ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಎಂ.ಕೆ ಸ್ಟ್ಯಾಲಿನ್ ಅವರು ಶುಕ್ರವಾರ (ಮೇ 7) ರಂದು ಬೆಳಿಗ್ಗೆ 9 ಗಂಟೆಗೆ ರಾಜ್ಯಭವನದಲ್ಲಿ ಪ್ರಮಾಣವಚನ ತೆಗೆದುಕೊಳ್ಳಲಿದ್ದಾರೆ.
ತಮಿಳುನಾಡು ರಾಜ್ಯಪಾಲ ಭವ್ವರಿಲಾಲ್ ಪುರೋಹಿತ್ ಅವರು ಪ್ರಮಾಣವಚನ ಬೋಧಿಸಲಿದ್ದಾರೆ. ಸ್ಟ್ಯಾಲಿನ್ ಅವರೊಂದಿಗೆ 33 ನೂತನ ಸಚಿವರು ಕೂಡ ಪ್ರಮಾಣವಚನ ತೆಗೆದುಕೊಳ್ಳಲಿದ್ದಾರೆ. ಇಂದು ಸಂಜೆ ಸಚಿವರ ಪಟ್ಟಿಯನ್ನು ಸ್ಟ್ಯಾಲಿನ ಬಿಡುಗಡೆಗೊಳಿಸಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಟ್ಯಾಲಿನ ನೇತೃತ್ವದ ಡಿಎಂಕೆ ಹಾಗೂ ಕಾಂಗ್ರೆಸ್ ಮೈತ್ರಿ ಭರ್ಜರಿ 159 ಸ್ಥಾನಗಳನ್ನು (ಡಿಎಂಕೆ 133, ಕಾಂಗ್ರೆಸ್ ಹಾಗೂ ಇತರೆ 26) ಗೆಲ್ಲುವ ಮೂಲಕ ಸತತ ಹತ್ತು ವರ್ಷಗಳಿಂದ ಆಡಳಿತದಲ್ಲಿದ್ದ ಎಐಎಡಿಎಂಕೆ ಕಿತ್ತೊಗೆದು ಅಧಿಕಾರದ ಗದ್ದುಗೆ ಹಿಡಿದಿದೆ.
ನೂತನ ಮುಖ್ಯಮಂತ್ರಿ ಸ್ಟ್ಯಾಲಿನ್ ಅವರು ಗೃಹ ಖಾತೆಯನ್ನು ತಮ್ಮ ಬಳಿ ಉಳಿಸಿಕೊಂಡು ಉಳಿದ ಎಲ್ಲ ಖಾತೆಗಳನ್ನು 33 ಸಚಿವರಿಗೆ ಹಂಚಿಕೆ ಮಾಡಿದ್ದಾರೆ.
ಸಂಸದ ತೇಜಸ್ವಿ ಸೂರ್ಯಾರನ್ನು ಉಗ್ರ ಅಜ್ಮಲ್ ಕಸಬ್ಗೆ ಹೋಲಿಸಿದ ನಟ ಸಿದ್ದಾರ್ಥ್!