More

    ತಮಿಳುನಾಡಿಗೆ ಅಮಿತ್​ ಷಾ ಭೇಟಿ ಕೊಡುತ್ತಿದ್ದಂತೆಯೇ ಬಿಜೆಪಿ ಸೇರಲಾರಂಭಿಸಿದ ನಾಯಕರು

    ಚೆನ್ನೈ: ಅಮಿತ್​ ಷಾ ಇದ್ದಲ್ಲಿ ಬಿಜೆಪಿ ಇರಲೇ ಬೇಕು ಎನ್ನುತ್ತಾರೆ ಬಿಜೆಪಿ ಕಾರ್ಯಕರ್ತರು. ಇದೀಗ ಅದಕ್ಕೆ ಸಾಕ್ಷಿಯೆನ್ನುವ ಘಟನೆಗಳು ತಮಿಳುನಾಡಿನಲ್ಲಿಯೂ ನಡೆಯಲಾರಂಭಿಸಿವೆ. ಕೇಂದ್ರ ಗೃಹ ಸಚಿವ ಅಮಿತ್​ ಷಾ ಶನಿವಾರ ತಮಿಳುನಾಡಿಗೆ ಬಂದಿಳಿದಿದ್ದಾರೆ. ಅವರು ಬರುತ್ತಿದ್ದಂತೆಯೇ ಕೆಲ ರಾಜಕೀಯ ಮುಖಂಡರುಗಳು ಬಿಜೆಪಿ ಸೇರಲಾರಂಭಿಸಿದ್ದಾರೆ.

    ಇದನ್ನೂ ಓದಿ: ಡ್ರಗ್ಸ್​ ಪ್ರಕರಣದಲ್ಲಿ ಪ್ರಸಿದ್ಧ ಹಾಸ್ಯ ನಟಿ ದಂಪತಿ ಭಾಗಿ? ಎನ್​ಸಿಬಿ ಅಧಿಕಾರಿಗಳಿಂದ ದಂಪತಿಯ ವಿಚಾರಣೆ

    ತಮಿಳುನಾಡಿನ ರಾಜಕೀಯ ಮುಖಂಡ ಎಂಕೆ ಅಲಗಿರಿ ಅವರ ಆಪ್ತ ಕೆ.ಪಿ.ರಾಮಲಿಂಗಂ ಅವರು ಇದೀಗ ಬಿಜೆಪಿ ಸೇರಿದ್ದಾರೆ. ನನ್ನೊಂದಿಗೆ ಅಲಗಿರಿ ಅವರು ಅತ್ಯಂತ ಸ್ನೇಹದಿಂದಿದ್ದಾರೆ. ಅವರನ್ನೂ ಸಹ ಬಿಜೆಪಿ ಸೇರಲು ನಾನು ಹೇಳುತ್ತೇನೆ ಎಂದು ಅವರು ತಿಳಿಸಿದ್ದಾರೆ.

    ನಾನು ಇಷ್ಟು ವರ್ಷ ಬೇರೆ ಪಕ್ಷಗಳೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ನನಗೆ ಎಲ್ಲಿಯೂ ಸರಿ ಎನಿಸಿಲ್ಲ. ಅದಕ್ಕೆ ಕಳೆದ 8 ತಿಂಗಳಿನಿಂದ ಎಲ್ಲ ಪಕ್ಷದ ಹೊರಗೆ ನಿಂತು ನೋಡಿದ್ದೇನೆ. ಬಿಜೆಪಿಯಲ್ಲಿ ದೇಶವನ್ನು ನಡೆಸಬಲ್ಲಂತ ಪ್ರಬಲ ನಾಯಕರಿದ್ದಾರೆ. ಅದೇ ಕಾರಣದಿಂದಾಗಿ ಇದೀಗ ನಾನು ಬಿಜೆಪಿ ಸೇರುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಇದು ಅಂತಿಂಥ ಬೇಟೆಯಲ್ಲ! ದ್ವಿಚಕ್ರ ವಾಹನದಲ್ಲಿತ್ತು ಬರೋಬ್ಬರಿ 3 ಕೋಟಿ ಮೌಲದ್ಯ ಚಿನ್ನಾಭರಣ

    ತಮಿಳುನಾಡಿನಲ್ಲಿ ಈ ವರ್ಷ ಮೂರು ಡಿಎಂಕೆ ನಾಯಕರು ಬಿಜೆಪಿ ಸೇರಿದ್ದಾರೆ. ರಾಮಲಿಂಗಂ ಅವರು ಪಕ್ಷಕ್ಕೆ ಮೋಸ ಮಾಡುತ್ತಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಎಂಟು ತಿಂಗಳ ಹಿಂದೆ ಅವರನ್ನು ಪಕ್ಷದಿಂದ ತೆಗೆದುಹಾಕಲಾಗಿತ್ತು. (ಏಜೆನ್ಸೀಸ್​)

    ದೀದಿಗೆ ಕೈ ಕೊಡಲು ಸಿದ್ಧರಾಗಿದ್ದಾರಂತೆ ಅವರ ಬಲಗೈ ಬಂಟ; ಅಮಿತ್​ ಷಾ ಕಾಲಿಟ್ಟ ನೆಲದಲ್ಲಿ ಭಾರಿ ಸಂಚಲನ

    ಯೋಗಿ ಸರ್ಕಾರದಲ್ಲಿ ಲವ್​ ಜಿಹಾದ್​ ಬಗ್ಗೆ ಮಸೂದೆ ಸಿದ್ಧವಾಗುತ್ತಿಲ್ಲ; ಹಾಗಾದರೆ ಇಷ್ಟು ದಿನ ಹೇಳಿದ್ದು ಸುಳ್ಳಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts