ವಿಶ್ವದಲ್ಲೇ ಇದು ಒಮಿಕ್ರಾನ್​ನಿಂದಾದ ಮೊದಲ ಸಾವು; ರೂಪಾಂತರಿ ವೈರಸ್​ ಇದೀಗ ಮತ್ತಷ್ಟು ಆತಂಕಕಾರಿ!

ಲಂಡನ್​: ರೂಪಾಂತರಿ ವೈರಸ್​ ಒಮಿಕ್ರಾನ್ ವ್ಯಾಪಕವಾಗಿ ಹರಡಿದರೂ ಅದರ ರೋಗಲಕ್ಷಣಗಳು ಗಂಭೀರವಲ್ಲ ಎಂಬ ಸಮಾಧಾನದ ಸಂಗತಿಗಳ ನಡುವೆಯೇ ಜಗತ್ತಿನಾದ್ಯಂತ ಒಮಿಕ್ರಾನ್​ ಸೋಂಕಿನ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ. ಈ ನಡುವೆ ಒಮಿಕ್ರಾನ್​ನಿಂದಾದ ಮೊದಲ ಸಾವು ಕೂಡ ದೃಢಪಟ್ಟಿದ್ದು, ರೂಪಾಂತರಿ ವೈರಸ್ ಕುರಿತ ಆತಂಕ ಮತ್ತಷ್ಟು ಹೆಚ್ಚಾದಂತಾಗಿದೆ. ಒಮಿಕ್ರಾನ್​ನಿಂದ ಸಂಭವಿಸಿದ, ಜಗತ್ತಿನಲ್ಲೇ ಮೊದಲನೆಯದು ಎನ್ನಬಹುದಾದ ಸಾವು ಲಂಡನ್​ನಲ್ಲಿ ವರದಿಯಾಗಿದೆ. ಯುನೈಟೆಡ್ ಕಿಂಗ್​ಡಮ್​ ಪ್ರಧಾನಿ ಬೋರಿಸ್​ ಜಾನ್ಸನ್​ ಅವರೇ ಸೋಮವಾರ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಎಚ್ಚರ.. ಎಚ್ಚರ.. ಹೊರಗೆಲ್ಲೂ ಹೋಗದವರಿಗೂ, … Continue reading ವಿಶ್ವದಲ್ಲೇ ಇದು ಒಮಿಕ್ರಾನ್​ನಿಂದಾದ ಮೊದಲ ಸಾವು; ರೂಪಾಂತರಿ ವೈರಸ್​ ಇದೀಗ ಮತ್ತಷ್ಟು ಆತಂಕಕಾರಿ!