More

    ಪೌರಕಾರ್ಮಿಕರಿಗೆ ಕೋಳಿಮೊಟ್ಟೆ ವಿತರಣೆ

    ಮೊಳಕಾಲ್ಮೂರು: ಮೊಳಕಾಲ್ಮೂರು-ಚಳ್ಳಕೆರೆ ತಾಲೂಕಿನ ಮೊಟ್ಟೆ ಕೋಳಿ ಸಾಕಾಣಿಕೆ ಮತ್ತು ಮೊಟ್ಟೆ ಮಾರಾಟಗಾರರ ಸಂಘದಿಂದ ಬುಧವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆರೋಗ್ಯ ಸಿಬ್ಬಂದಿ, ರೋಗಿಗಳು, ಪೊಲೀಸರು, ಪೌರಕಾರ್ಮಿಕರು ಹಾಗೂ ಬಡ ಕುಟುಂಬಗಳಿಗೆ 12 ಸಾವಿರ ಕೋಳಿ ಮೊಟ್ಟೆ ವಿತರಿಸಲಾಯಿತು.

    ಸಂಘದ ಕ್ಷೇತ್ರಾಧ್ಯಕ್ಷ ಬಿ.ಎಚ್.ತಿಪ್ಪೇಸ್ವಾಮಿ ಮಾತನಾಡಿ, ಕರೊನಾ ಎಫೆಕ್ಟ್‌ನಿಂದ ಕುಕ್ಕುಟೋದ್ಯಮಿಗಳು ಕೋಟ್ಯಂತರ ರೂ. ನಷ್ಟ ಅನುಭವಿಸುವಂತಾಗಿದೆ ಎಂದರು.

    ಮೊಟ್ಟೆ ಕೋಳಿ ಸಾಕಣೆದಾರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಟಿ.ರೇವಣ್ಣ ಮಾತನಾಡಿ, ಜಿಲ್ಲೆಯಲ್ಲಿ ದಿನಕ್ಕೆ 22 ಲಕ್ಷ ಕೋಳಿಗಳಿಂದ 20 ಲಕ್ಷ ಮೊಟ್ಟೆ ಉತ್ಪಾದನೆಯಾಗುತ್ತಿತ್ತು. ಲಾಕ್‌ಡೌನ್ ಜಾರಿಯಿಂದ ಆಹಾರದ ಕೊರತೆ ಉಂಟಾಗಿ ದಿನಕ್ಕೆ 6 ಲಕ್ಷ ಮೊಟ್ಟೆ ಮಾತ್ರ ದೊರೆಯುತ್ತಿವೆ. ಜತೆಗೆ ಸಾಗಣೆ, ಮಾರಾಟಕ್ಕೂ ನಿರ್ಬಂಧ ಇರುವ ಕಾರಣ ಕುಕ್ಕುಟೋದ್ಯಮಿಗಳಿಗೆ ದಿಕ್ಕು ತೋಚದಾಗಿದೆ ಎಂದರು.

    ಸಂಘದ ಪದಾಧಿಕಾರಿಗಳಾದ ಭೀಮಾರಡ್ಡಿ, ವಿಜಯಕುಮಾರ್, ಕೇಶವರಡ್ಡಿ, ಅರುಣ್ ಕುಮಾರ್, ರಮೇಶ್, ಮಂಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts