More

    ಮೊಬಿರ್​ ತೂಗುಸೇತುವೆಗೆ ಭೇಟಿ ನೀಡಲಿರುವ ಮೋದಿ; ನಾನು ಏಕ್ತಾ ನಗರದಲ್ಲಿದ್ದರೂ ಮನಸ್ಸು ಸಂತ್ರಸ್ತರೊಂದಿಗಿದೆ ಎಂದ ಪ್ರಧಾನಿ…

    ಅಹಮದಾಬಾದ್​: 141 ಜನರ ಬಲಿ ಪಡೆದಿರುವ ಮೋರ್ಬಿ ಸೇತುವೆ ದುರಂತದ ಸ್ಥಳಕ್ಕೆ ನಾಳೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ.

    ಏಳು ತಿಂಗಳುಗಳಿಂದ ದುರಸ್ತಿ ಮಾಡಲು ಮೊಬಿರ್ ಸೇತುವೆಯನ್ನು ಮುಚ್ಚಲಾಗಿತ್ತು. ಸೇತುವೆಯನ್ನು ಅ.26ರಂದು ಗುಜರಾತಿ ಹೊಸವರ್ಷದ ಪ್ರಯುಕ್ತ ತೆರೆಯಲಾಗಿತ್ತು. ಆದರೆ ಅಧಿಕಾರಿಗಳಿಂದ ಫಿಟ್​ನೆಸ್ ಪ್ರಮಾಣ ಪತ್ರವನ್ನು ಪಡೆದಿರಲಿಲ್ಲ ಎಂದು ಹೇಳಲಾಗುತ್ತಿದೆ.

    ಉಕ್ಕಿನ ಮನುಷ್ಯ ವಲ್ಲಭ್​ ಭಾಯ್​ ಪಟೇಲ್​ ಹುಟ್ಟು ಹಬ್ಬದ ಸಂದರ್ಭದಲ್ಲಿ ಏಕತಾ ಪ್ರತಿಮೆ ಬಳಿ ಮಾತನಾಡಿದ ಪ್ರಧಾನಿ ‘ನಾನು ಎಕ್ತಾ ನಗರದಲ್ಲಿದ್ದೇನೆ. ಆದರೆ ನನ್ನ ಮನಸ್ಸು ಮೊಬಿರ್​ ಸಂತ್ರಸ್ತರೊಂದಿಗೆ ಇದೆ. ನನ್ನ ಜೀವನದಲ್ಲಿ ಅಪರೂಪಕ್ಕೆ ಇಂತಹ ನೋವನ್ನು ಅನುಭವಿಸಿದ್ದೇನೆ. ಒಂದು ಕಡೆ ದುಃಖ ತುಂಬಿದೆ, ಇನ್ನೊಂದು ಕಡೆ ಕರ್ತವ್ಯ ಇದೆ’ ಎಂದರು.

    ಮೊಬಿರ್ ಜಿಲ್ಲೆಯ ಮಚ್ಚು ನದಿಗೆ ನಿರ್ಮಿಸಲಾಗಿದ್ದ ತೂಗುಸೇತುವೆ ಮೇಲೆ ಛತ್ ಪೂಜೆಯ ನಿಮಿತ್ತ ಕೆಲವು ವಿಧಿವಿಧಾನಗಳನ್ನು ನೆರವೇರಿಸಲು ನದಿ ತೀರದಲ್ಲಿ ಜಮಾಯಿಸಿದ್ದರು. ಭಾನುವಾರ ಸಂಜೆ 6.30ರಲ್ಲಿ ಪ್ರವಾಸಿಗರು ಸೇರಿ 500ಕ್ಕೂ ಅಧಿಕ ಮಂದಿ ಸೇತುವೆ ಮೇಲೆ ನಿಂತಿದ್ದರು. ಆಗ ಸೇತುವೆ ಕುಸಿದಿದ್ದು, 100ಕ್ಕೂ ಹೆಚ್ಚು ಮಂದಿ ಜಲಸಮಾಧಿಯಾಗಿದ್ದಾರೆ. ಆರಂಭದಲ್ಲಿ ಸಾವಿನ ಸಂಖ್ಯೆ 30 ಎಂದು ಅಂದಾಜಿಸಲಾಗಿತ್ತು. ಸೋಮವಾರ ಮುಂಜಾನೆಯ ವರದಿ ಪ್ರಕಾರ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಕೆಲವರು ಈಜಿ ದಡ ಸೇರಿದ್ದಾರೆ, ಕಾರ್ಯಾಚರಣೆ ನಡೆಸಿ 117 ಮಂದಿಯನ್ನು ರಕ್ಷಿಸಲಾಗಿದ್ದು, 19 ಮಂದಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts