More

    ಮೊಹರಂ ಹಬ್ಬ ಸರಳ ಆಚರಣೆ

    ಕಾಗವಾಡ : ತಾಲೂಕಿನ ಶೇಡಬಾಳ ಪಟ್ಟಣದಲ್ಲಿ ಭಾನುವಾರ ತ್ಯಾಗ, ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಮುಸ್ಲಿಮರು ಸರಳವಾಗಿ ಆಚರಿಸಿದರು.

    ಕರೊನಾ ವೈರಸ್ ಹಾವಳಿಯಿಂದ ಜಿಲ್ಲಾಡಳಿತ ಜನದಟ್ಟಣೆ ಆಗದಂತೆ, ಅಂತರ ಕಾಯ್ದುಕೊಂಡು ಸರಳವಾಗಿ ಹಬ್ಬ ಆಚರಿಸುವಂತೆ ಆದೇಶ ನೀಡಿದ್ದರಿಂದ ಹಿಂದು-ಮುಸ್ಲಿಮರು ಗಣೇಶ ಹಾಗೂ ಮೊಹರಂ ಹಬ್ಬವನ್ನು ಸರಳವಾಗಿ ಆಚರಿಸಿದರು. ಬಸವನ ಅಗಸಿಯ ರಣಝುಂಜಾರ ಯುವಕ ಮಂಡಳ ಸದಸ್ಯರು ಹಾಗೂ ಮುಸ್ಲಿಮರು ಜನದಟ್ಟಣೆ ಆಗದಂತೆ ಎಚ್ಚರ ವಹಿಸಿದ್ದರು. ಬೆಳಗಿನ ಜಾವ 4 ಗಂಟೆಗೆ ಗ್ರಾಮಸ್ಥರು ಎದ್ದೇಳುವ ಮುಂಚೆಯೇ ಬೆರಳೆಣಿಕೆಯ ಜನರ ಉಪಸ್ಥಿತಿಯಲ್ಲಿ ತಾಂಬೂತಗಳ(ಪೀರ) ಭೇಟಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಂಜೆ ತಾಂಬೂತಗಳ ವಿಸರ್ಜನೆ ಕಾರ್ಯಕ್ರಮ ಜರುಗಿತು.

    ಅರಟಾಳ ವರದಿ: ಗ್ರಾಮದಲ್ಲಿ ಭಾನುವಾರ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಲಾ ತಂಡಗಳು ಜೈಕಾರ ಹಾಕುತ್ತ ಕೈಯಲ್ಲಿ ಹಸಿರು ನಿಶಾನೆ ಹಿಡಿದು ಹಲಗೆ ಬಾರಿಸುತ್ತ ಹೆಜ್ಜೆ ಹಾಕಿದರು. ಯುವಕರು ಕರಬಲ್ ಕುಣಿತ ಪ್ರದರ್ಶಿಸಿದರು. ತಾಂಬೂತದ ಮೇಲೆ ಭಕ್ತರು ಚುರಮುರಿ, ಖಾರಿಕ್, ಕೊಬ್ಬರಿ ಹಾರಿಸಿ ತಮ್ಮ ಹರಕೆ ತೀರಿಸಿದರು. ಅಗ್ನಿ ಹೊಂಡದಲ್ಲಿ ಹಾಲು ಉಕ್ಕಿಸಿ ನುಡಿ ಹೇಳಲಾಯಿತು. ಭಕ್ತರು ಹಾಡುತ್ತ ಹೊಳೆಗೆ ಹೋಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಮರಳಿ ಮಸೀದಿಗೆ ಬಂದರು.

    ಎಂ.ಕೆ.ಜಂಬಗಿ, ಸಲಾವುದ್ದಿನ್ ಮುಲ್ಲಾ, ಹಾಜಿಸಾಬ ಮುಲ್ಲಾ, ಗಪೂರಸಾಬ ಮುಲ್ಲಾ, ಪ್ರಲ್ಹಾದ ದಮಡಿ, ಭೀಮಪ್ಪ ಮಾಳಿ, ಶೌಕತಲಿ ಮುಲ್ಲಾ, ದುರ್ಗಪ್ಪ ವಡ್ಡರ, ಈರಪ್ಪ ಪಾಟೀಲ, ಸುರೇಶ ಕಾಂಬಳೆ, ಅಕ್ಬರಲಿ ಮುಲ್ಲಾ, ಯಂಕಪ್ಪ ಜಂಬಗಿ, ಬಸಪ್ಪ ತೆಲಸಂಗ, ಮೀರಾಸಾಬ ಮುಲ್ಲಾ, ಪಾಂಡಪ್ಪ ಮಾದರ, ಸೈಯದಸಾಬ್ ಮುಲ್ಲಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts