More

    ಫೋನ್​ ಹ್ಯಾಕ್​ ಮಾಡಿ ರಹಸ್ಯ ಮಾಹಿತಿಗಳನ್ನು ಕದ್ದು ಬೆದರಿಕೆ ಹಾಕ್ತಿದ್ದ 16 ವರ್ಷದ ಹುಡುಗನ ಬಂಧನ!

    ಭೋಪಾಲ್​: ಮೊಬೈಲ್​ ಫೋನ್​ಗಳನ್ನು ಹ್ಯಾಕ್​ ಮಾಡಿ ಗೌಪ್ಯ ಮಾಹಿತಿಯನ್ನು ಕದ್ದು ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ 16 ವರ್ಷದ ಹುಡುಗನನ್ನು ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಹುಡುವ ಅನೇಕ ಮಂದಿಯಿಂದ ಈಗಾಗಲೇ ಹಣ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ.

    ಸಿಂಗ್ರೌಲಿ ಜಿಲ್ಲೆ ಮಾರ್ವಾದಲ್ಲಿರುವ ಮನೆಯಲ್ಲಿ ಹುಡುಗನನ್ನು ಸೋಮವಾರ ಬಂಧಿಸಲಾಗಿದೆ. ಕಳೆದ ಕೆಲ ತಿಂಗಳಿಂದ ಹುಡುಗು ಒಂದು ಡಜನ್​ಗೂ ಅಧಿಕ ಮಂದಿಯನ್ನು ಗುರಿಯಾಗಿಸಿದ್ದಾನೆ. ಆದಾಗ್ಯೂ, ಯಾರೊಬ್ಬರು ಮುಂದೆ ಬಂದು ದೂರು ನೀಡದಿರುವುದು ಅಚ್ಚರಿಯ ಸಂಗತಿಯಾಗಿ ಉಳಿದಿದೆ.

    ಆರೋಪಿ ಕೆನಡಿಯನ್​ ಫೋನ್​ ನಂಬರ್​ ಬಳಸಿ ವಾಟ್ಸ್​ಆ್ಯಪ್​ ಖಾತೆಯನ್ನು ಕ್ರಿಯೆಟ್​ ಮಾಡಿದ್ದಾನೆ. ನಂಬರ್​ ಹೇಗೆ ದೊರೆಯಿತು ಎಂಬುದು ತನಿಖಾ ನಂತರವೇ ತಿಳಿಯಲಿದೆ. ಅನಿವಾಸಿ ಭಾರತೀಯ ಯುವತಿ ಹೆಸರಿನಲ್ಲಿ ವಾಟ್ಸ್​ಆ್ಯಪ್​ ಖಾತೆಯನ್ನು ಸೃಷ್ಟಿಸಿ, ಜನರೊಂದಿಗೆ ಚಾಟ್​ ಮಾಡಲು ಆರಂಭಿಸಿದ್ದಾನೆ. ಬಳಿಕ ಅಶ್ಲೀಲ ವಿಡಿಯೋ, ಆಡಿಯೋ ಹಾಗೂ ಫೋಟೋಗಳನ್ನು ಸಂಗ್ರಹಿಸಿ, ಬೆದರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ.

    ಇಷ್ಟೇ ಅಲ್ಲದೆ, ಮೊಬೈಲ್​ ಫೋನ್​ಗಳನ್ನು ಹ್ಯಾಕ್​ ಮಾಡಿರುವ ಹುಡುಗ ಗೌಪ್ಯ ಮಾಹಿತಿಗಳನ್ನು ಸಂಗ್ರಹಿಸಿದ್ದಾನೆ. ಸಂತ್ರಸ್ತರ ಫೋನ್​ನಲ್ಲಿದ್ದ ಆಡಿಯೋ ಮತ್ತು ವಿಡಿಯೋಗಳನ್ನು ಹ್ಯಾಕ್​ ಮೂಲಕ ಪಡೆದುಕೊಂಡು ಹಣಕ್ಕಾಗಿ ಬೆದರಿಕೆ ಹಾಕಿ ಹಲವರ ಬಳಿ ಹಣವನ್ನು ಪಡೆದಿದ್ದಾನೆ.

    ಆನ್​ಲೈನ್​ ಹ್ಯಾಕರ್​ನಿಂದ ತುಂಬಾ ದಿನಗಳಿಂದ ಕಿರುಕುಳ ಅನುಭವಿಸುತ್ತಿದ್ದೇವೆ ಎಂದು ಆರೋಪಿಯ ನೆರೆ ಮನೆಯವರು ದೂರು ನೀಡಿದ್ದರು. ಅಲ್ಲದೆ, ಈ ಸಮಸ್ಯೆ ಬಗೆಹರಿಸುವುದಾಗಿ ಪಕ್ಕದ ಮನೆಯ ಹುಡುಗ ಹಣ ತೆಗೆದುಕೊಂಡಿದ್ದನ್ನು ಪೊಲೀಸರ ಮುಂದೆ ಹೇಳಿದಾಗ, ಅವರ ಅನುಮಾನ ಹುಡಗನ ಮೇಲೆ ಹೋಗಿದೆ. ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಹುಡು ಎಲ್ಲವನ್ನು ಬಾಯ್ಬಿಟ್ಟಿದ್ದಾನೆ.

    ಮೊದಲು ತನ್ನ ಮೊಬೈಲ್​ನಲ್ಲಿ ಜಿಪಿಎಸ್​ ಲೊಕೇಶನ್​ ಬದಲವಾಣೆ ಮಾಡುವುದನ್ನು ಕಲಿತದ್ದಾಗಿ ಹುಡುಗ ಹೇಳಿದ್ದಾನೆ. ಭಾರತದಲ್ಲಿ ಬ್ಯಾನ್​ ಆಗಿರುವ ಆ್ಯಪ್​ಗಳನ್ನು ಬಳಸಿಕೊಂಡು ಹ್ಯಾಕಿಂಗ್​ ಅಧ್ಯಯನ ವಸ್ತುಗಳನ್ನು ಖರೀದಿಸಿ, ನಂತರ ಫೋನ್​ಗಳನ್ನು ಹ್ಯಾಕ್​ ಮಾಡಿ ಬೆದರಿಸಿ ಹಣ ಪಡೆದು ಮತ್ತಷ್ಟು ಹ್ಯಾಕಿಂಗ್​ ಅಧ್ಯಯನ ವಸ್ತುಗಳನ್ನು ಖರೀದಿಸುತ್ತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. (ಏಜೆನ್ಸೀಸ್​)

    ಬಾಲಿವುಡ್​ ಬ್ಯೂಟಿ ಅನುಷ್ಕಾ ಶರ್ಮಾ ಬಾಡಿಗಾರ್ಡ್​ ಸಂಬಳ ಕೇಳಿದ್ರೆ ಬೆರಗಾಗುವುದು ಖಂಡಿತ!

    ಗ್ರಾಪಂಗಳಿಗಿಲ್ಲ ಮರ ಕಡಿವ ಅಧಿಕಾರ: ಕೆರೆ ವರ್ಗಾವಣೆ ಬಳಿಕವೂ ಸರ್ಕಾರದ್ದೇ ಮಾಲೀಕತ್ವ, ಹೈಕೋರ್ಟ್ ಆದೇಶ..

    ಪರಭಾಷೆಗೆ ಆಶಿಕಾ?: ಚಾಲೆಂಜಿಂಗ್ ಪಾತ್ರಗಳ ಹುಡುಕಾಟದಲ್ಲಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts