More

    ರೇಷ್ಮೆ ಮಾರುಕಟ್ಟೆ ಕೊರತೆ ನೀಗಿಸಲು ನವೀನ್ ಒತ್ತಾಯ

    ಚಿತ್ರದುರ್ಗ:ಜಿಲ್ಲೆಯ ರೇಷ್ಮೆ ಬೆಳೆ ಮತ್ತು ರೇಷ್ಮೆ ಸೀರೆಗೆ ಎದುರಾಗಿರುವ ಮಾರುಕಟ್ಟೆ ಕೊರತೆಯನ್ನು ನೀಗಿಸುವಂತೆ ಎಂಎಲ್‌ಸಿ ಕೆ.ಎಸ್.ನವೀನ್ ಪರಿಷತ್‌ನಲ್ಲಿ ಗುರುವಾರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಪರಿಷತ್‌ನಲ್ಲಿ ಮಂಡನೆಯಾಗಿರುವ ರೇಷ್ಮೆ ಕೃಷಿ ವಿಧೇಯಕದ ಮೇಲೆ ಮಾತನಾಡಿದ ಅವರು,ಮಧ್ಯ ಕರ್ನಾಟಕದ ಭಾಗದಲ್ಲೂ ರೇಷ್ಮೆ ಕೃಷಿ ಉತ್ತಮವಾಗಿದೆ.
    ಮೊಳಕಾಲ್ಮೂರು ರೇಷ್ಮೆ ಸೀರೆಗಳು ಜನ ಜನಿತವಾಗಿವೆ. ಆದರೆ ನಮ್ಮ ಭಾಗದ ರೇಷ್ಮೆ ಬೆಳೆ ಮತ್ತು ರೇಷ್ಮೆ ಸೀರೆಗಳಿಗೆ ಮಾರುಕಟ್ಟೆ ಕೊರತೆ ಇದೆ. ರಾ ಮನಗರ ಜಿಲ್ಲೆಯ ಮಾರುಕಟ್ಟೆಗೆ ರೇಷ್ಮೆ ಬೆಳೆ ಕೊಂಡೊಯ್ದು ಮಾರಾಟ ಮಾಡ ಬೇಕಾಗಿದೆ. ಆದರೆ ಮಧ್ಯವರ್ತಿಗಳು ನಮ್ಮ ರೈತರಿಂದ ಕಡಿಮೆ ದರಕ್ಕೆ ರೇಷ್ಮೆ ಖರೀದಿಸುತ್ತಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಇದನ್ನು ತಪ್ಪಿಸಲು ಹಾಗೂ ರೇಷ್ಮೆ ಸೀರೆಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸುವ ಮೂಲಕ ರೈತರಿಗೆ ನೆರವಾಗಬೇಕು. ಇದಕ್ಕಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ರೇಷ್ಮೆ ಬೆಳೆ ಮೌಲ್ಯವರ್ಧನೆ,ದಾಸ್ತಾನು ಕೊಠಡಿ ಹಾಗೂ ಮಾರುಕಟ್ಟೆ ವ್ಯವಸ್ಥೆ ಒದಗಿಸುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿದರು.
    —–

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts