More

    ಪ್ಯಾರಿಸ್​ನ ನೀರಿನಲ್ಲೂ ಕರೊನಾ ವೈರಸ್​, ಪೂರೈಕೆ ಬಂದ್​

    ಪ್ಯಾರಿಸ್​: ಫ್ರಾನ್ಸ್​ ಕರೊನಾ ಸಂಕಷ್ಟಕ್ಕೆ ತತ್ತರಿಸಿದೆ. ಈವರೆಗೆ ಅಲ್ಲಿ 1,54,098 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 19,778 ಜನರು ಮೃತಪಟ್ಟಿದ್ದಾರೆ. ಕೋವಿಡ್​-19 ನಿಯಂತ್ರಣಕ್ಕೆ ಸಿಗದ ಕಾರಣ ಅಲ್ಲಿ ದೇಶಾದ್ಯಂತ ಲಾಕ್​ಡೌನ್​ ಅವಧಿಯನ್ನು ವಿಸ್ತರಿಸಲಾಗಿದೆ.

    ಇದೀಗ ಆಘಾತಕಾರಿ ಸುದ್ದಿಯೊಂದು ಪ್ಯಾರಿಸ್​ ನಗರದಿಂದ ವರದಿಯಾಗಿದೆ. ಅಲ್ಲಿನ ನೀರಿನಲ್ಲೂ ಕರೊನಾ ವೈರಸ್​ ಪತ್ತೆಯಾಗಿದೆ. ನೀರಿನಲ್ಲಿ ಅತಿ ಸಣ್ಣ ಪ್ರಮಾಣದಲ್ಲಿ ವೈರಸ್​ ಕಣಗಳಿರುವುದು ಪರೀಕ್ಷೆಯಿಂದ ಗೊತ್ತಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದರ ಪ್ರಮಾಣ ತೀರಾ ಕಡಿಮೆಯಿದ್ದು, ನಗರದಲ್ಲಿ ಸ್ವಚ್ಛತಾ ಕಾರ್ಯಗಳೀಗೆ ಬಳಸಲಾಗುವ ನೀರಿನಲ್ಲಿ ಕಂಡು ಬಂದಿದೆ. ಕುಡಿಯುವ ನೀರು ಅತ್ಯಂತ ಶುದ್ಧವಾಗಿದೆ ಎಂದು ಪ್ಯಾರಿಸ್​ ನೀರು ಪ್ರಾಧಿಕಾರದ ಪ್ರಯೋಗಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಈ ನೀರಿನ ಪೂರೈಕೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ.

    ನಗರದ 27 ಕಡೆಗಳಲ್ಲಿ ಪರೀಕ್ಷೆಗೆಂದು ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಈ ಪೈಕಿ ನೀರಿನ ನಾಲ್ಕು ಮಾದರಿಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕರೊನಾ ವೈರಸ್​ಗಳಿರುವುದು ಕಂಡುಬಂದಿದೆ ಎಂದು ಪ್ರಯೋಗಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
    ನಗರಕ್ಕೆ ಕುಡಿಯುವ ನೀರನ್ನು ಸಂಪೂರ್ಣ ಪ್ರತ್ಯೇಕ ಹಾಗೂ ಸ್ವತಂತ್ರ ಸರಬರಾಜು ಜಾಲದಿಂದ ಪೂರೈಸಲಾಗುತ್ತದೆ. ಇದರಲ್ಲಿ ಯಾವುದೇ ಸೋಂಕು ಕಂಡುಬಂದಿಲ್ಲ. ಹೀಗಾಗಿ ಕುಡಿಯುವ ಉದ್ದೇಶಗಳಿಗಾಗಿ ಪೂರೈಸಲಾಗುವ ನೀರನ್ನು ಯಾವುದೇ ಹಿಂಜರಿಕೆ ಇಲ್ಲದೆ, ಅತಂಕಕ್ಕೆ ಒಳಗಾಗದೆ ಸೇವಿಸಬಹುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

    ನಗರದ ಸಿಯನ್ನಾ ನದಿ ಹಾಗೂ ಅವರ್ಕ್​ ಕಾಲುವೆಗಳಿಂದ ನಗರದ ಸ್ವಚ್ಛತಾ ಕಾರ್ಯ, ಉದ್ಯಾನಗಳಿಗೆ ನೀರುಣಿಸಲು, ಕಾರಂಜಿಗಳಿಗೆ ಪೂರೈಸಲು ಹಾಗೂ ಬೇರೆ ಉದ್ದೇಶಗಳಿಗಾಗಿ ನೀರನ್ನು ಪಡೆಯಲಾಗುತ್ತದೆ. ಇದರಲ್ಲಿ ಕರೊನಾ ವೈರಸ್​ ಕಂಡುಬಂದ ಕಾರಣಗಳಿಂದಾಗಿ ನೀರಿನ ಪಂಪಿಂಗ್​ಅನ್ನು ಸ್ಥಗಿತಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ನೀರಿನ ಬಳಕೆಯಿಂದಾಗುವ ತೊಂದರೆ ಹಾಗೂ ಅದರ ನಿವಾರಣೆ ಕ್ರಮಗಳಿಗಾಗಿ ಅಧಿಕಾರಿಗಳು ಪ್ರಾದೇಶಿಕ ಆರೋಗ್ಯ ಸಂಸ್ಥೆಯ ಮೊರೆ ಹೋಗಿದ್ದಾರೆ.

    ಕೇರಳದಲ್ಲಿ ಹೋಟೆಲ್​ಗಳು ಓಪನ್​, ಬಸ್​ ಸಂಚಾರವೂ ಶುರು; ಸರ್ಕಾರದ ಕ್ರಮಕ್ಕೆ ಕೆಂಡಾಮಂಡಲವಾಯ್ತೇ ಕೇಂದ್ರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts