More

    ಒಲಿಂಪಿಕ್ಸ್ ​ಬೆಳ್ಳಿ ವಿಜೇತೆ ಮೀರಾಬಾಯಿ ಚಿನ್ನದ ಕಿವಿಯೋಲೆಗೆ ಅನುಷ್ಕಾ ಶರ್ಮ ಫಿದಾ!

    ನವದೆಹಲಿ: ವೇಟ್‌ಲಿಫ್ಟಿಂಗ್‌ನಲ್ಲಿ ರಜತ ಜಯಿಸುವ ಮೂಲಕ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೊದಲ ದಿನವೇ ಭಾರತದ ಪದಕದ ಖಾತೆ ತೆರೆದು ಮನೆಮಾತಾದವರು ಮಣಿಪುರದ ವೇಟ್‌ಲ್ಟಿರ್ ಮೀರಾಬಾಯಿ ಚಾನು. ಇದೀಗ ಮೀರಾಬಾಯಿ ಚಾನು ರಜತ ಬೇಟೆಯ ನಡುವೆ ಒಲಿಂಪಿಕ್ಸ್ ರಿಂಗ್ ಮಾದರಿಯ ಅವರ ಚಿನ್ನದ ಕಿವಿಯೋಲೆ ಸಾಕಷ್ಟು ಸದ್ದು ಮಾಡುತ್ತಿದೆ.

    ಬಾಲಿವುಡ್ ನಟಿ ಅನುಷ್ಕಾ ಶರ್ಮ ಕೂಡ ಮೀರಾಬಾಯಿ ಅವರ ಕಿವಿಯೋಲೆಗೆ ಫಿದಾ ಆಗಿದ್ದಾರೆ. ಮೀರಾಗೆ ಅದೃಷ್ಟ ತರಲೆಂದು ಅವರ ಅಮ್ಮ ತಮ್ಮ ಆಭರಣವನ್ನು ಮಾರಿ ಈ ವಿಶಿಷ್ಟ ಕಿವಿಯೋಲೆಯನ್ನು ಉಡುಗೊರೆ ನೀಡಿದ್ದರು. ಶನಿವಾರ ಮೀರಾ ಈ ಕಿವಿಯೋಲೆ ಧರಿಸಿಯೇ ಸ್ಪರ್ಧಿಸಿದ್ದರು. ಅದರಿಂದಲೇ ಅವರಿಗೆ ಪದಕದ ಅದೃಷ್ಟ ಒಲಿಯಿತು ಎನ್ನಲಾಗುತ್ತಿದೆ.

    ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದರೆ ಕೋಟ್ಯಧಿಪತಿ! ರಾಜ್ಯ ಸರ್ಕಾರಗಳಿಂದ ಕೋಟಿ ಕೋಟಿ ಬಹುಮಾನ

    ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಮೀರಾ ಸಾಧನೆಯನ್ನು ಶ್ಲಾಸುತ್ತ ಅನುಷ್ಕಾ ಶರ್ಮ, ಅವರ ಕಿವಿಯೋಲೆಯನ್ನು ವಿಶೇಷವಾಗಿ ಮೆಚ್ಚುತ್ತ ‘ಇದು ಸುಂದರವಾಗಿದೆ’ ಎಂದು ಹೃದಯದ ಇಮೋಜಿ ಹಾಕಿಕೊಂಡಿದ್ದರು. ಇದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಮಹಿಳೆಯರು ಮೀರಾ ಅವರ ಕಿವಿಯೋಲೆಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

    ಈ ನಡುವೆ ಮೀರಾಬಾಯಿ ಚಾನುಗೆ ಜೀವಮಾನ ಪೂರ್ತಿ ಉಚಿತವಾಗಿ ಪಿಜ್ಜಾ ಸವಿಯುವ ಅವಕಾಶವೂ ಲಭಿಸಿದೆ. ಮಣಿಪುರಿ ವೇಟ್‌ಲ್ಟಿರ್ ಮೀರಾಗೆ ಇನ್ನು ಜೀವಮಾನವಿಡೀ ಅವರು ಬಯಸಿದಾಗಲೆಲ್ಲಾ ಉಚಿತವಾಗಿ ಪಿಜ್ಜಾ ಪೂರೈಸುವುದಾಗಿ ಭಾನುವಾರ ಘೋಷಿಸಿದೆ. ಕರ್ಣಂ ಮಲ್ಲೇಶ್ವರಿ ಬಳಿಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ವೇಟ್‌ಲ್ಟಿರ್ ಮತ್ತು ಬೆಳ್ಳಿ ಪದಕ ಗೆದ್ದ ಭಾರತದ 2ನೇ ಮಹಿಳೆ ಎನಿಸಿದ ಮೀರಾ, ಸಾಧನೆಯ ಶಿಖರವೇರುವ ಹಾದಿಯಲ್ಲಿ ತಮ್ಮ ನೆಚ್ಚಿನ ಪಿಜ್ಜಾದಿಂದ ದೂರ ಉಳಿದು ಫಿಟ್ನೆಸ್‌ಗಾಗಿ ಕಠಿಣ ಪರಿಶ್ರಮಪಟ್ಟಿದ್ದರು. ಹೀಗಾಗಿ ಪದಕ ಗೆಲುವಿನ ಬಳಿಕ ಮೊದಲನೆಯದಾಗಿ ಪಿಜ್ಜಾ ತಿನ್ನುವುದಾಗಿ ಮೀರಾ ಶನಿವಾರ ಹೇಳಿಕೊಂಡಿದ್ದರು. ಮೀರಾ ಅವರ ಈ ಹೇಳಿಕೆಗೆ ಪ್ರತಿಯಾಗಿ ಡಾಮಿನೋಸ್ ಇಂಡಿಯಾ ಪಿಜ್ಜಾ ಕಂಪನಿ, ‘ಮೀರಾ ಹೇಳಿದ್ದು ನಮಗೆ ಕೇಳಿಸಿದೆ. ಪಿಜ್ಜಾ ತಿನ್ನಲು ಮೀರಾ ಮುಂದೆಂದೂ ಕಾಯಬೇಕಾಗಿಲ್ಲ. ನಾವಿನ್ನು ಅವರಿಗೆ ಜೀವನವಿಡೀ ಉಚಿತವಾಗಿ ಪಿಜ್ಜಾ ಪೂರೈಸುತ್ತೇವೆ’ ಎಂದು ಟ್ವೀಟಿಸಿದೆ.

    ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ನಾಳೆ ಭಾರತಕ್ಕೆ ವಾಪಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts