ಗ್ರಾಪಂಗಳಿಗಿಲ್ಲ ಮರ ಕಡಿವ ಅಧಿಕಾರ: ಕೆರೆ ವರ್ಗಾವಣೆ ಬಳಿಕವೂ ಸರ್ಕಾರದ್ದೇ ಮಾಲೀಕತ್ವ, ಹೈಕೋರ್ಟ್ ಆದೇಶ..

ಬೆಂಗಳೂರು: ಸರ್ಕಾರದ ಸುಪರ್ದಿಯಲ್ಲಿರುವ ಕೆರೆಗಳನ್ನು ಗ್ರಾಮ ಪಂಚಾಯಿತಿಗಳ ನಿರ್ವಹಣೆಗೆ ವಹಿಸಿದ ಬಳಿಕವೂ ಅವುಗಳ ಮಾಲೀಕತ್ವ ಸರ್ಕಾರದ ಬಳಿಯೇ ಮುಂದುವರಿಯುತ್ತದೆ ಹಾಗೂ ಕೆರೆ ಏರಿಯಲ್ಲಿರುವ ಮರಗಳನ್ನು ಸರ್ಕಾರದ ಅನುಮತಿ ಇಲ್ಲದೆ ಕತ್ತರಿಸುವ ಅಧಿಕಾರ ಗ್ರಾ.ಪಂ.ಗಳಿಗಿರುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಬಗ್ಗೆ ಸುತ್ತೋಲೆ ಹೊರಡಿಸುವಂತೆಯೂ ಸರ್ಕಾರಕ್ಕೆ ನಿರ್ದೇಶಿಸಿದೆ. ಕೋಲಾರದ ಬಂಗಾರಪೇಟೆ ತಾಲೂಕಿನ ಮಾರಿಕುಪ್ಪಂ ಗ್ರಾ.ಪಂ. ವ್ಯಾಪ್ತಿಯ ಕೆರೆ ಏರಿ ಜಾಗದಲ್ಲಿರುವ ಮರಗಳನ್ನು ಕತ್ತರಿಸಲು 2012ರಲ್ಲಿ ಕರೆಯಲಾಗಿದ್ದ ಹರಾಜು ಪ್ರಶ್ನಿಸಿ ಸ್ಥಳೀಯ ನಿವಾಸಿ ಪಿ.ಎಂ.ವೆಂಕಟರಾಮ ರೆಡ್ಡಿ ಸಲ್ಲಿಸಿದ್ದ ಪಿಐಎಲ್ ಅನ್ನು … Continue reading ಗ್ರಾಪಂಗಳಿಗಿಲ್ಲ ಮರ ಕಡಿವ ಅಧಿಕಾರ: ಕೆರೆ ವರ್ಗಾವಣೆ ಬಳಿಕವೂ ಸರ್ಕಾರದ್ದೇ ಮಾಲೀಕತ್ವ, ಹೈಕೋರ್ಟ್ ಆದೇಶ..