More

    ಗೋವಿಂದರಾಜನಗರ ಅಭಿವೃದ್ಧಿಯ ವಿವಿಧ ಕಾಮಗಾರಿಗಳಿಗೆ ಚಾಲನೆ|ಸಚಿವರ ಕಾರ್ಯಕ್ಕೆ ನಾಗರಿಕರ ಮೆಚ್ಚುಗೆ

    ಬೆಂಗಳೂರು: ಗೋವಿಂದರಾಜನಗರದ ಅಭಿವೃದ್ಧಿಗೆ ವಸತಿ ಸಚಿವ ವಿ. ಸೋಮಣ್ಣ ಅವರ ಕೊಡುಗೆ ಅಪಾರ. ದಿನನಿತ್ಯವೂ ಅವರು ಕ್ಷೇತ್ರದ ಅಭಿವೃದ್ಧಿ, ನಾಗರಿಕರಿಗೆ ಮೂಲಸೌಕರ್ಯ ಕೊರತೆ ನೀಗಿಸುವಂಥ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಬಡವರು ಹೆರಿಗೆಗೆ ಹೆಚ್ಚಿನ ಹಣ ವ್ಯಯಿಸುವ ಪರಿಸ್ಥಿತಿ ಇದ್ದದ್ದನ್ನು ಗಮನಿಸಿದ ಸೋಮಣ್ಣ, ಬಿಬಿಎಂಪಿ ಮತ್ತು ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಲ್ಲಿ ಗೋವಿಂದರಾಜನಗರ ವಾರ್ಡ್​ನಲ್ಲಿ ಹೆರಿಗೆ ಆಸ್ಪತ್ರೆ ಸ್ಥಾಪಿಸಲು ಪ್ರಮುಖ ಕಾರಣಕರ್ತರಾದ್ದಾರೆ. ಅಗ್ರಹಾರ ದಾಸರಹಳ್ಳಿ ವ್ಯಾಪ್ತಿಯಲ್ಲಿ ಸಿಎಂ ಯಡಿಯೂರಪ್ಪ ಅವರಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದಾರೆ. ಜನರಿಗೆ ಆರೋಗ್ಯವನ್ನು ನೀಡಿದರೆ ಸಾಕು, ಕಾಯಕವೇ ಕೈಲಾಸ ಎಂಬ ಬಸವಣ್ಣ ಅವರ ಧ್ಯೇಯವಾಕ್ಯದೊಂದಿಗೆ ತಮ್ಮ ಪಾಡಿಗೆ ತಾವು ದುಡಿದು ತಿನ್ನುತ್ತಾರೆ ಎಂಬುದು ಸೋಮಣ್ಣ ಅವರ ನಿಲುವು.

    ಇದನ್ನೂ ಓದಿ: ಬಿಪಿಎಲ್ ಕಾರ್ಡುದಾರರ ಗಮನಕ್ಕೆ: ನಕಲಿ ಮತ್ತು ಅನರ್ಹರ ವಿರುದ್ಧ ಕ್ರಮ ತೆಗೆದುಕೊಳ್ತೇವೆ ಎಂದು ಎಚ್ಚರಿಕೆ ನೀಡಿದ ಸಿಎಂ

    ವೈದ್ಯಕೀಯ ಸೌಲಭ್ಯ ನೀಡುವುದರ ಜತೆಗೆ ರಸ್ತೆ, ನೀರಿನಂತಹ ಮೂಲಸೌಕರ್ಯ ಒದಗಿಸುವಲ್ಲಿ ಸೋಮಣ್ಣ ಮುಂಚೂಣಿಯಲ್ಲಿದ್ದಾರೆ. ಕ್ಷೇತ್ರದಲ್ಲಿನ ರಸ್ತೆಗಳಿಗೆ ಡಾಂಬರೀಕರಣ, ಪಾದಚಾರಿ ಮಾರ್ಗದ ಅಭಿವೃದ್ಧಿ, ಬಡಾವಣೆಯಲ್ಲಿನ ಹಲವಾರು ಉದ್ಯಾನವನಗಳ ಅಭಿವೃದ್ಧಿ ಮತ್ತು ನಿರ್ವಹಣೆ ಮಾಡಲಾಗುತ್ತಿದೆ. ಯುವಕರು ಉತ್ತಮ ಆರೋಗ್ಯ ಹೊಂದಲು ಕಬಡ್ಡಿಯಂತಹ ದೈಹಿಕ ಕಸರತ್ತಿನ ಆಟವಾಡಬೇಕು ಎಂಬ ನಿಲುವಿನಲ್ಲಿ, ಗೋವಿಂದರಾಜನಗರ ವಾರ್ಡ್ ವ್ಯಾಪ್ತಿಯ ಕಬಡ್ಡಿ ಕ್ರೀಡಾಂಗಣದ ಅಭಿವೃದ್ಧಿ ಮಾಡಲಾಗುತ್ತಿದೆ. ಕಲೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನೂತನ ಕಲಾಮಂದಿರದ ನಿರ್ಮಾಣ ಕಾರ್ಯ ಸಾಗಿದೆ. ಸುಸಜ್ಜಿತವಾದ ಬೆಸ್ಕಾಂ ಕಚೇರಿ ನಿರ್ವಣ, ಮೂಡಲಪಾಳ್ಯದಲ್ಲಿ ವಿವಿದ್ದೋದ್ದೇಶದ ಬೃಹತ್ ಕಟ್ಟಡದ ನಿರ್ಮಾಣ ಹಾಗೂ ಕಲ್ಯಾಣನಗರದ ದೇವಸ್ಥಾನದಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಅಲ್ಲದೆ, ಕಾವೇರಿಪುರ ವಾರ್ಡ್​ನಲ್ಲಿ ಪಂಚಶೀಲನಗರದಲ್ಲಿ ಹೈಟೆಕ್ ಬಸ್ ನಿಲ್ದಾಣದ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಪಾಲಿಕೆ ಕಟ್ಟಡಗಳನ್ನು ಆಧುನೀಕರಿಸಿ ಸುಸಜ್ಜಿತವಾಗಿ ನಿರ್ವಿುಸಲಾಗಿದೆ. ರಾಜ್ಯ ಸರ್ಕಾರದಲ್ಲಿ ಸಚಿವರಾದರೂ ಕ್ಷೇತ್ರದ ಅಭಿವೃದ್ಧಿ ಕುರಿತು ಸೋಮಣ್ಣ ಅವರ ಕಾಳಜಿ ಕಡಿಮೆಯಾಗಿಲ್ಲ. ಕಾಲಕಾಲಕ್ಕೆ ಕ್ಷೇತ್ರದಲ್ಲಿ ನಡೆಯುವ ಕಾಮಗಾರಿ ಪರಿಶೀಲನೆ ನಡೆಸಿ ಕಾಮಗಾರಿ ಗುಣಮಟ್ಟದ ಬಗ್ಗೆ ಗಮನಿಸುತ್ತಾರೆ. ಕ್ಷೇತ್ರದ ಜನರಿಗೆ ಉತ್ತಮ ಸೇವೆಗಳು ಲಭಿಸಬೇಕು ಎಂಬ ಕಾರಣಕ್ಕೆ ನಿರಂತರ ಕಾಳಜಿ ವಹಿಸುತ್ತಾರೆ.

    ಇದನ್ನೂ ಓದಿ: ಗಂಡ-ಹೆಂಡ್ತಿ ಜಗಳ ವಿಮಾನದಲ್ಲಿ ಬಾಂಬ್​ ಇಡುವ ತನಕ…

    ಸಬಲೀಕರಣ ಯೋಜನೆಗಳು: ಸಮಾಜದಲ್ಲಿ ಇರುವ ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದವರು ಆರ್ಥಿಕವಾಗಿ ಸಬಲರಾದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂಬುದನ್ನು ಸೋಮಣ್ಣ ಮನಗಂಡಿದ್ದಾರೆ. ಸಾರ್ವಜನಿಕರ ಆರೋಗ್ಯ, ಶಿಕ್ಷಣ, ನೈರ್ಮಲ್ಯ, ರಸ್ತೆ ಸೇರಿ ಅನೇಕ ಅವಶ್ಯಕತೆ ಇರುವ ಕಾಮಗಾರಿಗಳನ್ನು ರೂಪಿಸಿ ಜಾರಿಗೆ ತರುತ್ತಾರೆ. ಆಸ್ಪತ್ರೆ, ಪಾರ್ಕ್ ಮತ್ತು ಉತ್ತಮ ರಸ್ತೆ, ಮಳೆ ನೀರು ಸರಾಗವಾಗಿ ಸಾಗಲು ಚರಂಡಿ ವ್ಯವಸ್ಥೆ ಮಾಡಲಾಗುತ್ತಿದೆ. ಶೀಟ್, ಹೆಂಚಿನ ಮನೆಯಲ್ಲಿ ವಾಸಿಸುವ ಆರ್ಥಿಕವಾಗಿ ಹಿಂದುಳಿದವರಿಗೆ ಒಂಟಿ ಮನೆ ಯೋಜನೆಯಲ್ಲಿ ಕಾಂಕ್ರೀಟ್ ಮೌಲ್ಡ್ ಮನೆ ನಿರ್ಮಾಣ ನಿರಂತರವಾಗಿ ಸಾಗಿದೆ. ಶ್ರೀಮಂತರಿಗೆ ದೊರಕುವಂತಹ ಸೌಲಭ್ಯಗಳು ಬಡವರಿಗೂ ಲಭಿಸಬೇಕು. ಆ ಮೂಲಕ ಮಾತ್ರವೇ ಸಮ ಸಮಾಜ ನಿರ್ಮಾಣ ಸಾಧ್ಯ. ಮೊದಲಿಗೆ ಆರ್ಥಿಕ ಅಸಮಾನತೆಯನ್ನು ತೊಡೆದುಹಾಕಿ, ಜತೆಜತೆಗೆ ಸಾಮಾಜಿಕ ಅಸಮತೋಲವನ್ನೂ ತೊಡೆದರೆ ಮಾತ್ರ ಸ್ವಸ್ಥ ಸಮಾಜ ರೂಪಿಸಬಹುದು ಎಂಬುದು ಸೋಮಣ್ಣ ಎಲ್ಲೆಡೆ ಆಡುವ ಸಾಮಾಜಿಕ ಕಳಕಳಿಯ ಮಾತುಗಳು.

    ನಾನೇ ನಿನಗೆ ಕೆಲಸ ಕೊಡಿಸಿದ್ದು, ದುಡ್ಡು ಕೊಡು: ತಹಸೀಲ್ದಾರ್‌ಗೆ ಮಧ್ಯವರ್ತಿ ದುಂಬಾಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts