More

    ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆನೆ, ಹುಲಿಯನ್ನು ದತ್ತು ಪಡೆದ ಶಾಸಕ ಎಂ.ಕೃಷ್ಣಪ್ಪ…

    ಆನೇಕಲ್: ಲಾಕ್​ಡೌನ್​ನಿಂದಾಗಿ ಮೃಗಾಲಯಗಳೆಲ್ಲ ಬಂದ್​ ಆಗಿದ್ದರಿಂದ ಅಲ್ಲಿನ ಪ್ರಾಣಿಗಳ ನಿರ್ವಹಣೆ ಕಷ್ಟವಾಗುತ್ತಿದೆ. ಮೃಗಾಲಯಗಳಿಗೆ ಪ್ರವಾಸಿಗರಿಂದಲೇ ಹೆಚ್ಚಿನ ಆದಾಯ ಬರುತ್ತದೆ. ಆದರೆ ಈಗ ಪ್ರವಾಸಿಗರೇ ಬಾರದ ಕಾರಣ ಸಂಕಷ್ಟ ಎದುರಾಗಿದೆ.

    ಹೀಗಿರುವಾಗ ಬೆಂಗಳೂರು ದಕ್ಷಿಣ ಶಾಸಕ ಎಂ.ಕೃಷ್ಣಪ್ಪ ಮತ್ತು ಸ್ನೇಹಿತರು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕೆಲವು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ.

    ಇದನ್ನೂ ಓದಿ: ಅಡಮಾನ ಸಾಲ ಖರೀದಿ ಮಿತಿ ಏರಿಕೆ, ಹೊರ ರಾಜ್ಯಕ್ಕೆ ಸಾಗಿಸಲು ಅನುಮತಿ; ರೀಲರ್ಸ್, ಟ್ರೇಡರ್ಸ್ ಸಂತಸ

    ಶಾಸಕ ಕೃಷ್ಣಪ್ಪ ಅವರು ನಿಸರ್ಗ ಎಂಬ ಆನೆಯನ್ನು ಮತ್ತು ಹಿಮ ಎಂಬ ಹುಲಿಯನ್ನು ದತ್ತು ಪಡೆದಿದ್ದಾರೆ. ಹಾಗೇ ಅವರ ಸ್ನೇಹಿತರಾದ ಜಯರಾಮ್​, ಟಿ.ನಾರಾಯಣ್​, ಸುಬ್ರಹ್ಮಣ್ಯ, ಎಂ.ಸಿ.ರಾಜು, ಸೋಮಶೇಖರ್ ಅವರು​ ಎರಡು ಹುಲಿಗಳು, ಎರಡು ಚಿರತೆಗಳು, ಝೀಬ್ರಾಗಳನ್ನು ದತ್ತು ಪಡೆದು, ನಿರ್ವಹಣೆಯ ಹೊಣೆ ಹೊತ್ತಿದ್ದಾರೆ. ಇವರು ಮೃಗಾಲಯದ ಪ್ರಾಧಿಕಾರಕ್ಕೆ 5.95 ಲಕ್ಷ ರೂಪಾಯಿ ಪಾವತಿಸಿ ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ.

    ಪ್ರಾಣಿಗಳ ನಿರ್ವಹಣೆ ಕಷ್ಟವಾಗಿದ್ದರಿಂದ ಸಾಧ್ಯವಾದಷ್ಟು ಸಾರ್ವಜನಿಕರು ದತ್ತು ಪಡೆಯಿರಿ ಎಂದು ಮೃಗಾಲಯದ ಅಧಿಕಾರಿಗಳು ಮನವಿ ಮಾಡಿದ್ದರು. ಶೀಘ್ರವೇ ಸ್ಪಂದಿಸಿದ ಶಾಸಕರು ಈ ಕ್ರಮ ಕೈಗೊಂಡಿದ್ದಾರೆ.

    ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆನೆ, ಹುಲಿಯನ್ನು ದತ್ತು ಪಡೆದ ಶಾಸಕ ಎಂ.ಕೃಷ್ಣಪ್ಪ...

    ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆನೆ, ಹುಲಿಯನ್ನು ದತ್ತು ಪಡೆದ ಶಾಸಕ ಎಂ.ಕೃಷ್ಣಪ್ಪ...

    ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆನೆ, ಹುಲಿಯನ್ನು ದತ್ತು ಪಡೆದ ಶಾಸಕ ಎಂ.ಕೃಷ್ಣಪ್ಪ...

    ಇದನ್ನೂ ಓದಿ:  ಸಿನಿಮಾ ಮಂದಿಗೆ ಸಿಹಿ ಸುದ್ದಿ; ಇನ್ಮುಂದೆ ನೀವು ಈ ಎಲ್ಲ ಕೆಲಸಗಳನ್ನು ಮಾಡಿಕೊಳ್ಳಬಹುದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts