More

    ಇದು 5ಜಿ ಯುಗ, ಅಪರಾಧಿಗಳಿಗಿಂತ ನಾವು ಹತ್ತು ಹೆಜ್ಜೆ ಮುಂದಿರಬೇಕು: ಸ್ಮಾರ್ಟ್​ ಕಾನೂನು ವ್ಯವಸ್ಥೆ ತರ್ತಾರಾ ಪ್ರಧಾನಿ ಮೋದಿ?

    ನವದೆಹಲಿ: ಇಂದು (ಅ.28) ನಡೆದ ಗೃಹಮಂತ್ರಿಗಳ ಚಿಂತನ ಶಿಬಿರದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ‘ಅಪರಾಧಗಳು ನಡೆಯುವ ರೀತಿ ಈಗ ಬದಲಾಗುತ್ತಿವೆ. ಈ 5ಜಿ ಜಗತ್ತಿನಲ್ಲಿ ನಾವು ಇನ್ನಷ್ಟು ಎಚ್ಚರಿಕೆಯನ್ನು ವಹಿಸಬೇಕು’ ಎಂದರು.

    ‘ಹೊಸ ಯುಗದ ತಂತ್ರಜ್ಞಾನವನ್ನು ಬಳಸಿಕೊಂಡು ಫೇಶಿಯಲ್ ರೆಕಗ್ನಿಶನ್​, ಆಟೋಮ್ಯಾಟಿಕ್​ ನಂಬರ್ ಪ್ಲೇಟ್​ ರಕಗ್ನಿಶನ್​, ಡ್ರೋನ್​ ಹಾಗೂ ಸಿಸಿಟಿವಿ ತಂತ್ರಜ್ಞಾನ ಬಹಳಷ್ಟು ಅಭಿವೃದ್ಧಿ ಆಗಲಿದೆ’ ಎಂದು ವಿಡಿಯೋ ಕಾನ್ಫರೆನ್ಸ್​ ಮೂಲಕ ಮೋದಿ ಮಾಹಿತಿ ನೀಡಿದರು.

    ‘ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ ಜಾಗೃತಿಯೂ ಅವಶ್ಯಕ. ಭಾರತದ ಕಾನೂನು ವ್ಯವಸ್ಥೆಯನ್ನು ನಾವು ಸ್ಮಾರ್ಟ್​ ಮಾಡಬೇಕು. 5ಜಿ ತಂತ್ರಜ್ಞಾನ ಅಪರಾಧಗಳನ್ನು ತಡೆಯುವುದು ಮಾತ್ರವಲ್ಲ, ಪತ್ತೆದಾರಿಕೆಯಲ್ಲೂ ನೆರವಾಗಲಿದೆ’ ಎಂದು 5ಜಿಯ ಮಹತ್ವವನ್ನು ಪ್ರಧಾನಿ ಮೋದಿ ತಿಳಿಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts