More

    ಆಶ್ರಯ ಬಡಾವಣೆಯಲ್ಲಿ ಮೂರಂತಸ್ತಿನ ಮನೆ

    ಬೀರೂರು: ವಸತಿ ರಹಿತರಿಗೆ ಸೂರು ಕಲ್ಪಿಸಿಕೊಡಲು ಯೋಜನೆ ರೂಪಿಸಿದ್ದು, ಪಟ್ಟಣದ ಎಸ್.ಆರ್.ಲಕ್ಷ್ಮಯ್ಯ ಆಶ್ರಯ ಬಡಾವಣೆಯಲ್ಲಿ ಮೂರು ಅಂತಸ್ತಿನ ಮಾದರಿಯಲ್ಲಿ 792 ಮನೆ ನಿರ್ವಿುಸಲಾಗುವುದು ಎಂದು ಶಾಸಕ ಬೆಳ್ಳಿ ಪ್ರಕಾಶ್ ತಿಳಿಸಿದರು.

    ಪಟ್ಟಣದ ತರಳಬಾಳು ಕಲ್ಯಾಣ ಮಂದಿರದ ಎದುರಿನ ರೈಲ್ವೆ ಸ್ಟೇಷನ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

    ಆಶ್ರಯ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡುವ ಬದಲು ಮನೆ ನಿರ್ವಣಕ್ಕಾಗಿ ಡಿಪಿಆರ್ ಸಿದ್ಧಪಡಿಸಿದ್ದು, ರಾಜೀವ್ ಗಾಂಧಿ ವಸತಿ ನಿಗಮದಡಿ ಯೋಜನೆಗೆ ಸರ್ಕಾರಕ್ಕೆ ಶೀಘ್ರ ಪ್ರಸ್ತಾವನೆ ಸಲ್ಲಿಸಲಾಗುವುದು. ಇದು ಅನುಷ್ಠಾನಗೊಂಡರೆ ಬೀರೂರಲ್ಲಿ 10 ವರ್ಷಗಳ ಕಾಲ ಯಾವುದೇ ವಸತಿ ರಹಿತರು ಇರುವುದಿಲ್ಲ ಎನ್ನುವ ಆಶಯ ನನ್ನದು ಎಂದರು.

    75 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸುತ್ತಿರುವ ರಸ್ತೆ ಉತ್ತಮವಾಗಿರಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಮಹಾತ್ಮ ಗಾಂಧಿ ವೃತ್ತದಿಂದ ರೈಲ್ವೆ ಸ್ಟೇಷನ್ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ರಾಜಾಜಿನಗರ ಬಡಾವಣೆಯಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ 10 ಲಕ್ಷ ಲೀ. ನೀರು ಸಾಮರ್ಥ್ಯದ ಓವರ್​ಹೆಡ್ ಟ್ಯಾಂಕ್ ನಿರ್ವಿುಸಲು ಧಾರವಾಡ ಮೂಲದ ಗುತ್ತಿಗೆದಾರರಿಗೆ ಟೆಂಡರ್ ಆಗಿದೆ. ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

    ಬಿಜೆಪಿ ಮುಖಂಡರಾದ ಬಿ.ಎಂ.ರುದ್ರಪ್ಪ, ಡಿ.ಎಸ್.ಅಶೋಕ್, ಆರ್.ವಿ.ರವಿ, ಅರೆಕಲ್ ಪ್ರಕಾಶ್, ಮಾರ್ಗದ ಮಧು, ಪುರಸಭೆ ಸದಸ್ಯರಾದ ಎಂ.ಪಿ.ಸುದರ್ಶನ್, ಲೋಕೇಶಪ್ಪ, ಮೋಹನ್​ಕುಮಾರ್, ಸಹನಾ, ಜಿ.ಲಕ್ಷ್ಮಣ, ರವಿ, ಮಾಜಿ ಅಧ್ಯಕ್ಷ ಎಸ್.ರಮೇಶ್, ಮುಖ್ಯಾಧಿಕಾರಿ ಕೆ.ಎಂ.ಸತ್ಯನಾರಾಯಣ, ಸಿಪಿಐ ಕೆ.ಆರ್.ಶಿವಕುಮಾರ್, ಪಿಎಸ್​ಐ ಕೆ.ವಿ.ರಾಜಶೇಖರ್, ರವಿಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts