More

  ಬಿಗ್ ಬಾಸ್ ವಿನ್ನರ್ ಮೇಲೆ ಕೋಳಿ ಮೊಟ್ಟೆ ದಾಳಿ! ಕಾರಣ ಹೀಗಿದೆ..

  ಮುಂಬೈ: ಹಾಸ್ಯನಟ ಹಾಗೂ ಹಿಂದಿ ಸೀಸನ್ 17ರ ಬಿಗ್ ಬಾಸ್ ವಿನ್ನರ್ ಮುನಾವರ್ ಫಾರೂಕ್ ಸಾಮಾಜಿಕ ಮಾಧ್ಯಮದಲ್ಲಿ ಸಕ್ರೀಯರಾಗಿದ್ದು, ಅಭಿಮಾನಿ ಬಳಗವನ್ನು ಗಳಿಸಿಕೊಂಡಿದ್ದಾರೆ. ಅಷ್ಟೇ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇತ್ತೀಚೆಗೆ ಈತನ ವಿರುದ್ಧ ಪೊಲೀಸ್ ಕೇಸ್ ಕೂಡ ದಾಖಲಾಗಿ ಸುದ್ದಿಯಲ್ಲಿದ್ದ. ಆದರೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

  ಇದನ್ನೂ ಓದಿ: ಆರ್‌ಸಿಬಿ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಫಫ್: ಮ್ಯಾನೇಜ್​ಮೆಂಟ್ ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾ?

  ಮುಂಬೈನಲ್ಲಿ ಮುನಾವರ್ ಫಾರೂಕಿ ಮೇಲೆ ಕೋಳಿ ಮೊಟ್ಟೆಗಳಿಂದ ಹಲ್ಲೆ ನಡೆಸಲಾಗಿದೆ. ರಂಜಾನ್ ವೇಳೆ ಮುನಾವರ್ ಮುಂಬೈನ ಮೊಹಮ್ಮದ್ ಅಲಿ ರಸ್ತೆಯಲ್ಲಿ ನಡೆದ ಇಫ್ತಾರ್ ಕೂಟಕ್ಕೆ ತೆರಳಿದ್ದರು. ಆದರೆ, ಮುನಾವರ್ ನನ್ನು ಆಹ್ವಾನಿಸಿದ್ದ ರೆಸ್ಟೊರೆಂಟ್ ಗೆ ಬದಲು ಬೇರೆ ರೆಸ್ಟೋರೆಂಟ್ ನಲ್ಲಿ ಇಫ್ತಾರ್ ಕೂಟಕ್ಕೆ ತೆರಳಲು ಸಿದ್ಧತೆ ನಡೆಸಿದ್ದ ಎನ್ನಲಾಗಿದೆ.

  ಇದೇ ಹಿನ್ನೆಲೆಯಲ್ಲಿ ಮುನಾವರ್ ಪಾರ್ಟಿಗೆ ಸಿಹಿತಿಂಡಿ ಖರೀದಿಸಲು ಸ್ವೀಟ್ ಅಂಗಡಿಯಲ್ಲಿ ನಿಂತಿದ್ದ. ಆಗ ಅಲ್ಲಿಗೆ ಬಂದ ಮೊದಲು ಆಹ್ವಾನಿಸಿದ್ದ ರೆಸ್ಟೋರೆಂಟ್ ಮಾಲೀಕ ಹಾಗೂ ನೌಕರರು ಕೋಳಿ ಮೊಟ್ಟೆಗಳಿಂದ ಹಲ್ಲೆ ನಡೆಸಿದ್ದಾರೆ.

  ಇದರಿಂದ ಅಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಮೊಟ್ಟೆಗಳಿಂದ ಹಲ್ಲೆ ನಡೆಸಿದಾಗ ಮುನಾವರ್ ಕೂಡ ಜಗಳವಾಡಿದ್ದಾನೆ. ಸ್ವಲ್ಪ ಸಮಯದ ನಂತರ ಕೆಲವರು ಘಟನಾ ಸ್ಥಳಕ್ಕೆ ಬಂದು ಮುನಾವರ್ ನನ್ನು ಅಲ್ಲಿಂದ ಕರೆದೊಯ್ದರು.

  ಆದರೆ ಎರಡು ದಿನಗಳ ಹಿಂದೆ ತಡರಾತ್ರಿ ಬೆಳಕು ಬಂದಿದೆ. ಈ ಘಟನೆಯ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ. ಮುನಾವರ್ ಫಾರೂಕಿ ಮೇಲೆ ಕೋಳಿ ಮೊಟ್ಟೆ ದಾಳಿ ಮಾಡಿರುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ‘ದೇಹ ತೋರಿಸುವುದು..?’ ಕಪ್ಪು ಕೋಟ್​ ಧರಿಸಿ ಶಾಕ್​ ನೀಡಿದ ಸಮಂತಾಗೆ ಅಭಿಮಾನಿಗಳು ಕೊಟ್ಟ ಉತ್ತರ..!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts