ಹಿತ ದೃಷ್ಟಿಯಿಂದ ರಸ್ತೆ ವಿಸ್ತರಣೆಗೆ ಸರ್ವೋಚ್ಚ ನ್ಯಾಯಾಲಯದ ಸಮ್ಮತಿ ಇದೆ. ಮುಖ್ಯರಸ್ತೆಗೆ 120 ಅಡಿ ಸೇರಿರುವುದು ದಾಖಲೆ ಪತ್ರದಲ್ಲಿ ನಮೂದಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾರ್ಗಸೂಚಿ ಆಧರಿಸಿ 100 ಅಡಿ ವಿಸ್ತೀರ್ಣಕ್ಕೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ.
    -ಪಿ.ಕಾಂತರಾಜ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
    ಮೊಳಕಾಲ್ಮೂರು ರಸ್ತೆ ವಿಸ್ತರಣೆಗೆ ಓಕೆ, ಪ್ರಮಾಣಕ್ಕೆ ಕೊಕ್ಕೆ

    ಚಳ್ಳಕೆರೆ ತಾಲೂಕಿನ 53 ಹಳ್ಳಿಗಳ ರುದ್ರಭೂಮಿ ಸಮಸ್ಯೆ ಪರಿಹಾರಕ್ಕೆ ಶಾಸಕರ ಕಟ್ಟಪ್ಪಣೆ

     

    ಮೊಳಕಾಲ್ಮೂರಲ್ಲಿ 30 ಮೀಟರ್ ರಸ್ತೆ ವಿಸ್ತರಣೆಗೆ ವಿರೋಧ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts