More

    ಬಿತ್ತನೆ ಬೀಜ ಪೂರೈಕೆಗೆ ಸ್ಪಂದಿಸದ ಸರ್ಕಾರ

    ಎನ್.ಆರ್.ಪುರ: ತಾಲೂಕಿನಲ್ಲಿ ಬಿತ್ತನೆ ಬೀಜ ಕೊರತೆಯಿದೆ ಎಂದು ಸರ್ಕಾರಕ್ಕೆ ತಿಳಿಸಿದರೂ ಯಾವುದೇ ಉತ್ತರವಿಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

    ಮಂಗಳವಾರ ತಾಪಂ ಸಾಮರ್ಥ್ಯಸೌಧದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಸಿದ್ಧತೆ ಹಾಗೂ ಮುಂಗಾರು ಕೃಷಿ ಚಟುವಟಿಕೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ತಾಲೂಕಿನ ಬೇಡಿಕೆಯಷ್ಟು ಬಿತ್ತನೆ ಬೀಜ ಪೂರೈಸಬೇಕು ಎಂದು ಒತ್ತಾಯಿಸಿದರು.

    ತಾಲೂಕಿಗೆ 400 ಕ್ವಿಂಟಾಲ್ ಬಿತ್ತನೆ ಬೀಜ ಬೇಕಾಗುತ್ತದೆ. ಆದರೆ 200 ಕ್ವಿಂಟಾಲ್ ಬಿತ್ತನೆ ಬೀಜ ಬಂದಿದ್ದು, ಇದರಲ್ಲಿ 170 ಕ್ವಿಂಟಾಲ್ ವಿತರಿಸಲಾಗಿದೆ. ಇನ್ನೂ ಹೆಚ್ಚಿನ ಭತ್ತದ ಬಿತ್ತನೆ ಬೀಜಕ್ಕಾಗಿ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಇನ್ನು 50 ಕ್ವಿಂಟಾಲ್ ಭತ್ತದ ಬಿತ್ತನೆ ಬೀಜ ಬರಲಿದೆ. 50 ಕ್ವಿಂಟಾಲ್ ಕೊರತೆಯಾಗುತ್ತದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಅರ್ಪಿತಾ ಮಾಹಿತಿ ನೀಡಿದರು.

    ಸರ್ಕಾರ ಬಿತ್ತನೆ ಬೀಜ ನೀಡುತ್ತದೆ ಎಂದು ಇಲಾಖೆ ನೀಡಿದ ಭತ್ತವನ್ನೇ ರೈತರು ಬೆಳೆಯಬೇಕಾಗಿದೆ. ಈ ಭಾಗಕ್ಕೆ ಅಗತ್ಯವಿರುವ ಭತ್ತದ ಬಿತ್ತನೆ ಬೀಜದ ಅವಶ್ಯಕತೆಯಿದೆ. ಇಂತಹ ಭತ್ತದ ಬೀಜಗಳನ್ನು ವಿತರಿಸಲು ಇಲಾಖೆ ಕ್ರಮವಹಿಸಬೇಕೆಂದು ಪಪಂ ಸದಸ್ಯ ಪ್ರಶಾಂತ್ ಶೆಟ್ಟಿ ಒತ್ತಾಯಿಸಿದರು.

    ಕಳೆದ ಬಾರಿ ಬೆಳೆಹಾನಿ ಸಂತ್ರಸ್ತರಲ್ಲಿ ಶ್ರೀಮಂತರಿಗೆ ಮಾತ್ರ ಪರಿಹಾರ ಧನ ಬಂದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅಧಿಕಾರಿಗಳು ಸಾಮಾನ್ಯ ಜನರ ಕಷ್ಟಕ್ಕೆ ಸ್ಪಂದಿಸಬೇಕಿದೆ ಎಂದು ಜಿಪಂ ಸದಸ್ಯ ಪಿ.ಆರ್.ಸದಾಶಿವ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts