More

    ನಿಜವಾದ ಮೀನನ್ನೇ ಧರಿಸಿಕೊಂಡು ಮಹಿಳೆಯ ಮರ್ಮೇಡ್​​ ರ‍್ಯಾಂಪ್ ವಾಕ್​​; ಫ್ಯಾಷನ್​ ಐಕಾನ್​​ ಉರ್ಫಿ ಪ್ರತಿಕ್ರಿಯೆ..!

    ಪ್ರಪಂಚದಾದ್ಯಂತದ ಫ್ಯಾಷನ್ ಶೋಗಳನ್ನ ವಿಭಿನ್ನ ಕಾನ್ಸೆಪ್ಟ್​​ ಮತ್ತು ಹೊಸ ಕ್ರಿಯೆಟಿವಿಟಿಯೊಂದಿಗೆ ಮಾಡಲಾಗುತ್ತೆ. ಅದರಲ್ಲೂ ಉಡುಪಿನ ವಿನ್ಯಾಸಕ್ಕೆ ವಿಶೇಷ ಮಹತ್ವ ನೀಡಲಾಗುತ್ತೆ. ಕೆಲ ಡಿಸೈನ್​ ಮತ್ತು ಥೀಮ್ಡ್​​​ ಡ್ರೆಸ್​​ಗಳಂತೂ ನೋಡುಗರ ಹುಬ್ಬೇರಿಸುವಂತಿರುತ್ತೆ.
    ಅಂತೆಯೇ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ರೂಪದರ್ಶಿಯೊಬ್ಬರು ಜೀವಂತ ಮೀನನ್ನೇ ಧರಿಸಿ ಮರ್ಮೇಡ್​​​ನಂತೆ ರ‍್ಯಾಂಪ್ ಮೇಲೆ ಚಲಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಈಕೆ ಈ ರೀತಿಯಾಗಿ ಜೀವಂತ ಮೀನನ್ನೇ ಬಟ್ಟೆ ಮಾಡಿಕೊಂಡು ಧರಿಸಿರೋದಕ್ಕೆ ನೆಟ್ಟಿಗರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ.


    ವಿಡಿಯೋದಲ್ಲಿ ಏನಿದೆ?
    ರೂಪದರ್ಶಿಯ ಮೇಕ್​​ ಅಪ್​ ಆರ್ಟಿಸ್ಟ್​​​ ಪ್ರೀತಿ ಈ ವಿಡಿಯೋವನ್ನ ಇನ್ಸ್​​​ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ರೂಪದರ್ಶಿ ಬಿಳಿ ಉಡುಪನ್ನ ಧರಿಸಿದ್ದು, ಹೊಟ್ಟೆಯ ಬಳಿ ಫಿಶ್​​ ಬೌಲನ್ನ ಇರಿಸಿಕೊಂಡಿದ್ದಾಳೆ. ಈಕೆ ಧರಿಸಿದ ಬಟ್ಟೆಗೆ ಸಂಪೂರ್ಣವಾಗಿ ಮರ್ಮೇಡ್​​​ ಲುಕ್​ ನೀಡಲಾಗಿದೆ. ಪ್ಲಾಸ್ಟಿಕ್​ ಚೀಲದಲ್ಲಿ ಹೊಟ್ಟೆಯ ಮೇಲೆ ಈ ಮೀನುಗಳನ್ನ ಇರಿಸಿಕೊಂಡು ಈಕೆ ಪೋಸ್​​ ನೀಡಿದ್ದಾಳೆ.


    ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಪ್ರಾಣಿಗಳನ್ನು ಫ್ಯಾಷನ್ ಪರಿಕರಗಳಾಗಿ ಈ ರೀತಿ ಬಳಸಿಕೊಂಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಓರ್ವ ಬಳಕೆದಾರರು ಎಲ್ಲದರಲ್ಲೂ ಪ್ರಾಣಿಗಳ ಬಳಕೆ ಮಾಡೋದನ್ನ ನಿಲ್ಲಿಸಿ ಎಂದು ಬರೆದಿದ್ದಾರೆ.
    ಮತ್ತಷ್ಟು ಬಳಕೆದಾರರು ಮೀನಿನ ಯೋಗಕ್ಷೇಮದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ಸಣ್ಣ ಜಾಗದಲ್ಲಿ ಇಷ್ಟು ಮೀನುಗಳನ್ನು ಇರಿಸಬಾರದು. ಜತೆಗೆ ಈ ರೀತಿಯಾಗಿ ಮೀನುಗಳನ್ನ ಇರಿಸಿದ್ದಲ್ಲಿ ಅವುಗಳಿಗೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಸಿಗೋದಿಲ್ಲ. ಅವು ಸಾಯುವ ಸ್ಥಿತಿ ತಲುಪುತ್ತೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.


    ವಿಡಿಯೋಗೆ ಉರ್ಫಿ ಕಾಮೆಂಟ್​​:
    ಉರ್ಫಿ ಜಾವೇದ್ ಬಗ್ಗೆ ಪೀಠಿಕೆ ಕೊಡುವ ಅಗತ್ಯವೇ ಇಲ್ಲ. ಸೋಷಿಯಲ್ ಮೀಡಿಯಾ ಸೆನ್ಸೇಷನ್ ಈ ಹಿಂದಿ ಕಿರುತೆರೆ ನಟಿ. ಉರ್ಫಿ ಜಾವೇದ್ ಅವರು ತಮ್ಮ ಉಡುಗೆಗಳಿಂದಲೇ ಖ್ಯಾತಿ ಗಳಿಸಿದ ರೀತಿ ಮಾತ್ರ ತುಂಬಾ ವಿಶೇಷ. ಉರ್ಫಿ ಜಾವೇದ್ ಈ ಮರ್ಮೇಡ್​​​ ವಿಡಿಯೋಗೆ ಕಾಮೆಂಟ್​​ ಮಾಡಿದ್ದು, ಐ ಲವ್​ ಇಟ್​​ ಎಂದು ಬರೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts