More

    ಬೇಕಾಬಿಟ್ಟಿ ಕಾಮೆಂಟ್​ ಮಾಡುವ ಪಾಕಿಗಳಿಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ತಿರುಗೇಟು ಕೊಟ್ಟ ಶಮಿ!

    ನವದೆಹಲಿ: ವಿಶ್ವಕಪ್​ ಟೂರ್ನಿಯಲ್ಲಿ ಸತತ 10 ಪಂದ್ಯಗಳಲ್ಲಿ ಗೆದ್ದ ಭಾರತ ಫೈನಲ್​ನಲ್ಲಿ ಮುಗ್ಗರಿಸಿದ್ದು, ಅಸಂಖ್ಯಾತ ಭಾರತೀಯರಿಗೆ ಭಾರೀ ನೋವುಂಟು ಮಾಡಿತು. ಈವರೆಗೂ ಆ ನೋವಿನಿಂದ ಆಚೆ ಬರಲು ಆಗುತ್ತಿಲ್ಲ. ಆದರೆ, ಕೆಲ ಪಾಕಿಸ್ತಾನಿಗಳಿಗೆ ಇದು ಹಾಲು ಕುಡಿದಷ್ಟೂ ಆನಂದವಾಗುತ್ತಿದೆ. ತಮ್ಮ ದೇಶದ ಹೀನಾಯ ಸ್ಥಿತಿಯ ಬಗ್ಗೆ ಯೋಚಿಸದೇ ಭಾರತೀಯರನ್ನು ಕೆಣಕಿ ವಿಕೃತ ಆನಂದ ಅನುಭವಿಸುತ್ತಿದ್ದಾರೆ. ಇಂತಹವರಿಗೆ ಟೀಮ್​ ಇಂಡಿಯಾದ ಸ್ಟಾರ್​ ಬೌಲರ್​ ಮೊಹಮ್ಮದ್​ ಶಮಿ ಸರಿಯಾಗಿ ತಿರುಗೇಟು ನೀಡಿದ್ದಾರೆ.

    ವಿಶ್ವಕಪ್​ ಟೂರ್ನಿಯಲ್ಲೇ ಅತ್ಯಧಿಕ ವಿಕೆಟ್​ ಪಡೆದ ಖ್ಯಾತಿಯನ್ನು ಶಮಿ ಹೊಂದಿದ್ದಾರೆ. ಮೊದಲ 4 ಪಂದ್ಯಗಳಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದ ಶಮಿ, ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯ ಗಾಯಗೊಂಡ ಬಳಿಕ ಆಡುವ ಹನ್ನೊಂದರ ಬಳಗ ಸೇರಿಕೊಂಡರು. ಕೇವಲ 7 ಪಂದ್ಯಗಳಲ್ಲಿ 24 ವಿಕೆಟ್​ ಪಡೆಯುವ ಮೂಲಕ ಕ್ರೀಡಾ ಜಗತ್ತಿನ ಗಮನ ಸೆಳೆದಿದ್ದಾರೆ.

    ಶಮಿ ಏಳು ಪಂದ್ಯಗಳಲ್ಲಿ ಮೂರು ಬಾರಿ ಐದು ವಿಕೆಟ್‌ಗಳನ್ನು ಕಬಳಿಸಿದರು. ಈ ಮೂಲಕ ಏಕದಿನ ವಿಶ್ವಕಪ್​ನಲ್ಲಿ ವೇಗವಾಗಿ 50 ವಿಕೆಟ್‌ಗಳನ್ನು ಪೂರೈಸಿದ ಆಟಗಾರರ ಸಾಲಿಗೆ ಸೇರಿಕೊಂಡಿದ್ದಾರೆ. ಆದಾಗ್ಯೂ, ಅಹಮದಾಬಾದ್‌ನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಭಾರತ ಆರು ವಿಕೆಟ್‌ಗಳಿಂದ ಆಸ್ಟ್ರೇಲಿಯಾ ವಿರುದ್ಧ ಸೋತಿತು. ನಿರ್ಣಾಯಕ ಪಂದ್ಯದಲ್ಲಿ ಶಮಿ ಅವರು ತಮ್ಮ ಫಾರ್ಮ್ ಮುಂದುವರಿಸಲು ಸಾಧ್ಯವಾಗದೆ ನಿರಾಶೆಗೊಂಡರು.

    ವಿಶ್ವಕಪ್​ ಸೋಲಿನ ಆಘಾತ ಒಂದು ಕಡೆಯಾದರೆ, ಇಡೀ ಟೂರ್ನಮೆಂಟ್​ನಲ್ಲಿ ಮಾಜಿ ಪಾಕಿಸ್ತಾನ ಕ್ರಿಕೆಟಿಗರು ಮಾಡಿದ ಕೆಲ ಕಾಮೆಂಟ್​ಗಳು ಶಮಿ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಭಾರತದ ಬೌರಲ್​ಗಳಿಗೆ ಬೇರೆ ಚೆಂಡನ್ನು ನೀಡಲಾಗುತ್ತಿದೆ ಎಂಬ ಪಾಕಿಸ್ತಾನದ ಮಾಜಿ ಬ್ಯಾಟರ್​ ಹಸನ್​ ರಾಜಾ ಆರೋಪಕ್ಕೆ ಶಮಿ ಪ್ರತಿಕ್ರಿಯೆ ನೀಡಿದ್ದು, ಸರಿಯಾಗಿ ತಿರುಗೇಟು ನೀಡಿದ್ದಾರೆ.

    ನಾನು ಮೊದಲ ನಾಲ್ಕು ಪಂದ್ಯಗಳಲ್ಲಿ ಆಡಲು ಸಾಧ್ಯವಾಗಲಿಲ್ಲ. ತಂಡಕ್ಕೆ ಸೇರಿಕೊಂಡಾಗ ನಾನು ಐದು ವಿಕೆಟ್​ಗಳನ್ನು ಪಡೆದೆ. ನಂತರದ ಪಂದ್ಯದಲ್ಲಿ ನಾಲ್ಕು ವಿಕೆಟ್​ ಕಬಳಿಸಿದೆ. ಆ ಬಳಿಕ ಮತ್ತೆ ಐದು ವಿಕೆಟ್​ಗಳನ್ನು ಪಡೆದೆ. ಪಾಕಿಸ್ತಾನದ ಕೆಲವು ಆಟಗಾರರಿಗೆ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಸ್ಪೋರ್ಟ್ಸ್​ವಿಯರ್​ ಬ್ರ್ಯಾಂಡ್​ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

    ನೀವು ಇತರರ ಯಶಸ್ಸನ್ನು ಆನಂದಿಸಲು ಕಲಿತರೆ ನೀವು ಉತ್ತಮ ಆಟಗಾರರಾಗಬಹುದು. ಆದರೆ, ಪಾಕಿಸ್ತಾನದ ಕೆಲವು ಆಟಗಾರರು ತಮಗಿಂತ ಉತ್ತಮರು ಯಾರೂ ಇಲ್ಲ ಎಂದು ಭಾವಿಸುತ್ತಾರೆ. ಅದಕ್ಕಾಗಿಯೇ ಅವರು ಈ ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆದರೆ, ಇಂತಹ ಕಾಮೆಂಟ್​​ಗಳಿಂದ ಅವರಿಗೆ ಯಾವುದೇ ಲಾಭವಾಗಿಲ್ಲ. ಬದಲಾಗಿ ಅವರಿಗೆ ಹಿನ್ನಡೆ ಉಂಟಾಗಿದೆ ಎಂದು ಹೇಳಿದರು.

    ಅವರ ಮನಸ್ಸಿನಲ್ಲಿರುವುದು ನಾವೇ ಉತ್ತಮ ಎಂಬುದು. ಆದರೆ, ಅಗತ್ಯವಿದ್ದಾಗ ನಿರ್ವಹಿಸುವವನು ಮಾತ್ರ ಉತ್ತಮ. ಭಾರತೀಯ ಬೌಲರ್‌ಗಳು ವಿಭಿನ್ನ ಬಣ್ಣದ ಚೆಂಡು, ವಿಭಿನ್ನ ಕಂಪನಿಯ ಚೆಂಡನ್ನು ಪಡೆಯುತ್ತಿದ್ದಾರೆ ಎಂದು ವಿವಾದ ಸೃಷ್ಟಿಸುವುದನ್ನು ನೀವು ಮುಂದುವರಿಸುತ್ತಿದ್ದೀರಿ. ಮೊದಲು ನಿಮ್ಮನ್ನು ನೀವು ಸುಧಾರಿಸಿಕೊಳ್ಳಿ ಗೆಳೆಯರೇ ಎಂದು ಶಮಿ ತಿರುಗೇಟು ನೀಡಿದ್ದಾರೆ.

    ಭಾರತೀಯ ಬೌಲರ್​ಗಳಿಗೆ ಬೇರೆ ಚೆಂಡನ್ನು ನೀಡುತ್ತಿದ್ದಾರೆ ಎಂಬ ಆರೋಪವನ್ನು ಸ್ವತಃ ವಾಸಿಮ್​ ಅಕ್ರಂ ಅವರ ಅಲ್ಲಗೆಳೆದಿದ್ದಾರೆ. ಎರಡು ತಂಡದ ಜತೆ ಅಪೈರ್​ ಸಮಾಲೋಚನೆಯೊಂದಿಗೆ ಯಾವ ರೀತಿ ಚೆಂಡನ್ನು ಆಯ್ಕೆ ಮಾಡುತ್ತಾರೆ ಎಂಬ ಪ್ರಕ್ರಿಯೆಯನ್ನು ವಿವರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಶಮಿ, ಅಕ್ರಮ್​ ಭಾಯ್​ ಅವರೇ ಸ್ವತಂ ಚೆಂಡು ಆಯ್ಕೆಯ ಬಗ್ಗೆ ವಿವರಣೆ ನೀಡಿದ್ದಾರೆ. ನೀವೊಬ್ಬ ಆಟಗಾರನೆಂದು ಈಗಲೂ ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ. ನೀವು ಮಾಡುವ ಕಾಮೆಂಟ್​ಗಳಿಗೆ ಜನರು ನಗುವುದನ್ನು ಬಿಟ್ಟು ಬೇರೆ ಏನು ಮಾಡಲು ಸಾಧ್ಯವಿಲ್ಲ ಎಂದು ನನಗನಿಸುತ್ತದೆ ಎಂದು ಶಮಿ ತಿಳಿಸಿದರು. (ಏಜೆನ್ಸೀಸ್​)

    ಪಿಎಸ್​ಐ ನೇಮಕಾತಿ ಹಗರಣ: ಡಿ.23ಕ್ಕೆ 545 PSI ಹುದ್ದೆಗಳಿಗೆ ಮರು ಪರೀಕ್ಷೆ

    ‘ಗಿಲ್​ ಜೊತೆಗಿನ ಫೋಟೋ ವೈರಲ್​: ‘ಡೀಪ್‌ಫೇಕ್’ ಎಂದು ನೋವು ತೋಡಿಕೊಂಡ ಸಾರಾ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts