More

    ನನಗೆ ಕುರ್ತಾ ಹೊಲಿದು ಕೊಡ್ಬೋದಾ? ಈಗ ಫುಲ್​ ಖುಷಿನಾ?: ಮೋದಿ ಹೀಗೆ ಕೇಳಿದ್ದಕ್ಕೂ ಕಾರಣವಿದೆ..

    ಮೈಸೂರು: ಎರಡು ದಿನಗಳ ಪ್ರವಾಸದ ಮೇರೆಗೆ ಕರ್ನಾಟಕಕ್ಕೆ ಬಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮೊದಲನೇ ದಿನದ ಮೊದಲರ್ಧ ದಿನ ಬೆಂಗಳೂರಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಸಂಜೆಯ ಸುಮಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ್ದಾರೆ.

    ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಅಖಿಲ ಭಾರತ ವಾಕ್​ ಮತ್ತು ಶ್ರವಣ ಸಂಸ್ಥೆಯ ಶ್ರೇಷ್ಠತಾ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ ಬಳಿಕ ಪ್ರಧಾನಿಯವರು ಕೇಂದ್ರದ ಯೋಜನೆಗಳ ಫಲಾನುಭವಿಗಳ ಪೈಕಿ ಆಯ್ದ 20 ಮಂದಿಯೊಂದಿಗೆ ಸಂವಾದ ನಡೆಸಿದರು.

    ಚಾಮರಾಜನಗರದ ನಾಗರಾಜ ಎನ್ನುವವರು ಆಯುಷ್ಮಾನ್ ಭಾರತ ಯೋಜನೆಯಿಂದ ಪ್ರಯೋಜನ ಆಯಿತು ಎಂದರು. ಯಾವ ರೀತಿ, ಏನು ಪ್ರಯೋಜನ ಸಿಕ್ಕಿತು ಎಂದು ಮೋದಿ ಕೇಳಿದ್ದಕ್ಕೆ, ನನ್ನ 8 ವರ್ಷದ ಮಗನಿಗೆ ಇಎನ್​ಟಿ ಸಮಸ್ಯೆ ಆಗಿದ್ದಾಗ 70 ಸಾವಿರ ರೂ. ಚಿಕಿತ್ಸೆಗೆ ಸಿಕ್ಕಿತು ಎಂದರು.

    ಮಂಡ್ಯದ ಪಾಂಡವಪುರದ ನಿತೀಶ್​ ಕುಮಾರ್ ಎಂಬವರು ತಮ್ಮ ಆರೋಗ್ಯ ಸಮಸ್ಯೆ ಕುರಿತು ಪ್ರಧಾನಿ ಬಳಿ ಹೇಳಿಕೊಂಡರು. ‘ನನಗೆ ಕೆಳಗಿನ ದವಡೆ ಸ್ವಲ್ಪ ಮುಂದಕ್ಕೆ ಬಂದು ಸಮಸ್ಯೆ ಆಗಿತ್ತು. ಆರ್​ಬಿಎಸ್​ಕೆ ಯೋಜನೆ ಮೂಲಕ ಚಿಕಿತ್ಸೆ ಪಡೆದೆ’ ಎಂದರು. ‘ಈಗ ಪೂರ್ತಿ ಸರಿ ಹೋಯ್ತಾ?’ ಎಂದು ಮೋದಿ ಕೇಳಿದ್ದಕ್ಕೆ ಅವರು ‘ಹೌದು’ ಎಂದರು. ನಂತರ ‘ಈಗ ಫುಲ್ ಖುಷಿಯಾ?’ ಎಂದು ಮೋದಿ ಕೇಳಿದಾಗ ‘ಹೌದು’ ಎಂದು ಉತ್ತರಿಸಿದ ನಿತೀಶ್ ಮುಖದಲ್ಲಿ ಭಾರಿ ಸಂಭ್ರಮವೇ ಕಾಣಿಸಿತು. ಗುಂಡ್ಲುಪೇಟೆಯ ರಾಜಪ್ಪ ಎಂಬವರು ಜಲಜೀವನ್ ಯೋಜನೆಯಿಂದ ನನಗೆ ನೀರು ಸಿಕ್ಕಿದೆ ಎಂಬುದಾಗಿ ಹೇಳಿಕೊಂಡರು.

    ಚಾಮರಾಜನಗರದ ಅಂಬಿಕಾ ಎಂಬಾಕೆ ನಾನು ಕೇಂದ್ರದಿಂದ ಸುಮಾರು ಹತ್ತು ಯೋಜನೆಗಳ ಫಲಾನುಭವ ಪಡೆದಿದ್ದೇನೆ, ಆ ಪೈಕಿ ಪ್ರಮುಖವಾದದ್ದು ಹೊಲಿಗೆ ಎಂದರು. ‘ಒಬ್ಬರೇ ಹೊಲಿಯುತ್ತಿದ್ದೀರಾ, ಬೇರೆ ಯಾರಾದರೂ ಜತೆಗಿದ್ದಾರಾ?’ ಎಂದು ಪ್ರಧಾನಿ ಕೇಳಿದ್ದಕ್ಕೆ, ‘ನಾನು ಹಾಗೂ ಪತಿ ಸೇರಿ ಹೊಲಿಗೆ ನಡೆಸುತ್ತಿದ್ದೇವೆ’ ಎಂದರು. ‘ಎಷ್ಟು ವಿದ್ಯಾಭ್ಯಾಸ ಮಾಡಿದ್ದೀರಿ, ಎಲ್ಲಿ ಹೊಲಿಗೆ ಕಲಿತಿರಿ?’ ಎಂದು ಮೋದಿ ಕೇಳಿದಾಗ ‘ನಾನು ಪಿಯುಸಿ ಓದಿದ್ದೇನೆ, ನಮ್ಮ ಊರಲ್ಲೇ ಹೊಲಿಗೆ ಕಲಿತೆ’ ಎಂದರು. ಆಗ ಮೋದಿ ‘ನನಗೆ ನೀವು ಕುರ್ತಾ ಹೊಲಿದು ಕೊಡ್ಬೋದಾ?’ ಎಂದು ಕೇಳಿದರು. ಆಗ ಅಂಬಿಕಾ ಎಕ್ಸೈಟ್ ಆಗಿ, ಏನು ಹೇಳಬೇಕೆಂದು ತೋಚದೆ ‘ಈ ಭೇಟಿಯನ್ನು ನಾನು ಯಾವತ್ತಿಗೂ ಮರೆಯಲ್ಲ’ ಎಂದರು.

    ಉಳಿದ ಫಲಾನುಭವಿಗಳು ಕೂಡ ಕೇಂದ್ರದ ಯಾವ ಯೋಜನೆಯ ಫಲಾನುಭವ ಸಿಕ್ಕಿತು, ತಮಗೆ ಯಾವ ಯೋಜನೆಯಿಂದ ಪ್ರಯೋಜನವಾಯಿತು ಎಂಬುದನ್ನು ಹೇಳಿಕೊಂಡರು. ಬಹುತೇಕ ಎಲ್ಲರೂ ಕನ್ನಡದಲ್ಲೇ ತಮ್ಮ ಅನಿಸಿಕೆಗಳನ್ನು ಹೇಳಿಕೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಹಿಂದಿ/ಇಂಗ್ಲಿಷ್​ಗೆ ತರ್ಜುಮೆ ಮಾಡಿ ಪ್ರಧಾನಿಗೆ ತಿಳಿಸಿದರು. ಪ್ರಧಾನಿ ಎಲ್ಲರ ಜತೆ ಹಿಂದಿಯಲ್ಲೇ ಸಂವಾದಿಸಿದರು.

    ಮತ್ತೊಂದು ಭೀಕರ ಅಪಘಾತ; ಅಪ್ಪನ ದಿನದಂದೇ ಇನ್ನೊಂದು ತಂದೆ-ಮಗನ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts