More

    ನೆರೆ ಸಂತ್ರಸ್ತರ ಯೋಗಕ್ಷೇಮ ವಿಚಾರಣೆ

    ಕುಮಟಾ: ತಾಲೂಕಿನ ವಾಲಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಊರಕೇರಿ ಗ್ರಾಮದ ಗುಡ್ನಕಟ್ಟು-ಕೆಳಗಿನ ಕೇರಿಗೆ ಬಡಗಣಿ ಹೊಳೆ ನೀರು ನುಗ್ಗಿ ಪ್ರವಾಹ ಉಂಟಾಗಿದ್ದರಿಂದ ಶಾಸಕ ದಿನಕರ ಶೆಟ್ಟಿ ಅಲ್ಲಿಗೆ ತೆರಳಿ, ಸನಿಹದ ಕಡವು ಹಿ.ಪ್ರಾ. ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲು ಸೂಚಿಸಿ 31 ಮಂದಿಗೆ ಊಟೋಪಚಾರ ಸಹಿತ ವಸತಿ ವ್ಯವಸ್ಥೆ ಕಲ್ಪಿಸಿದರು.
    ಕಾಳಜಿ ಕೇಂದ್ರಕ್ಕೆ ಬಂದ ಸಂತ್ರಸ್ತರಿಗೆ ವೈಯಕ್ತಿಕವಾಗಿ ಹಣ್ಣು ವಿತರಿಸಿ, ಯೋಗಕ್ಷೇಮ ವಿಚಾರಿಸಿದರು. ಆಹಾರ ಹಾಗೂ ವಸತಿಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ಶಾಸಕರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಕೆಳಗಿನಕೇರಿಗೆ ರಸ್ತೆ ಅಭಿವೃದ್ಧಿಪಡಿಸುವ ಕುರಿತು ಸ್ಥಳೀಯ ಮಹಿಳೆಯರು ಶಾಸಕರ ಗಮನ ಸೆಳೆದರು.
    ವಾಲಗಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ ಶಾನಭಾಗ, ಉಪಾಧ್ಯಕ್ಷೆ ಗಂಗೆ ಪಟಗಾರ, ಸದಸ್ಯರಾದ ಗಣಪತಿ ಭಟ್, ಶ್ರೀಕಾಂತ್ ಶಾಸ್ತ್ರೀ, ತಾಪಂ ಇಒ ನಾಗರತ್ನಾ ನಾಯಕ, ನೋಡಲ್ ಅಧಿಕಾರಿ ವಿನಾಯಕ ವೈದ್ಯ, ಪಿ.ಎಸ್.ಐ. ಪದ್ಮಾ ದೇವಳಿ, ಗ್ರಾಮಲೆಕ್ಕಿಗ ಮಹಾಲಕ್ಷ್ಮಿ ಗೌಡ, ಪಿಡಿಒ ವೀಣಾ ನಾಯ್ಕ, ಕಾರ್ಯದರ್ಶಿ ನಾಗರಾಜ ಶೆಟ್ಟಿ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts