More

    ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ – ಶುರುವಾಗಿದೆ ಮತದಾನ

    ಹುಬ್ಬಳ್ಳಿ: ಉತ್ತರ ಕನ್ನಡ, ಹಾವೇರಿ, ಗದಗ, ಧಾರವಾಡ ಜಿಲ್ಲೆಯನ್ನು ಒಳಗೊಂಡ ಪಶ್ಚಿಮ ಪದವೀಧರ ಕ್ಷೇತ್ರದ ಮತದಾನ ಬೆಳಗ್ಗೆ 8 ಗಂಟೆಗೆ ಮತದಾನ ಶುರುವಾಗಿದೆ. ಎಲ್ಲ ಕಡೆ ಮತಗಟ್ಟೆಗಳಲ್ಲಿ ಮತದಾರರು ಸರದಿ ನಿಂತು ಮತದಾನ ಆರಂಭಿಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಮತದಾರರನ್ನು ಥರ್ಮಲ್​ ಸ್ಕ್ರೀನಿಂಗ್ ಮಾಡಿ ಮತದಾನಕ್ಕೆ ಒಳಗೆ ಕಳುಹಿಸುತ್ತಿದ್ದಾರೆ. ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 146 ಮತಗಟ್ಟೆಗಳಿದ್ದು, 74,268 ಮತದಾರರಿದ್ದಾರೆ. ಬಿಜೆಪಿ ಅಭ್ಯರ್ಥಿ ಎಸ್​.ವಿ.ಸಂಕನೂರು, ಕಾಂಗ್ರೆಸ್ ಅಭ್ಯರ್ಥಿ ಆರ್.ಎಂ.ಕುಬೇರಪ್ಪ ಸೇರಿ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

    ಗದಗದ ಮುನ್ಸಿಪಲ್ ಕಾಲೇಜಿನಲ್ಲಿರುವ ಮತದಾನ ಕೇಂದ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್​.ವಿ. ಸಂಕನೂರ ಮತ್ತು ಅವರ ಕುಟುಂಬದ ಸದಸ್ಯರು ಮತದಾನ ಮಾಡಿದರು. ಮತದಾನದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಸಂಕನೂರ, ನಾಲ್ಕು ಜಿಲ್ಲೆಗಳ ಮತದಾನದ ಪ್ರಕ್ರಿಯೆ ಚೆನ್ನಾಗಿದ್ದು, ಗೆಲ್ಲುವ ವಾತಾವರಣವಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

    ಇದನ್ನೂ ಓದಿ:  ರಿಲ್ಯಾಕ್ಸ್ ಮೂಡ್​ನಲ್ಲಿ ದಸರಾ ಆನೆಗಳು: ರಥ ಎಳೆದು ಹರಕೆ ತೀರಿಸಿದ ರೋಹಿಣಿ

    ಉತ್ತರಕನ್ನಡ ಜಿಲ್ಲೆಯಲ್ಲೂ ಮತದಾನ ಪ್ರಾರಂಭವಾಗಿದ್ದು, ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ ಒಟ್ಟೂ 26 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. 7113 ಪುರುಷರು, 6034 ಮಹಿಳೆಯರು, 1 ಇತರೆ ಸೇರಿ ಒಟ್ಟೂ 13148 ಮತದಾರರಿದ್ದು, ಮತಗಟ್ಟೆಗಳ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಚುನಾವಣಾ ಕಾರ್ಯಕ್ಕೆ ಒಟ್ಟೂ 148 ಮಂದಿ ಸಿಬ್ಬಂದಿ ನಿಯೋಜನೆಗೊಂಡಿದ್ದು, ಭದ್ರತೆಗಾಗಿ 4 ಡಿಎಸ್‌ಪಿ, ಸಿಪಿಐ, ಇನ್ಸಪೆಕ್ಟರ್ ಸೇರಿ 13, ಪಿಎಸ್‌ಐ 17, ಎಎಸ್ಐ 26 ಹಾಗೂ 107 ಕಾನ್ಸಟೇಬಲ್ ಗಳ ನಿಯೋಜನೆಯಾಗಿದೆ.

    ಇದನ್ನೂ ಓದಿ: ಜಮ್ಮು-ಕಾಶ್ಮೀರದ ಬದ್ಗಾಂನಲ್ಲಿ ಇಬ್ಬರು ಉಗ್ರರ ಹತ್ಯೆ

    ಕೋವಿಡ್ ನಿಯಮ ಗಾಳಿಗೆ: ಗದಗ ನಗರದ ಮುನ್ಸಿಪಲ್ ಕಾಲೇಜ್ ಮತದಾನ ಕೇಂದ್ರದಲ್ಲಿ ಕೋವಿಡ್ ಹಾಗೂ ಚುನಾವಣೆ ಕಾನೂನು ಉಲ್ಲಂಘಿಸಿ ಪಕ್ಷಗಳ ಕಾರ್ಯಕರ್ತರು ಗುಂಪುಗೂಡಿ ಮತದಾರರ ಮನವೊಲಿಸುವ ಕೆಲಸದಲ್ಲಿ ನಿರತರಾಗಿರುವ ದೃಶ್ಯ ಕಂಡುಬಂತು. ಪತ್ರಕರ್ತರನ್ನು ನೋಡಿದ ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಅವರನ್ನು ಚದುರಿಸುವ ಕೆಲಸ ಮಾಡಿದರು. (ದಿಗ್ವಿಜಯ ನ್ಯೂಸ್)

    ಎಸ್​ಎಂಎಸ್​, ವಾಟ್ಸ್​ಆ್ಯಪ್​, ಇಮೇಲ್​ ಮೂಲಕ ಸಮನ್ಸ್ – ಸುಪ್ರೀಂ ಕೋರ್ಟ್​ ಒಲವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts