More

    ಕಪೋ ಕಲ್ಪಿತಂ ಚಿತ್ರಕ್ಕೆ ಸೆನ್ಸಾರ್​ನಿಂದ ಯು/ಎ ಪ್ರಮಾಣಪತ್ರ

    ಬೆಂಗಳೂರು: ಸಂಪೂರ್ಣ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ಚಿತ್ರ ‘ಕಪೋ ಕಲ್ಪಿತಂ’ ಸೆನ್ಸಾರ್ ಮಂಡಳಿಯು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿ ಯುಎ ಪ್ರಮಾಣಪತ್ರ ನೀಡಿದೆ. ಈ ಸಿನಿಮಾ ಕುರಿತು ಮಾತನಾಡಲೆಂದೇ ಚಿತ್ರತಂಡ ಇತ್ತೀಚೆಗೆ ಸುದ್ದಿಗೋಷ್ಠಿ ಆಹ್ವಾನಿಸಿತ್ತು. ಚಿತ್ರದ ಹಲವು ವಿಶೇಷತೆಗಳನ್ನು ತಂಡದವರು ಹಂಚಿಕೊಂಡರು.

    ಇದನ್ನೂ ಓದಿ: ತೆಲುಗಿನ ಖ್ಯಾತ ನಿರೂಪಕಿ ಅನುಸೂಯ ಬಟ್ಟೆಯ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ಹಿರಿಯ ನಟ ಶ್ರೀನಿವಾಸ್​ ರಾವ್​..!

    ನಾಯಕಿಯಾಗಿ ನಟಿಸುವುದರ ಜತೆಗೆ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ ಸುಮಿತ್ರಾ ರಮೇಶ್‌ಗೌಡ. ಈ ಸಿನಿಮಾದ ಬಗ್ಗೆ ಮಾತನಾಡುವ ಅವರು, ‘ನಾನಿಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದೇನೆ. ಶೀರ್ಷಿಕೆಯು ಸಂಸ್ಕ್ರತ ಪದವಾಗಿದೆ. ಸ್ವಯಂ ಕಲ್ಪನೆ ಎಂಬುದು ಅದರ ಅರ್ಥ. ಹಾರರ್ ಕತೆಯಲ್ಲಿ ಯುವಕರ ತಂಡವೊಂದು ದೂರದ ಮನೆಗೆ ಹೋಗುತ್ತಾರೆ. ಅಲ್ಲಿ ಭೂತವಿದೆ ಅಂತ ತಿಳಿದು ಅದರಿಂದ ಹೇಗೆ ತಪ್ಪಿಸಿಕೊಂಡು ಹೊರಗೆ ಬರುತ್ತಾರೆ ಎನ್ನುವುದು ಚಿತ್ರದ ಸಾರಾಂಶವಾಗಿದ’ ಎನ್ನುತ್ತಾರೆ.

    ಮಂಡ್ಯ ಜಿಲ್ಲೆ, ಕೆ.ಆರ್. ಪೇಟೆ ಮೂಲದ ಸುಮಿತ್ರಾ ರಮೇಶ್‌ ಗೌಡ ಈ ಹಿಂದೆ ‘ಜಿಷ್ಣು’ ಸಿನಿಮಾದಲ್ಲಿ ಪಾತ್ರ ಮಾಡುವ ಜತೆಗೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಹಿತೈಷಿಗಳ ಸಲಹೆಯಂತೆ ತಾನೇಕೆ ನಿರ್ದೇಶಕಿಯಾಗಬಾರದು ಅಂತ ಯೋಚಿಸಿದ ಪ್ರತಿಫಲ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಕಿರುತೆರೆ ನಟ ಮತ್ತು ಸಣ್ಣ ಪುಟ್ಟ ಪಾತ್ರದಲ್ಲಿ ಅಭಿನಯಿಸಿದ್ದ ಪ್ರೀತಂ ಮಕ್ಕಿಹಾಲಿ ನಾಯಕನಾಗಿ ನಟಿಸಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಸಂದೀಪ್‌ ಮಲಾನಿ, ನಿರೂಪಕರಾಗಿ ಗೌರೀಶ್‌ ಅಕ್ಕಿ ಸೇರಿ ಶಿವರಾಜ್‌ ಕರ್ಕೆರ, ರಾಜೇಶ್‌ ಕಣ್ಣೂರ್, ವಿನೀತ್, ವಿಶಾಲ್, ಅಮೋಘ, ಚೈತ್ರಾ ದೀಕ್ಷಿತ್‌ ಗೌಡ ಚಿತ್ರದಲ್ಲಿದ್ದಾರೆ.

    ಇದನ್ನೂ ಓದಿ: ರೈಡರ್ ಎದೆಯಲ್ಲಿ ಡವ್ವ ಡವ್ವ…

    ರಚನೆ, ಚಿತ್ರಕತೆ, ಸಂಭಾಷಣೆ, ಎರಡು ಹಾಡುಗಳಿಗೆ ಸಾಹಿತ್ಯ, ಸಂಗೀತ ಮತ್ತು ನಿರ್ಮಾಣದಲ್ಲಿ ಪಾಲುದಾರಾಗಿರುವುದು ಮಂಗಳೂರಿನ ಗಣಿದೇವ್‌ ಕಾರ್ಕಳ. ಛಾಯಾಗ್ರಹಣ- ಸಂಕಲನ ಬಾತು ಕುಲಾಲ್ ಅವರದು. ದಕ್ಷಿಣ ಕನ್ನಡ, ಉಡುಪಿ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಗಳ ಸಾಧನೆಗೆ ರಮೇಶ್‌ ಚಿಕ್ಕೆಗೌಡ ಸವ್ಯಾಚಿ ಕ್ರಿಯೇಶನ್ಸ್ ಮೂಲಕ ಅಕ್ಷರ ಪ್ರೊಡಕ್ಷನ್ ಸಹಯೋಗದೊಂದಿಗೆ ಬಂಡವಾಳ ಹೂಡಿದ್ದಾರೆ. ಇವರೊಂದಿಗೆ ಕವಿತಾ ಕನ್ನಿಕಾ ಪೂಜಾರಿ ಸೇರಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts