More

    ನಾಳೆಯೇ ಮೇಲ್ಮನೆ ಚುನಾವಣೆ ಮತ ಎಣಿಕೆ; ಆದರೆ ಕೆಲವೆಡೆ ಫಲಿತಾಂಶ ಬೇಗ ಸಿಗೋದೇ ಅನುಮಾನ…

    ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆಯಲಿದೆ. ಆದರೆ ರಾಜ್ಯದ ಕೆಲವು ಸ್ಥಾನಗಳ ಫಲಿತಾಂಶ ವಿಳಂಬವಾಗುವ ಸಾಧ್ಯತೆಯೂ ಇದೆ.

    ಡಿ.10ರಂದು 20 ಕ್ಷೇತ್ರಗಳ 25 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಮಂಗಳವಾರ ಬೆಳಗ್ಗೆ 8ರಿಂದ ಮತ ಎಣಿಕೆ ಆರಂಭವಾಗಲಿದ್ದು, ಅಭ್ಯರ್ಥಿಗಳಿಗಷ್ಟೇ ಅಲ್ಲ, ರಾಜಕೀಯ ಪಕ್ಷಗಳಿಗೂ ಈ ಚುನಾವಣೆ ಫಲಿತಾಂಶ ಕಾತರತೆ ಹೆಚ್ಚಿಸಿದೆ.

    ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿರುವ ಅಭ್ಯರ್ಥಿಗಳ ಎದೆಯಲ್ಲಿ ನಡುಕ ಶುರುವಾಗಿದ್ದರೆ, ರಾಜಕೀಯ ಪಕ್ಷಗಳಿಗೆ ಗೆಲುವು ಪ್ರತಿಷ್ಠೆಯ ಪ್ರಶ್ನೆಯಾಗಿದೆ.
    51,450 ಪುರುಷ ಹಾಗೂ 55,136 ಮಹಿಳೆಯರು 1 ಇತರೆ ಸೇರಿದಂತೆ 1,06,587 ಮತದಾರರು ಈ ಚುನಾವಣೆಯಲ್ಲಿ ಮತ ಚಲಾಯಿಸಿದ್ದು, ಶೇ. 99.60 ದಾಖಲೆಯ ಮತದಾನವಾಗಿತ್ತು.

    ಇದನ್ನೂ ಓದಿ: ಹತ್ತು ವರ್ಷದ ಮಗನನ್ನು ಸಂಪ್​ಗೆ ಎಸೆದು ಕೊಂದು, ಆತ್ಮಹತ್ಯೆ ಮಾಡಿಕೊಂಡ ತಂದೆ…

    ಬೆಳಗಾವಿ, ಚಿತ್ರದುರ್ಗ, ಬೆಂಗಳೂರು ನಗರ, ದಕ್ಷಿಣ ಕನ್ನಡ, ಮಂಡ್ಯ, ಕೋಲಾರ ಮತ್ತು ಮೈಸೂರು ಜಿದ್ದಾಜಿದ್ದಿನ ಕಣವಾಗಿದ್ದವು. ಬಿಜೆಪಿ, ಕಾಂಗ್ರೆಸ್ ತಲಾ 20, ಜೆಡಿಎಸ್ 6 ಸೇರಿದಂತೆ ಒಟ್ಟು 90 ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಚುನಾವಣೆ ನಡೆದ ಎಲ್ಲ 20 ಜಿಲ್ಲೆಗಳಲ್ಲೂ ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

    ಇದನ್ನೂ ಓದಿ: ಬೆಂಗಳೂರಿನ ಹುಡುಗಿಯನ್ನು ಮದ್ವೆಯಾಗಿದ್ದ ನೈಜೀರಿಯಾ ಪ್ರಜೆ, ಬರೀ ಬಿಯರ್-ಸಿಗರೇಟ್​ ವಿಷಯಕ್ಕೇ ಕೊಲೆಯಾಗಿ ಹೋದ!

    ಪ್ರಾಶಸ್ತ್ಯ ಮತ ಎಣಿಕೆಯಾದರೆ ಫಲಿತಾಂಶ ವಿಳಂಬ: ಪ್ರಾಶಸ್ತ್ಯ ಮತಗಳ ವಿಭಿನ್ನ ಚುನಾವಣೆ ಇದಾಗಿರುವುದರಿಂದ ಮತ ಎಣಿಕೆ ವಿಳಂಬವಾಗುವ ಸಾಧ್ಯತೆಗಳಿವೆ. ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲ್ಲುವ ಸಂದರ್ಭಗಳಿದ್ದರೆ ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ. 2, 3 ಹೀಗೆ ಪ್ರಾಶಸ್ತ್ಯ ಮತ ಎಣಿಕೆ ನಡೆದರೆ ಹಲವು ಕಡೆ ತಡರಾತ್ರಿಯವರೆಗೆ ಎಣಿಕೆ ನಡೆಯುವ ಸಾಧ್ಯತೆಗಳಿವೆ. ದ್ವಿ-ಸದಸ್ಯ ಕ್ಷೇತ್ರಗಳಲ್ಲಂತೂ ಎರಡನೇ ಪ್ರಾಶಸ್ತ್ಯದ ಮತ ಎಣಿಕೆ ನಡೆಯಲೇಬೇಕಿರುವುದರಿಂದ ಮೈಸೂರು, ಬೆಳಗಾವಿ, ಧಾರವಾಡ, ದಕ್ಷಿಣಕನ್ನಡ, ವಿಜಯಪುರ ಜಿಲ್ಲೆಗಳ ಮತ ಎಣಿಕೆ ಸಾಮಾನ್ಯವಾಗಿ ವಿಳಂಬವಾಗುತ್ತದೆ.

    ವಿಶ್ವದಲ್ಲೇ ಇದು ಒಮಿಕ್ರಾನ್​ನಿಂದಾದ ಮೊದಲ ಸಾವು; ರೂಪಾಂತರಿ ವೈರಸ್​ ಇದೀಗ ಮತ್ತಷ್ಟು ಆತಂಕಕಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts