ಅಂಕವೈಕಲ್ಯ ತೆಡೆಗೆ ಲಸಿಕೆ ರಾಮಬಾಣ

1 Min Read
ಅಂಕವೈಕಲ್ಯ ತೆಡೆಗೆ ಲಸಿಕೆ ರಾಮಬಾಣ

ಮೊಳಕಾಲ್ಮೂರು: ಅಂಕವೈಕಲ್ಯ ತಡೆಗೆ ಪೋಲಿಯೋ ಹನಿ ರಾಮಬಾಣ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಪದ್ಮಾ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಎದುರು ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪೋಲಿಯೋ ಮಕ್ಕಳ ಪಾಲಿನ ವರದಾನ. ಈ ಹನಿಯನ್ನು 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ತಪ್ಪದೇ ಹಾಕಿಸಬೇಕು. ಇದರಿಂದ ಹಲವು ರೋಗಗಳ ನಿವಾರಣೆ ಸಾಧ್ಯ ಎಂದು ತಿಳಿಸಿದರು.

ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ವೀರೇಶ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಡಿ.ಚಿದಾನಂದಪ್ಪ, ಪಪಂ ಮುಖ್ಯಾಧಿಕಾರಿ ಡಿ.ಕಾಂತರಾಜ್, ಆಶಾ ಮೇಲ್ವಿಚಾರಕಿ ಉಷಾ, ಸಿಡಿಪಿಒ ಇಲಾಖೆ ಮೇಲ್ವಿಚಾರಕಿ ಜರೀನಾಬಾನು, ಆರೋಗ್ಯ ಸಹಾಯಕಿಯರಾದ ಗೋದಾವರಿ, ಸುಧಾ, ವಿಜಯಲಕ್ಷ್ಮಿ, ನಾಗರತ್ನಮ್ಮ, ಪ್ರಭಾವತಿ ಇತರರಿದ್ದರು.

See also  ಮೀನು ಕೃಷಿ ತರಬೇತಿ
Share This Article