More

    ಆಧುನಿಕ ಶಿಕ್ಷಣ ಪದ್ಧತಿ ಹೆಚ್ಚು ಪರಿಣಾಮಕಾರಿ

    ತಾಂಬಾ: ಹಲವಾರು ತಲೆಮಾರುಗಳಿಂದ ಶಿಕ್ಷಕರಿಂದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ರವಾನಿಸಲಾಗುತ್ತದೆ. ಅದನ್ನು ಉಳಿಸಿಕೊಳ್ಳಲು ಕಂಠಪಾಠವನ್ನು ಮಾಡಿಸಲಾಗುತ್ತಿತ್ತು. ಇಂದಿನ ಆಧುನಿಕ ಶಿಕ್ಷಣ ಪದ್ಧತಿಯು ನಾಗಲೋಟದಿಂದ ಸಾಗುತ್ತಿದ್ದು, ಡಿಜಿಟಲ್ ಶಿಕ್ಷಣದಿಂದ ತರಗತಿಯಲ್ಲಿ ಪ್ರತಿವಿದ್ಯಾರ್ಥಿಯು ಹೆಚ್ಚು ಪರಿಣಾಮಕಾರಿಯಾಗಿ ಅರ್ಥೈಸಿಕೊಳ್ಳಲು ಸಹಾಯವಾಗುತ್ತದೆ ನಿವೃತ್ತ ಶಿಕ್ಷಕ ಜೆ.ಆರ್. ಪೂಜಾರಿ ಹೇಳಿದರು.

    ಗ್ರಾಮದ ಸಂಗನಬಸವೇಶ್ವರ ಪ್ರೌಢ ಶಾಲೆಯಲ್ಲಿ 1998-99ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಮಂಗಳವಾರ ಆಯೋಜಿಸಿದ್ದ ಗುರುವಂದನೆ ಹಾಗೂ ಪ್ರೊಜೆಕ್ಟರ್ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಇಂಡಿ ತಾಲೂಕಾ ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಧರಮೂರ್ತಿ ನಡುಗಡ್ಡಿ ಮಾತನಾಡಿ, ಡಿಜಿಟಲ್ ಶಿಕ್ಷಣ ಕೇವಲ ಪಟ್ಟಣಗಳಿಗೆ ಸೀಮಿತವಾಗಿರದೇ ಹಳ್ಳಿಗಳ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೂ ವಿಶ್ವ ದರ್ಜೆಯ ಶಿಕ್ಷಣ ದೊರಕುವಂತಾಗಬೇಕು ಎಂದರು.

    ಶಿಕ್ಷಕಿ ಪಿ.ಬಿ. ಕಾಡಯ್ಯನಮಠ ಮಾತನಾಡಿ, ಶಿಷ್ಯರಾದವರು ಗುರುವನ್ನು ಮೀರಿಸುವಂತಿರಬೇಕು ಅಂದಾಗ ಮಾತ್ರ ಕಲಿಸಿದ ಗುರುಗಳಿಗೆ ಸಂತೋಷವಾಗುತ್ತದೆ. ಶಿಕ್ಷಣದ ಜತೆಗೆ ಸಂಸ್ಕಾರವನ್ನು ಕಲಿಸಬೇಕು. ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡರೆ ಸಮಯವನ್ನು ಉಳಿಸಬಹುದು ಮತ್ತು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು ಎಂದರು.

    24ವರ್ಷಗಳ ನಂತರ ಗುರು-ಶಿಷ್ಯರು ಒಂದೆಡೆ ಸೇರಿ ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿದರು. ಅಗಲಿದ ಶಿಕ್ಷಕರು ಹಾಗೂ ತಮ್ಮ ಸಹಪಾಠಿಗಳನ್ನು ಸ್ಮರಿಸಿದರು.

    ಶಾಲೆಯ ಅಧ್ಯಕ್ಷ ಐ.ಬಿ. ಕಿಣಗಿ, ನಿರ್ದೇಶಕರಾದ ಮಲಕಪ್ಪ ಸೋಮನಿಂಗ, ಪರಶುರಾಮ ಪಾಟೀಲ, ಬಾಬು ಕನೋಜಿ, ಪ್ರಾಚಾರ್ಯ ಸಿ.ಎಸ್. ಕಣಮೇಶ್ವರ, ನಿವೃತ್ತ ಶಿಕ್ಷಕ ಎಸ್.ಸಿ. ನಿಂಬಾಳ, ಶಿಕ್ಷಕರಾದ ಜಿ.ಎಸ್. ಹಿರೇಮಠ, ಸಿದ್ದು ಹಾವಿನಾಳ ಹಾಗೂ 1998-99ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts