More

    ಮೈಸೂರಿನಲ್ಲಿ ಮೇ 23 ರಿಂದ 26ರವರೆಗೆ ಸಾಧಾರಣ ಮಳೆ ಸಾಧ್ಯತೆ

    ಮೈಸೂರು: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮತ್ತಷ್ಟು ದಿನ ಮುಂದುವರೆಯಲಿದ್ದು, ಮೇ 23 ರಿಂದ 26ರವರೆಗೆ ಜಿಲ್ಲೆಯಲ್ಲಿ ಸಾಧಾರಣ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಮೇ 23 ರಂದು ಸರಾಸರಿ 25 ಮಿ.ಮೀ., 24 ರಂದು 28 ಮಿ.ಮೀ., 25 ರಂದು 16 ಮಿ.ಮೀ., 26 ರಂದು 8 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಕನಿಷ್ಠ ಉಷ್ಣಾಂಶ 20 ರಿಂದ 21, ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ.

    ತಾಲೂಕುವಾರು ವಿವರ: ಎಚ್.ಡಿ. ಕೋಟೆಯಲ್ಲಿ ಮೇ 23 ರಂದು 0.9 ಮಿ.ಮೀ., 24 ರಂದು 7.5 ಮಿ.ಮೀ., 25 ರಂದು 2.1 ಮಿ.ಮೀ., 26 ರಂದು 0.7 ಮಿ.ಮೀ., ಹುಣಸೂರು ತಾಲೂಕಿನಲ್ಲಿ 23 ರಂದು 0.1 ಮಿ.ಮೀ., 24 ರಂದು 8.4 ಮಿ.ಮೀ., 25 ರಂದು 2.7 ಮಿ.ಮೀ., 26 ರಂದು 1.2 ಮಿ.ಮೀ., ಕೆ.ಆರ್. ನಗರದಲ್ಲಿ 23 ರಂದು 0.1 ಮಿ.ಮೀ., 24 ರಂದು 6.2 ಮಿ.ಮಿ., 25 ರಂದು 2.5 ಮಿ.ಮೀ., 26 ರಂದು 0.1 ಮಿ.ಮೀ. ಮಳೆಯಾಗು ಸಾಧ್ಯತೆ ಇದೆ.

    ನಂಜನಗೂಡಿನಲ್ಲಿ ಮೇ 24 ರಂದು 6.6 ಮಿ.ಮೀ., 25 ರಂದು 3 ಮಿ.ಮೀ., 26 ರಂದು 0.4 ಮಿ.ಮೀ. ಮಳೆಯಾಗುವ ಸಾಧ್ಯತೆ ಇದ್ದು, ಮೇ 23 ರಂದು ಮಳೆಯ ಸಾಧ್ಯತೆ ಇಲ್ಲ. ಪಿರಿಯಾಪಟ್ಟಣದಲ್ಲಿ 23 ರಂದು 0.3 ಮಿ.ಮೀ., 24 ರಂದು 1.1 ಮಿ.ಮೀ., 25 ರಂದು 4.9 ಮಿ.ಮೀ., 26 ರಂದು 8.3 ಮಿ.ಮೀ., ತಿ.ನರಸೀಪುರ ತಾಲೂಕಿನಲ್ಲಿ 24 ರಂದು 4.1 ಮಿ.ಮೀ., 25 ರಂದು 2.1 ಮಿ.ಮೀ. ಮಳೆಯಾಗುವ ಸಾಧ್ಯತೆ ಇದ್ದು, ಮೇ 23 ಮತ್ತು 26 ರಂದು ಮಳೆಯ ಸಾಧ್ಯತೆ ಇಲ್ಲ. ಮೈಸೂರಿನಲ್ಲಿ ಮೇ 24 ರಂದು 5.9 ಮಿ.ಮೀ., 25 ರಂದು 4.4 ಮಿ.ಮೀ. ಮಳೆಯಾಗುವ ಸಾಧ್ಯತೆ ಇದ್ದು, ಮೇ 23 ಮತ್ತು 26 ರಂದು ಮಳೆಯ ಸಾಧ್ಯತೆ ಇಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts