More

    ಉತ್ಸಾಹದಿಂದ ಮತ ಚಲಾಯಿಸಿದ ಜನರು

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆಯಿಂದ ವಿವಿಧ ಮತ ೇತ್ರಗಳ ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ತಿಳಿಸಿದರು.
    ನಗರದ ಮಲ್ಲಸಜ್ಜನ ವ್ಯಾಯಾಮ ಶಾಲೆಯಲ್ಲಿನ ಪಿಂಕ್​ ಮತಗಟ್ಟೆಗೆ ಮಧ್ಯಾಹ್ನ ಭೇಟಿ ನೀಡಿ ಪರಿಶೀಲಿಸಿದ ಅವರು, ಜಿಲ್ಲೆಯಲ್ಲಿ ಪಿಂಕ್​ ಮತಗಟ್ಟೆಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಖಿ ಬೂತ್​ನಲ್ಲಿ ಮಕ್ಕಳ ಆಟಗಳ ದೃಶ್ಯ ಸಂತಸ ತಂದಿದೆ ಎಂದರು.
    ಮಲ್ಲಸಜ್ಜನ ವ್ಯಾಯಾಮ ಶಾಲೆಯ ಸಖಿ ಮತಗಟ್ಟೆಯಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳನ್ನು ಎತ್ತಿಕೊಂಡು ಮತದಾನಕ್ಕೆ ಸರದಿಯಲ್ಲಿ ನಿಲ್ಲುವ ಬದಲು ಮತಗಟ್ಟೆ ಪಕ್ಕದಲ್ಲೇ ಮಕ್ಕಳನ್ನು ನೋಡಿಕೊಳ್ಳಲು ಕೊಠಡಿಯಲ್ಲಿ ವೈವಿಧ್ಯಮಯ ಆಟದ ಸಾಮಗ್ರಿ ಇಡಲಾಗಿತ್ತು. ನೂರಾರು ತಾಯಂದಿರು ಇದರ ಪ್ರಯೋಜನೆ ಪಡೆದು ಹರ್ಷ ವ್ಯಕ್ತಪಡಿಸಿದ್ದಾರೆ ಎಂದರು.
    ಜಿಲ್ಲೆಯಲ್ಲಿ ಮತದಾರರು ಉತ್ಸಾಹದಿಂದ ಪಾಲ್ಗೊಂಡಿದ್ದು, ಶಾಂತಿಯುತವಾಗಿ ಮತದಾನವಾಗಿದೆ. ಮತದಾನದ ಶೇಕಡವಾರು ಪ್ರಗತಿ ಗಮನಿಸಿದರೆ 2019ರ ಲೋಕಸಭಾ ಚುನಾವಣೆಗಿಂತ ಹೆಚ್ಚು ಮತದಾನವಾಗುವ ಲಣಗಳಿವೆ. ಕೆಲ ಮತಗಟ್ಟೆಗಳಲ್ಲಿ ಬೆಳಗ್ಗೆ ಮತದಾನ ಆರಂಭವಾಗುವ ಸಮಯದಲ್ಲಿ ತಾಂತ್ರಿಕ ದೋಷದಿಂದ 17 ವಿವಿ ಪ್ಯಾಟ್​ಗಳನ್ನು ಚುನಾವಣಾ ಆಯೋಗದ ಮಾರ್ಗದರ್ಶನ ನಿಯಮ ಪ್ರಕಾರ ಬದಲಿಸಲಾಗಿದೆ ಎಂದರು.
    ಮತದಾನ ಮಾಡಿದ ಮತದಾರನು ತನ್ನ ಮತದ ಗೌಪ್ಯತೆ ಕಾಪಾಡಿಕೊಳ್ಳಬೇಕು. ಅದನ್ನು ಹೇಳುವ, ಸಾಂಕೇತಿಕವಾಗಿ ತೋರಿಸುವ ಅಥವಾ ಮೊಬೈಲ್​ನಲ್ಲಿ ಚಿತ್ರೀಕರಿಸುವ, ಸ್ಟೇಟಸ್​ ಇಡುವ ಕಾನೂನು ಬಾಹಿರ ಕೃತ್ಯಗಳನ್ನು ಮಾಡಬಾರದು. ಹುಬ್ಬಳ್ಳಿಯಲ್ಲಿ ವ್ಯಕ್ತಿಯೊಬ್ಬ ಗೌಪ್ಯ ಮತದಾನ ಬಹಿರಂಗ ಮಾಡಿರುವ ಬಗ್ಗೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ತನಿಖೆ ನಡೆಸಿ, ಚುನಾವಣಾ ಆಯೋಗದ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts