More

    ಆರ್​ಸಿಬಿ ಹೆಸರಿನಲ್ಲಿ ಮಾರ್ಪಾಡು?ಬೆಂಗಳೂರು ಆಗಲಿದೆ ಬ್ಯಾಂಗಲೋರ್ !

    ಬೆಂಗಳೂರು: ಐಪಿಎಲ್ ಆರಂಭಗೊಂಡು 12 ವರ್ಷಗಳೇ ಕಳೆದಿದ್ದರೂ ಒಮ್ಮೆಯೂ ಪ್ರಶಸ್ತಿಗೆ ಮುತ್ತಿಕ್ಕದಿರುವ ಆರ್​ಸಿಬಿ ತಂಡ ಹೆಸರಿನಲ್ಲಿ ಸಣ್ಣ ಮಾರ್ಪಾಡು ಮಾಡಿಕೊಳ್ಳುವ ಮೂಲಕ ಅದೃಷ್ಟ ಖುಲಾಯಿಸುವ ಮತ್ತು ರಾಜ್ಯದ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುವ ನಿರೀಕ್ಷೆಯಲ್ಲಿದೆ. ಇಂಗ್ಲಿಷ್​ನಲ್ಲಿ ‘ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್’ (BANGALORE) ಎಂದಿರುವ ಹೆಸರನ್ನು ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ (BENGALURU) ಎಂದು ಬದಲಾಯಿಸಿಕೊಳ್ಳಲು ಆರ್​ಸಿಬಿ ಫ್ರಾಂಚೈಸಿ ಮುಂದಾಗಿದೆ. ಇದರಿಂದ ಆರ್​ಸಿಬಿ ಎಂಬ ಶಾರ್ಟ್​ನೇಮ್ ಉಳಿಸಿಕೊಳ್ಳಲಿದೆ.

    ಆರ್​ಸಿಬಿ ತಂಡದ ಅಧಿಕೃತ ಟ್ವಿಟರ್ ಸಹಿತ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಸದ್ಯ ‘ರಾಯಲ್ ಚಾಲೆಂಜರ್ಸ್’ ಎಂದಷ್ಟೇ ನಮೂದಿಸಲಾಗಿದ್ದು, ಹಾಲಿ ಲಾಂಛನವನ್ನೂ ತೆಗೆದು ಹಾಕಲಾಗಿದೆ. ಹೆಸರಿನ ಮಾರ್ಪಾಡಿನೊಂದಿಗೆ ಲಾಂಛನವೂ ಬದಲಾಗುವ ಸಾಧ್ಯತೆ ಇದೆ. ಫೆಬ್ರವರಿ 16ರಂದು ಆರ್​ಸಿಬಿ ದೊಡ್ಡ ಘೋಷಣೆಯೊಂದನ್ನು ಮಾಡಲಿದೆ ಎಂದು ಈಗಾಗಲೆ ಪ್ರಕಟಿಸಿರುವುದರಿಂದ ಅಂದೇ ತಂಡದ ಹೆಸರು ಮಾರ್ಪಾಡು ಅಧಿಕೃತವಾಗುವ ನಿರೀಕ್ಷೆ ಇದೆ. ಉದ್ಯಾನನಗರಿಯ ಹೆಸರನ್ನು ಇಂಗ್ಲಿಷ್​ನಲ್ಲಿ, ‘ಬ್ಯಾಂಗಲೋರ್’ ಎಂದು ಇದ್ದುದನ್ನು 2014ರ ನವೆಂಬರ್ 1ರಂದು ‘ಬೆಂಗಳೂರು’ ಎಂದು ಸರ್ಕಾರ ಅಧಿಕೃತವಾಗಿ ಬದಲಾಯಿಸಿದ್ದರೂ, ಆರ್​ಸಿಬಿ ಬದಲಾವಣೆ ಮಾಡಿರಲಿಲ್ಲ.

    ಆರ್​ಸಿಬಿಯ ಈ ದೊಡ್ಡ ಘೋಷಣೆ ನಾಯಕತ್ವ ಬದಲಾವಣೆ ಆಗಿರ ಬಹುದೇ ಎಂಬ ಕೆಲ ಅನುಮಾನಗಳನ್ನು ಹೊಸ ಕೋಚ್ ಮೈಕ್ ಹೆಸ್ಸನ್ ತಳ್ಳಿಹಾಕಿದ್ದು, ಮುಂದಿನ ಆವೃತ್ತಿಯಲ್ಲೂ ವಿರಾಟ್ ಕೊಹ್ಲಿ ಅವರೇ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts