More

    ಮೊಳಕಾಲ್ಮೂರು ಅಂಚೆ ಕಚೇರಿಗಿಲ್ಲ ಕಟ್ಟಡ ಭಾಗ್ಯ

    ಮೊಳಕಾಲ್ಮೂರು: ಅಂಚೆ ಇಲಾಖೆಗೆ ಸೇರಿದ ಖಾಲಿ ನಿವೇಶನ ಪಟ್ಟಣದಲ್ಲಿ ಹಲವು ವರ್ಷಗಳಿಂದ ಅನಾಥವಾಗಿದ್ದರೂ ಕಟ್ಟಡ ನಿರ್ಮಿಸಲು ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ.

    ಪಟ್ಟಣದ ಹೃದಯ ಭಾಗದಲ್ಲಿ 150-100 ಉದ್ದಗಲದ ಸ್ವಂತ ನಿವೇಶನ ಹಲವು ವರ್ಷಗಳಿಂದ ಖಾಲಿಯಿದೆ. ಇಲ್ಲಿನ ಎಸ್‌ಬಿಎಂ ಬ್ಯಾಂಕ್ ಬಳಿಯ ಬಾಡಿಗೆ ಮನೆಯಲ್ಲಿ ಅಂಚೆ ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ಅಗತ್ಯ ಸೌಲಭ್ಯಗಳಿಲ್ಲದೇ ಸಾವಿರಾರು ಗ್ರಾಹಕರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ.

    ಕಚೇರಿಯ ಕಿರಿದಾದ ಮೆಟ್ಟಿಲುಗಳನ್ನು ಹತ್ತಲು ಗ್ರಾಹಕರು ಹರಸಾಹಸ ಪಡಬೇಕು. ವೃದ್ಧರು ಕೆಳಗೆ ಕೂತು ಕಂಡವರ ಆಶ್ರಯದಿಂದ ಪಿಂಚಣಿ ಹಣ ಪಡೆಯಬೇಕು. ಇಷ್ಟಾದರೂ ಇಲಾಖೆ ಉನ್ನತ ಅಧಿಕಾರಿಗಳು ಕಟ್ಟಡ ನಿರ್ಮಾಣದ ಕುರಿತು ಗಮನ ಹರಿಸುತ್ತಿಲ್ಲ.

    ಸಂತೆಗೆ ಮೀಸಲಾಗುವುದೇ ಜಾಗ ?: ವಾರದ ಸಂತೆ ನಡೆಸಲು ಪಟ್ಟಣದಲ್ಲಿ ಜಾಗದ ಕೊರತೆಯಿದೆ. ವ್ಯಾಪಾರಿಗಳು ಈವರೆಗೆ ರಸ್ತೆ ಬದಿ ವಹಿವಾಟು ನಡೆಸುತ್ತಿದ್ದರು. ಅಪಘಾತಗಳು ಸಂಭವಿಸುವ ಮುನ್ನ ಸಂತೆ ಮಾರುಕಟ್ಟೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿ ಪಪಂ ಅಧಿಕಾರಿಗಳಿಗೆ ಈಚೆಗೆ ಬಿಸಿ ಮುಟ್ಟಿಸಿದ್ದರು. ಖಾಲಿ ಇರುವ ಅಂಚೆ ಕಚೇರಿ ಜಾಗದಲ್ಲೇ ತಾತ್ಕಾಲಿಕವಾಗಿ ಸಂತೆ ನಡೆಸುವ ತೀರ್ಮಾನಕ್ಕೆ ಅಧಿಕಾರಿಳು ಬಂದಿದ್ದಾರೆ ಎನ್ನಲಾಗಿದೆ.

    ಇಲಾಖೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಈಗಲಾದರೂ ಅಂಚೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸುವ ಕಾರ್ಯಕ್ಕೆ ಮುಂದಾಗಬೇಕು.

    ಚಿತ್ರದುರ್ಗದ ಅಂಚೆ ಇಲಾಖೆ ಹಿರಿಯ ಅಧಿಕಾರಿ ಅನಿಲ್‌ಕುಮಾರ್ ಮಾತನಾಡಿ, ಸ್ವಂತ ಕಟ್ಟಡ ನಿರ್ಮಾಣವಾದರೆ ಜನ ಸಾಮಾನ್ಯರಿಗೆ ಮೂಲ ಸೌಕರ್ಯ ಕಲ್ಪಿಸಲು ಅನುಕೂಲವಾಗುತ್ತದೆ. ಅನುದಾನ ಮಂಜೂರಾತಿಗೆ ಉನ್ನತ ಅಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆಯಲಾಗಿದೆ. ಸಂಸದ ನಾರಾಯಣಸ್ವಾಮಿ ಅವರು ಸಹ ಈಗಾಗಲೇ ಇಲಾಖೆ ಪ್ರಧಾನ ಮುಖ್ಯಸ್ಥರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts