More

    ಕರೊನಾಗೆ ಬಲಿಯಾದ ಒಲಿಂಪಿಕ್ಸ್ ಸ್ವರ್ಣ ಪದಕ ವಿಜೇತರು

    ನವದೆಹಲಿ: 1980ರ ಮಾಸ್ಕೋ ಒಲಿಂಪಿಕ್ ಸ್ವರ್ಣ ಪದಕ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ರವೀಂದರ್ ಪಾಲ್ ಸಿಂಗ್ ಹಾಗೂ ಎಂಕೆ ಕೌಶಿಕ್ ಶನಿವಾರ ಕೋವಿಡ್-19ನಿಂದ ನಿಧನರಾದರು. ರವೀಂದರ್ ಪಾಲ್ ಸಿಂಗ್ ಲಖನೌದಲ್ಲಿ ನಿಧನರಾದರೆ, ಎಂಕೆ ಕೌಶಿಕ್ ನವದೆಹಲಿಯಲ್ಲಿ ಕೊನೆಯುಸಿರೆಳೆದರು. ಕೌಶಿಕ್ ಹಾಗೂ ರವೀಂದರ್ ಪಾಲ್ ಸಿಂಗ್ ಇಬ್ಬರೂ ಒಟ್ಟಿಗೆ ರಾಷ್ಟ್ರೀಯ ತಂಡದ ಪರ ಆಡಿದ್ದರು. ಇದೀಗ ಕೋವಿಡ್‌ನಿಂದಾಗಿ ಒಂದೇ ದಿನ ಇಬ್ಬರು ಇಹಲೋಕ ತ್ಯಜಿಸಿದ್ದಾರೆ.

    ಇದನ್ನೂ ಓದಿ: ಪೃಥ್ವಿ ಷಾ ಟೀಮ್​ ಇಂಡಿಯಾಗೆ ಮರಳಬೇಕಾದರೆ ಈ ಷರತ್ತು ಪೂರೈಸಬೇಕಂತೆ!

    ರವೀಂದರ್ ಅವರು ಕೋವಿಡ್‌ನಿಂದ ಚೇತರಿಸಿಕೊಂಡಿದ್ದರು. ನೆಗೆಟಿವ್ ವರದಿ ಬಂದ ಬಳಿಕ ಗುರುವಾರ ಅವರನ್ನು ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಆದರೆ, ಶುಕ್ರವಾರ ಅವರ ಆರೋಗ್ಯದ ಸ್ಥಿತಿ ಹದಗೆಟ್ಟಿದ್ದರಿಂದ, ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಏಪ್ರಿಲ್ 24 ರಂದು ಸ್ಥಳೀಯ ವಿವೇಕಾನಂದ ಆಸ್ಪತ್ರೆಗೆ ರವೀಂದರ್ ಅವರನ್ನು ದಾಖಲಿಸಲಾಗಿತ್ತು. ಅವಿವಾಹಿತರಾಗಿದ್ದ ರವೀಂದರ್ ಪಾಲ್ ಸಿಂಗ್ ಅವರಿಗೆ 60 ವರ್ಷ ವಯಸ್ಸಾಗಿತ್ತು. 1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲೂ ಆಡಿದ್ದ ರವೀಂದರ್ ಸಿಂಗ್, 1979ರಲ್ಲಿ ಜೂನಿಯರ್ ವಿಶ್ವಕಪ್‌ನಲ್ಲಿ ಭಾರತ ತಂಡ ಪ್ರತಿನಿಧಿಸಿದ್ದರು. ವೃತ್ತಿ ಜೀವನಕ್ಕೆ ನಿವೃತ್ತಿ ೋಷಿಸಿದ ಬಳಿಕ ರವೀಂದರ್ ಪಾಲ್ ಸಿಂಗ್ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

    ಇದನ್ನೂ ಓದಿ: VIDEO: ಜನರ ಮೆಚ್ಚುಗೆಗೆ ಪಾತ್ರವಾದ ವಿರಾಟ್ ಕೊಹ್ಲಿ ದಂಪತಿಯ ಸಾಮಾಜಿಕ ಕಳಕಳಿ

    66 ವರ್ಷದ ಎಂಕೆ ಕೌಶಿಕ್ ಭಾರತ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. 2002ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರಾದ ಕೌಶಿಕ್, 1988ರ ಏಷ್ಯಾಡ್‌ನಲ್ಲಿ ಸ್ವರ್ಣ ಗೆದ್ದ ಭಾರತ ತಂಡಕ್ಕೆ ಕೋಚ್ ಆಗಿದ್ದರು. ಕೌಶಿಕ್ ಮಾರ್ಗದರ್ಶನದಲ್ಲಿಯೇ ಭಾರತ ತಂಡ 2006ರ ದೋಹಾ ಏಷ್ಯಾಡ್‌ನಲ್ಲಿ ಕಂಚು ಜಯಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts