ಬರ್ಮಿಂಗ್ಹ್ಯಾಂ: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಇದೀಗ ಮತ್ತೊಂದು ಪದಕ ಬಂದಿದೆ. ಮೀರಾಬಾಯಿ ಚಾನು ವೇಯ್ಟ್ಲಿಫ್ಟಿಂಗ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಈ ಕ್ರೀಡಾಕೂಟದ ಎರಡನೇ ದಿನವೇ ಭಾರತಕ್ಕೆ ಪ್ರಥಮ ಚಿನ್ನದ ಪದಕ ತಂದುಕೊಟ್ಟಿದ್ದಾರೆ.
ಇವರು ಮಹಿಳೆಯರ 49 ಕೆ.ಜಿ. ವಿಭಾಗದಲ್ಲಿ ಈ ಪದಕವನ್ನು ಗಳಿಸಿದ್ದಾರೆ. ಇವರು ತಮ್ಮ ಮೂರನೇ ಪ್ರಯತ್ನದಲ್ಲಿ 90 ಕೆ.ಜಿ. ಎತ್ತುವಲ್ಲಿ ವಿಫಲರಾದರೂ 88 ಕೆ.ಜಿ. ಭಾರ ಎತ್ತುವ ಮೂಲಕ ಚಿನ್ನ ಗಳಿಸಿದ್ದಾರೆ. ಅಲ್ಲದೆ ಒಟ್ಟು 201 ಕೆ.ಜಿ ಭಾರ ಎತ್ತುವ ಮೂಲಕ ಈ ವಿಭಾಗದಲ್ಲಿ ದಾಖಲೆ ಬರೆದಿದ್ದಾರೆ.
ಇಂದು ಇದಕ್ಕೂ ಮುನ್ನ ಸಂಕೇತ್ ಸರ್ಗರ್ ಪುರುಷರ 55 ಕೆ.ಜಿ. ವಿಭಾಗದ ವೇಯ್ಟ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿಯನ್ನು ಗೆಲ್ಲುವ ಮೂಲಕ ಈ ಕ್ರೀಡಾಕೂಟದಲ್ಲಿ ಭಾರತಕ್ಕೆ ಪ್ರಪ್ರಥಮ ಪದಕ ಗಳಿಸಿಕೊಟ್ಟಿದ್ದಾರೆ.
ನಂತರ ಕನ್ನಡಿಗ, ಕುಂದಾಪುರದ ಗುರುರಾಜ್ ಪೂಜಾರಿ 61 ಕೆ.ಜಿ. ವಿಭಾಗದಲ್ಲಿ ವೇಯ್ಟ್ ಲಿಫ್ಟ್ ಮಾಡಿ ಕಂಚಿನ ಪದಕ ಗಳಿಸಿದ್ದಾರೆ. ಹೀಗಾಗಿ ಭಾರತ ಒಂದೇ ದಿನದಲ್ಲಿ ಚಿನ್ನ, ಬೆಳ್ಳಿ, ಕಂಚಿನ ಪದಕ ಗೆದ್ದಂತಾಗಿದೆ. ಗುರುರಾಜ್ ಪೂಜಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕ್ರೀಡಾ ಸಚಿವ ನಾರಾಯಣಗೌಡ ಅಭಿನಂದನೆ ಸಲ್ಲಿಸಿದ್ದಲ್ಲದೆ, 8 ಲಕ್ಷ ರೂ. ನಗದು ಪುರಸ್ಕಾರ ನೀಡುವುದಾಗಿ ಘೋಷಿಸಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್, ಭಾರತಕ್ಕೆ ಮತ್ತೊಂದು ಪದಕ; ಕಂಚು ಗೆದ್ದ ಕುಂದಾಪುರದ ಗುರುರಾಜ್ ಪೂಜಾರಿ..
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ಬೇಟೆ ಆರಂಭಿಸಿದ ಭಾರತ: ಬೆಳ್ಳಿಗೆ ಮುತ್ತಿಟ್ಟ ಸಂಕೇತ್ ಸರ್ಗರ್