More

    ಬಿಸಿ ಬಿಸಿ ಚಹಾಕ್ಕೆ ಲಿಂಬು, ಬೇಕಿಂಗ್​ ಸೋಡಾ ಹಾಕಿ ಕುಡಿದರೆ ಕರೊನಾ ಮಾಯ…?!

    ಮಾರಣಾಂತಿಕ ಕರೊನಾ ವೈರಸ್​ ಕಳೆದ 7 ತಿಂಗಳಿಂದಲೂ ಹರಡುತ್ತಿದೆ. ಜಗತ್ತಿನಾದ್ಯಂತ ಲಕ್ಷಾಂತರ ಜನರ ಪ್ರಾಣ ಕಸಿದಿದೆ. ಕೋಟ್ಯಂತರ ಜನರಿಗೆ ಬಾಧಿಸುತ್ತಿದೆ. ಬಹುತೇಕ ರಾಷ್ಟ್ರಗಳು ಕೊವಿಡ್​-19ರಿಂದ ನಲುಗುತ್ತಿವೆ.
    ಇಂಥ ಮಾರಕ ವೈರಸ್​ಗೆ ಇನ್ನೂ ಲಸಿಕೆ ಕಂಡು ಹಿಡಿಯಲು ಆಗಿಲ್ಲ. ಔಷಧಿಯೂ ಸಿಗುತ್ತಿಲ್ಲ. ಕರೊನಾ ಪ್ರಾರಂಭವಾದಾಗಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಅದೆಷ್ಟೋ ಮನೆ ಮದ್ದುಗಳ ಬಗೆಗಿನ ಪೋಸ್ಟ್​ಗಳು ಹರಿದಾಡುತ್ತಿವೆ. ಇದನ್ನು ಉಪಯೋಗಿಸಿದರೆ ಕರೊನಾ ಬರುವುದಿಲ್ಲ…ಅದನ್ನು ಬಳಸಿದರೆ ಕರೊನಾ ಕೆಲವೇ ಘಂಟೆಗಳಲ್ಲಿ ಮಾಯವಾಗುತ್ತದೆ ಎಂಬಿತ್ಯಾದಿ ಹಲವು ಬರಹಗಳು ಓಡಾಡುತ್ತಿದ್ದವು.

    ಇತ್ತೀಚೆಗೆ ಫೇಸ್​ಬುಕ್​ ಹಾಗೂ ವಾಟ್ಸ್​ಆ್ಯಪ್​ಗಳಲ್ಲಿ ಒಂದು ಹೊಸ ಪೋಸ್ಟ್​ ವೈರಲ್ ಆಗುತ್ತಿದೆ. ಇಸ್ರೇಲ್​ನಲ್ಲಿ ಕರೊನಾದಿಂದ ಒಬ್ಬರೇ ಒಬ್ಬರೂ ಸತ್ತಿಲ್ಲ. ಅದಕ್ಕೆ ಕಾರಣ ಅವರು ಚಹಾದಲ್ಲಿ ಬೇಕಿಂಗ್​ ಸೋಡಾ ಮತ್ತು ಲಿಂಬು ಬೆರೆಸಿ ಕುಡಿಯುತ್ತಿದ್ದಾರೆ. ಈ ಮಿಶ್ರಣ ಕರೊನಾ ವೈರಸ್​ನ್ನು ಕೊಲ್ಲುತ್ತಿದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತಿದೆ. ಹಾಗಾಗಿ ಇಸ್ರೇಲ್​ ಜನರಿಗೆ ಸೋಂಕು ಜಾಸ್ತಿ ಬಾಧಿಸುತ್ತಿಲ್ಲ ಎಂಬ ಸಂದೇಶವುಳ್ಳ ಬರಹದ ಪೋಸ್ಟ್​ ಇದು.

    ಕರೊನಾ ಇಷ್ಟು ಸಿಂಪಲ್​ ಆಗಿ ಹೋಗುವುದು ಸತ್ಯವಾ? ಬಿಸಿಬಿಸಿ ಚಹಾಕ್ಕೆ ಬೇಕಿಂಗ್​ ಸೋಡಾ, ಲಿಂಬು ಸೇರಿಸಿ ಪ್ರತಿದಿನ ಮಧ್ಯಾಹ್ನ ಕುಡಿದರೆ ಕರೊನಾ ಬರುವುದಿಲ್ಲವಾ? ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶುರುವಾದ ಬೆನ್ನಲ್ಲೇ ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್​ ವಾರ್​ ರೂಂ ಈ ಬಗ್ಗೆ ಫ್ಯಾಕ್ಟ್​ ಚೆಕ್​ ನಡೆಸಿದೆ. ಅದರಲ್ಲಿ ಸತ್ಯ ಬಯಲಾಗಿದೆ. ಇದನ್ನೂ ಓದಿ:  ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ತಾರಕಕ್ಕೇರಿತು ಅರ್ಜುನ್​ ಸರ್ಜಾ ಸಿಟ್ಟು…

    ಮೊದಲನೇದಾಗಿ ಇಸ್ರೇಲ್​ನಲ್ಲಿ ಕೊವಿಡ್​-19 ನಿಂದ ಯಾರೂ ಸತ್ತಿಲ್ಲ ಎಂಬುದೇ ಸುಳ್ಳು. ಅಲ್ಲಿ ಇದುವರೆಗೆ 299ಮಂದಿ ಕರೊನಾಕ್ಕೆ ಬಲಿಯಾಗಿದ್ದಾರೆ. 18,268 ಜನ ಕರೊನಾ ಸೋಂಕಿತರು ಇದ್ದಾರೆ ಜಾನ್​ ಹಾಪ್ಕಿನ್ಸ್ ವರದಿಯಲ್ಲಿ ಉಲ್ಲೇಖವಾಗಿದೆ. ಹಾಗೇ ಬಿಸಿ ಚಹಾಕ್ಕೆ ಲಿಂಬು, ಬೇಕಿಂಗ್​ ಸೋಡಾ ಮಿಶ್ರಣ ಮಾಡಿಕೊಂಡು ಕುಡಿದರೆ ವೈರಸ್​ ಸಾಯುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ ಎಂದು ಇಂಡಿಯಾ ಟುಡೆ ಫ್ಯಾಕ್ಟ್​ಚೆಕ್​ನಲ್ಲಿ ಬಯಲಾಗಿದೆ. ಆದರೆ ಈ ಸುಳ್ಳನ್ನೊಳಗೊಂಡ ಪೋಸ್ಟ್​ ಮಾತ್ರ ಹಲವರ ಫೇಸ್​ಬುಕ್​ನಲ್ಲಿ ವೈರಲ್​ ಆಗುತ್ತಿದೆ.
    ಬಿಸಿ ಚಹಾಕ್ಕೆ ಲಿಂಬು, ಬೇಕಿಂಗ್​ ಸೋಡಾ ಹಾಕಿ ಕುಡಿಯುವುದರಿಂದ ದೇಹದ ಇಮ್ಯೂನ್​ ಸಿಸ್ಟಮ್​ ಹೆಚ್ಚಾಗುತ್ತದೆ ಎಂಬುದಕ್ಕೂ ವೈಜ್ಞಾನಿಕ ಪುರಾವೆಗಳಿಲ್ಲ. ಇದನ್ನೂ ಓದಿ: ವಿದೇಶಿ ಮಹಿಳೆಯೊಂದಿಗೆ ಗೋಕರ್ಣಕ್ಕೆ ಪ್ರವಾಸಕ್ಕೆ ಹೋಗಿದ್ದವನಿಗೆ ಅಲ್ಲೇ ಕಾದಿತ್ತು ಸಾವು

    ಲಿಂಬುವಿನಲ್ಲಿ ವಿಟಾಮಿನ್​ ಸಿ ಇದೆ. ಸಾಮಾನ್ಯ ಶೀತ, ಕೆಮ್ಮಿನ ವಿರುದ್ಧ ಲಿಂಬು ಪರಿಣಾಮಾತ್ಮಕವಾಗಿ ಹೋರಾಡಬಲ್ಲದು ಎಂಬುದು ಅನೇಕರ ನಂಬಿಕೆ. ಆದರೆ ಶ್ವಾಸಕೋಶಕ್ಕೆ ದಾಳಿ ಇಡುವ ಕರೊನಾ ವಿರುದ್ಧ ಇದೆಷ್ಟು ಪರಿಣಾಮಕಾರಿ ಎಂಬುದನ್ನು ಇದುವರೆಗೂ ಯಾರೂ ನಿಖರ ಕಾರಣಕೊಟ್ಟು ತಿಳಿಸಿಲ್ಲ. (ಏಜೆನ್ಸೀಸ್​)

    ಅನ್ಯ ಜಾತಿಯವನೊಂದಿಗೆ ಸರಸ-ಸಲ್ಲಾಪ ನಡೆಸಿ ಬಸಿರಾದ ಮಗಳನ್ನು ತಂದೆ-ತಾಯಿಯೇ ಕೊಂದುಬಿಟ್ಟರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts