More

    ಹಣ್ಣು, ತರಕಾರಿ, ಸೊಪ್ಪು ಸೇವನೆಯಿಂದ ಆರೋಗ್ಯ

    ಮೊಳಕಾಲ್ಮೂರು: ನೈಸರ್ಗಿಕವಾಗಿ ಬೆಳೆದಂತಹ ಹಣ್ಣು, ತರಕಾರಿ, ಸೊಪ್ಪು ಸೇವನೆ ಮಾಡುವುದರಿಂದ ಆರೋಗ್ಯದಿಂದ ಇರಬಹುದು ಎಂದು ತೋಟಗಾರಿಕೆ ಅಧಿಕಾರಿ ಲೋಕೇಶ್ ತಿಳಿಸಿದರು.

    ಇಲ್ಲಿನ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮಹಿಳಾ ಸಮಖ್ಯಾ ಕರ್ನಾಟಕ ಸಂಘದಿಂದ ಮಂಗಳವಾರ ಹಣ್ಣು ಮತ್ತು ತರಕಾರಿ ಸಂಸ್ಕರಣೆ ಕುರಿತು ರೈತ ಮಹಿಳೆಯರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

    ಕುಟುಂಬ ಸದಸ್ಯರ ಆರೋಗ್ಯ ರಕ್ಷಣೆ ಮನೆಯ ಯಜಮಾನಿಯ ಕೈಯಲ್ಲಿರುತ್ತದೆ. ಸಿದ್ಧ ಆಹಾರ ಆರೋಗ್ಯಕ್ಕೆ ಹಾನಿಕರ. ಇದರಿಂದ ದೂರವಿದ್ದು ತಾಜಾ ಆಹಾರ ಸೇವನೆ ಮಾಡಬೇಕು. ಮನೆ ಆವರಣ ಅಥವಾ ಜಮೀನಿನಲ್ಲಿ ಅಗತ್ಯ ತರಕಾರಿ ಬೆಳೆದು ಅವುಗಳನ್ನೇ ಅಡುಗೆಗೆ ಬಳಸುವ ರೂಢಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಜಮೀನಿನಲ್ಲಿ ಬೆಳೆದ ಹಣ್ಣು, ತರಕಾರಿಗಳನ್ನು ಸಂರಕ್ಷಣೆ ಮಾಡಿಕೊಂಡು ಅವುಗಳಿಂದ ಉಪ ಉತ್ಪನ್ನಗಳಾದ ಉಪ್ಪಿನಕಾಯಿ, ಜ್ಯೂಸ್ ಇತ್ಯಾದಿಗಳನ್ನು ಸಿದ್ಧಪಡಿಸಿ ಮಾರುವುದರಿಂದ ಹೆಚ್ಚಿನ ಲಾಭ ಪಡೆಯಬಹುದು ಎಂದರು.

    ತಾಪಂ ಸದಸ್ಯ ಟಿ. ರೇವಣ್ಣ ಮಾತನಾಡಿ, ಆರೋಗ್ಯಯುತ ಜೀವನಕ್ಕೆ ಆಹಾರ ಪದ್ಧತಿ ಅನುಸರಣೆ ಅತ್ಯಗತ್ಯ. ನಾವು ಯಾವ ರೀತಿಯ ಆಹಾರ ಸೇವಿಸುತ್ತೇವೆ ಅದರ ಮೇಲೆ ಆರೋಗ್ಯದ ರಕ್ಷಣೆ ಅವಲಂಬಿತವಾಗಿರುತ್ತದೆ. ಆರೋಗ್ಯದಿಂದಿರಲು ಹಣ್ಣು, ಹಾಲು, ಧಾನ್ಯ, ತರಕಾರಿ ಸೇವೆ ಅತ್ಯುಪಯುಕ್ತ ಎಂದರು.

    ತಾಪಂ ಅಧ್ಯಕ್ಷೆ ಜಿ. ಬೋರಮ್ಮ, ಸದಸ್ಯ ನರೇಂದ್ರಬಾಬು, ಇಂದಿರಾಗಾಂಧಿ ಒಕ್ಕೂಟದ ಅಧ್ಯಕ್ಷೆ ಗೌರಮ್ಮ, ರೈತ ಮಹಿಳೆ ಮಹೇಶ್ವರಿ, ಮಹಿಳಾ ಸಮಖ್ಯಾ ಮುಖ್ಯಸ್ಥೆ ತ್ರಿವೇಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts