More

    ಮಿಷನ್ ಇಂಧ್ರಧನುಷ್ ಸಮರ್ಪಕ ಜಾರಿಮಾಡಿ

    ದೇವದುರ್ಗ: 5ವರ್ಷದೊಳಗಿನ ಮಕ್ಕಳಲ್ಲಿ ಕಂಡಬರುವ ಏಳು ವಿವಿಧ ಕಾಯಿಲೆ ನಿರ್ಮೂಲನೆಗೆ ಆರೋಗ್ಯ ಇಲಾಖೆ ಇಂಧ್ರಧನುಷ್ ಲಸಿಕಾ ಅಭಿಯಾನ ಆರಂಭಿಸಿದೆ ಇದನ್ನು ಸಮರ್ಪಕವಾಗಿ ಜಾರಿಗೊಳಿಸಿ ಯೋಜನೆ ಯಶ್ವಗೊಳಿಸಬೇಕು ಎಂದು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಹೇಳಿದರು.

    ಇದನ್ನೂ ಓದಿ: ದ್ವಿತೀಯ ಸುತ್ತಿನ ಮಿಷನ್ ಇಂಧ್ರಧನುಷ್ 11ರಿಂದ

    ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ಮಿಷನ್ ಇಂಧ್ರಧನುಷ್ ಯೋಜನೆಯ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಗುರುವಾರ ಮಾತನಾಡಿದರು. 0ರಿಂದ 2ವರ್ಷ ಹಾಗೂ 2ವರ್ಷದಿಂದ 5ವರ್ಷದೊಳಗಿನ ಮಕ್ಕಳಿಗೆ ಎರಡು ವಿಧದಲ್ಲಿ ಲಸಿಕೆ ಹಾಕುವ ಯೋಜನೆ ಇದಾಗಿದೆ.

    ಅಲ್ಲದೆ ಗರ್ಭಿಣಿಯರಿಗೂ ಲಸಿಕೆ ಹಾಕಲಾಗುತ್ತಿದೆ. ಸೆ.11ರಿಂದ 16 ವರೆಗೆ ಎರಡನೇ ಹಂತದಲ್ಲಿ ಮಿಷನ್ ಇಂಧ್ರಧನುಷ್ ಅಭಿಯಾನ ಆರಂಭಗೊಂಡಿದೆ. ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಯೋಜನೆ ಯಶಸ್ವಿಗೊಳಿಸಬೇಕು.

    ಪ್ರತಿಯೊಂದು ಅಂಗನವಾಡಿ ಕೇಂದ್ರ, ತಾಂಡಾ, ದೊಡ್ಡಿಗಳಿಗೆ ತೆರಳಿ ಕ್ಯಾಂಪ್ ತೆಗೆದು ಲಸಿಕೆ ಹಾಕಬೇಕು. ಮಹಿಳೆಯರು, ಮಕ್ಕಳು ಲಸಿಕೆಯ ಲಾಭ ಪಡೆಯಬೇಕು ಎಂದು ಹೇಳಿದರು.

    ಅಭಿಯಾನ ಯಶಸ್ವಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ತಾಪಂ, ಪುರಸಭೆ ಸೇರಿ ಎಲ್ಲ ಇಲಾಖೆ ಕೈಜೋಡಿಸಿ ಅಗತ್ಯ ಸಹಕಾರ ನೀಡಬೇಕು ಎಂದು ಸೂಚನೆ ನೀಡಿದರು.

    ಟಿಎಚ್‌ಒ ಡಾ.ಬನದೇಶ್ವರ, ವೈದ್ಯಾಧಿಕಾರಿ ಶಿವಾನಂದ, ಸಿಡಿಪಿಒ ವೆಂಕಟಪ್ಪ,

    ಡಾ.ಅಯ್ಯಣ್ಣ, ಡಾ.ಎಂ.ಡಿ.ಹಸನ್, ಡಾ.ಎಂ.ಎಸ್.ಹೊಸಮನಿ,
    ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಭೂಮನಗುಂಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts