More

    ನಾನು ಮುಂದಿನ ಸಿಎಂ ಆಗ್ಬೇಕು, ಸಾಧ್ಯವಾದ್ರೆ ಪ್ರಧಾನಿನೂ ಆಗ್ಬೇಕು: ಸಚಿವ ಉಮೇಶ್​ ಕತ್ತಿ

    ಬಾಗಲಕೋಟೆ: ‘ನಾನು ಮುಂದಿನ ಮುಖ್ಯಮಂತ್ರಿ ಆಗಬೇಕು.. ಸಾಧ್ಯವಾದರೆ ಪ್ರಧಾನಮಂತ್ರಿ ಕೂಡ ಆಗಬೇಕು ಅಂತ ಪ್ರಯತ್ನ ನಡೆಸಿದ್ದೇನೆ..’
    – ಹೀಗೆ ತಮ್ಮಲ್ಲಿನ ಮಹದಾಸೆಯನ್ನು ಹೇಳಿಕೊಂಡವರು ಬೇರಾರೂ ಅಲ್ಲ, ಸಚಿವ ಉಮೇಶ್ ಕತ್ತಿ. ಇಂದು ಬಾಗಲಕೋಟೆಯಲ್ಲಿ ಮಾತನಾಡಿದ ಅವರು ಈ ವಿಷಯನ್ನು ಹಂಚಿಕೊಂಡರು. ನಾನು ಸಿಎಂ ಆಕಾಂಕ್ಷಿ ಆಗಿರುವುದು ನಿಜ. ಎಂಟು ಅವಧಿಯಲ್ಲಿ 9 ಸಲ ಶಾಸಕನಾಗಿದ್ದೇನೆ. ನನಗೆ ಎಲ್ಲ ಅರ್ಹತೆಗಳೂ ಇವೆ, ಯಾವುದೇ ಕಪ್ಪುಚುಕ್ಕೆಯೂ ನನಗಿಲ್ಲ ಎಂದ ಅವರು ಸಿಎಂ ಮಾತ್ರವಲ್ಲದೆ ಪಿಎಂ ಆಗುವ ಆಸೆಯನ್ನೂ ಹೊರಹಾಕಿದ್ದಾರೆ.

    ಅಂದಹಾಗೆ ಅವರು ಈಗಲೇ ಸಿಎಂ ಆಗಬೇಕು ಅಂತೇನೂ ಆಗ್ರಹ ವ್ಯಕ್ತಪಡಿಸಿಲ್ಲ. ನನಗೆ ಇನ್ನೂ ವಯಸ್ಸಿದೆ. ಈಗ 60 ವರ್ಷ, ಇನ್ನು 15 ವರ್ಷಗಳಲ್ಲಿ ನಾನು ಮುಖ್ಯಮಂತ್ರಿ ಆಗಬೇಕು. ಸಿಎಂ ಆಗುವುದು ನನ್ನ ಕೈಯಲ್ಲಿ ಇಲ್ಲ, ಅದಕ್ಕೆ ನಸೀಬು ಬೇಕು. ಆ ನಿಟ್ಟಿನಲ್ಲಿ ನನ್ನ ಪ್ರಯತ್ನ ಇದ್ದೇ ಇರುತ್ತದೆ ಎಂದಿರುವ ಕತ್ತಿ, ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಆದಾಗ ಅಥವಾ ಮುಂದಿನ ಚುನಾವಣೆ ಆದಾಗ ನಾನು ಸಿಎಂ ಆಗಬೇಕು ಎಂಬುದಾಗಿಯೂ ಹೇಳಿದ್ದಾರೆ. ಅಕಸ್ಮಾತ್ ಇದೇ ಅವಧಿಯಲ್ಲಿ ಸಿಎಂ ಆಗುವ ಅವಕಾಶ ಸಿಕ್ಕರೆ ಒಳ್ಳೆಯ ರೀತಿಯಲ್ಲಿ ನಿಭಾಯಿಸುತ್ತೇನೆ. ರಾಜ್ಯಕ್ಕೆ ಒಳ್ಳೆಯ ರೀತಿ ಸರ್ಕಾರ ಮಾಡಿ ತೋರಿಸುತ್ತೇನೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

    ನಾನೇನೂ ಮಠಾಧೀಶನಲ್ಲ, ನಾನೊಬ್ಬ ರಾಜಕಾರಣಿ. ಸಿಎಂ ಆಗುವ ಬಗ್ಗೆ ನನ್ನ ಗಮನಕ್ಕೆ ಯಾರೂ ತಂದಿಲ್ಲ, ನನಗೆ ಯಾರೂ ಕೇಳಿಲ್ಲ. ನಾನು ಕೂಡ ಯಾರಿಗೂ ಹೇಳಲು ಹೋಗಿಲ್ಲ. ಆದರೆ ಅಂಥ ಅವಕಾಶ ಬಂದರೆ ಬಿಡುವುದಿಲ್ಲ. ಸಿಎಂ ಸ್ಥಾನ ಬಡಿದಾಡಿ ತೆಗೆದುಕೊಳ್ಳಲು ಆಗುವುದಿಲ್ಲ, ಸಮಯ ಬಂದಾಗ ಆಗಿಯೇ ಆಗುತ್ತದೆ ಎಂದ ಉಮೇಶ್ ಕತ್ತಿ, ರಾಜ್ಯದಲ್ಲಿನ 224 ಶಾಸಕರು ಮುಖ್ಯಮಂತ್ರಿ ಆಗುವ ಯೋಗ್ಯತೆ ಹೊಂದಿದ್ದಾರೆ, ಆ ಅರ್ಹತೆ ಎಲ್ಲರಿಗೂ ಇದೆ. ನಸೀಬು ಯಾರಿಗಿದೆಯೋ ಅವರು ಸಿಎಂ ಆಗುತ್ತಾರೆ ಎಂಬುದಾಗಿ ಹೇಳಿದ್ದಾರೆ.

    ಮಾಜಿ ಸಚಿವರ ಅಶ್ಲೀಲ ಸಿಡಿ ಪ್ರಕರಣ; ತನಿಖೆ ಮುಕ್ತಾಯ, ಅಂತಿಮ ವರದಿ ಸಿದ್ಧ, ಮುಂದೆ?

    ಮುಂಬರುವ ಈ ತಿಂಗಳಲ್ಲಿ ಎಚ್ಚರಿಕೆಯಿಂದಿರಿ: ಕರೊನಾ ಮೂರನೇ ಅಲೆ ಬಗ್ಗೆ ಹೊರಬಿತ್ತು ಆತಂಕಕಾರಿ ಅಂಶ!

    ಮಕ್ಕಳನ್ನೇ ಹೆಚ್ಚಾಗಿ ಕಾಡುವ ಮಾರಕ ಮೆಸ್​-ಸಿ; ಪಾಲಕರೇ ಈ ವೈದ್ಯರ ಮಾತನ್ನು ಆಲಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts