More

    ಮನುಷ್ಯನ ಗುಣಾವಗುಣ ತಿಳಿಸಲಿದೆಯಂತೆ ‘ಮಿಸ್ಟರ್ ಡಿ’ ಸಿನಿಮಾ…

    ಬೆಂಗಳೂರು: ಕರೊನಾ ಕಡಿಮೆ ಆಗುತ್ತಿದ್ದಂತೆಯೇ ಚಿತ್ರರಂಗದಲ್ಲಿ ಚಟುವಟಿಕೆಗಳು ಪ್ರಾರಂಭವಾಗಿದ್ದು, ಹೊಸ ಚಿತ್ರದ ಮಹೂರ್ತಗಳು ಶುರುವಾಗತೊಡಗಿವೆ. ಅದರಂತೆ ನವರಾತ್ರಿ ಹಬ್ಬದ ಪ್ರಯುಕ್ತ ಇತ್ತೀಚೆಗಷ್ಟೇ ಹೊಸಬರ ’ಮಿಸ್ಟರ್.ಡಿ’ ಎನ್ನುವ ಚಿತ್ರವೊಂದು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಮಹೂರ್ತ ನೆರವೇರಿಸಿಕೊಂಡಿತು.

    ಇದನ್ನೂ ಓದಿ: ಕನ್ನಡಿಗನ ಡಬ್ಬಿಂಗ್; ರಾಜ್ಯೋತ್ಸವಕ್ಕೆ ಚಿತ್ರ ಬಿಡುಗಡೆ?

    ಡಾ.ರಾಜ್‌ಕುಮಾರ್ ಅಳಿಯ ಎಸ್.ಎ. ಗೋವಿಂದರಾಜ್ ಕ್ಯಾಮರ್ ಆನ್ ಮಾಡಿದರು. ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‌ಕುಮಾರ್ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಕಲಾವಿದರ ಆಯ್ಕೆ ಪ್ರಕ್ರಿಯೆ ಇನ್ನಷ್ಟೇ ಶುರುವಾಗಬೇಕಿದೆ. ದಿನ ಚೆನ್ನಾಗಿದ್ದರಿಂದ ಪೂಜೆಯನ್ನು ನೆರೆವೇರಿಸಲಾಯಿತು ಎಂದು ತಂಡ ಹೇಳಿಕೊಂಡಿದೆ.


    ಡಿಟೆಕ್ಟ್, ಡ್ಯಾಡಿ, ಡಾಟರ್ ಇನ್ನು ತರಹೇವಾರಿ ಅರ್ಥ ಶೀರ್ಷಿಕೆಗೆ ಕೊಡುತ್ತದೆ. ಕತೆಯಲ್ಲಿ ಡಿ ಎನ್ನುವುದು ಒಂದು ಪಾತ್ರವಾಗಿರುತ್ತದೆ. ಒಬ್ಬ ಮನುಷ್ಯನಲ್ಲಿ ಎಲ್ಲ ಗುಣಗಳು ಇರುತ್ತವೆ. ವಿಶ್ವದಲ್ಲಿ ಯಾರೂ ಪರಿಪೂರ್ಣವಾಗಿರೊಲ್ಲ. ಕೆಟ್ಟತನ, ಒಳ್ಳೆತನ, ದೈವತ್ವ, ರಾಕ್ಷಸತ್ವ. ಪ್ರತಿಯೊಂದು ಪ್ರತಿಯೊಬ್ಬ ಮನುಷ್ಯನಲ್ಲಿ ಇರುತ್ತೆ. ಅದನ್ನು ಡಿ ಪಾತ್ರದ ಮೂಲಕ ಅನಾವರಣ ಮಾಡುವ ಪ್ರಯತ್ನವಾಗಿದೆ.

    ಇದನ್ನೂ ಓದಿ: ಫೋರ್ಬ್ಸ್ ಪಟ್ಟಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ಹವಾ

    ವೃತ್ತಿಯಲ್ಲಿ ಆರ್ಕಿಟೆಕ್ಟ್ ಆಗಿರುವ ಸಿ.ಸಿ.ರಮೇಶ್ ಇಪ್ಪತ್ತು ವರ್ಷದ ಕೆಳಗೆ ನಿರ್ದೇಶನ, ನಟನೆಯ ಕೋರ್ಸ್‌ನ್ನು ಮುಗಿಸಿದ್ದಾರೆ. ಕೆಲಸದ ನಿಮಿತ್ತ ಚಿತ್ರರಂಗಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಈಗ ಬಣ್ಣದ ಲೋಕದಲ್ಲಿ ಸಾಧಿಸಬೇಕೆಂಬ ಹಂಬಲದಿಂದ ಸಿನಿಮಾಗೆ ಕತೆ ಬರೆದು ನಿರ್ದೇಶನ ಮಾಡುವ ಜತೆಗೆ ನಿರ್ಮಾಣ ಮಾಡುತ್ತಿದ್ದಾರೆ. ಸಂಗೀತ ಅರ್ಜುನ್‌ ಜನ್ಯಾ, ಚಿತ್ರಕತೆ ಬಿ.ಎ.ಮಧು, ಛಾಯಾಗ್ರಹಣ ಅಣಜಿ ನಾಗರಾಜು, ಕಲೆ ಪ್ರಕಾಶ್‌ ಚಿಕ್ಕಪಾಳ್ಯ ಅವರದಾಗಿದೆ. ಮೂನ್ ಲೈಟ್ ಪ್ರೊಡಕ್ಷನ್ ಮತ್ತು ವೀರ ಫಿಲಿಂಸ್ ಬ್ಯಾನರ್ ಅಡಿಯಲ್ಲಿ ಚಿತ್ರವು ಸಿದ್ದಗೊಳ್ಳುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts