More

    ನಾನೇಕೆ ಸಚಿವ ಸ್ಥಾನ ತ್ಯಾಗ ಮಾಡಲಿ? ಇರೋದು ನಾನೊಬ್ಬಳೇ ಮಹಿಳಾ ಮಂತ್ರಿ: ಜೊಲ್ಲೆ ಗರಂ

    ತುಮಕೂರು: ಬಿ.ಎಸ್​.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಸಂಪುಟ ಸರ್ಜರಿಯಲ್ಲಿ ಕೆಲ ಹಾಲಿ ಸಚಿವರಿಗೆ ಕೊಕ್​ ನೀಡಲಾಗುತ್ತೆ ಎಂಬ ಮಾತೂ ಕೇಳಿ ಬಂದಿದೆ. ಈ ಸಂಬಂಧ ಗರಂ ಆಗಿರುವ ಸಚಿವೆ ಶಶಿಕಲಾ ಜೊಲ್ಲೆ ಖಡಕ್​ ಮಾತುಗಳನ್ನಾಡಿದ್ದಾರೆ.

    ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ತುಮಕೂರಿನಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ‘ನಾನೇಕೆ ಸಚಿವ ಸ್ಥಾನ ತ್ಯಾಗ ಮಾಡಲಿ? ನಾನೊಬ್ಬಳೇ ಮಹಿಳಾ ಮಂತ್ರಿ ಇರೋದು.. ಸಂಘಟನೆ ಮೂಲಕ ಬಂದು ಸಾಕಷ್ಟು ಕೆಲಸ ಮಾಡಿದ್ದೇನೆ. ರಾಜ್ಯ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದೇನೆ. ಸಚಿವ ಸ್ಥಾನ ಕೈ ತಪ್ಪುತ್ತೆ ಎಂಬುದೆಲ್ಲ ಊಹಾಪೂಹಾ’ ಎನ್ನುತ್ತಾ ಸಿಡಿಮಿಡಿಗೊಂಡರು.

    ‘ಸಚಿವ ಸ್ಥಾನ ತ್ಯಾಗದ ಬಗ್ಗೆ ರಾಜ್ಯ ಅಥವಾ ರಾಷ್ಟ್ರದ ನಾಯಕರಿಂದ ಸೂಚನೆ ಬಂದಿಲ್ಲ. ವರಿಷ್ಠರಿಂದ ಒತ್ತಡ ಬಂದರೆ ಆಮೇಲೆ ನೋಡೋಣ. ಸದ್ಯ ಇಲ್ಲಿರೋದು ನಾನೊಬ್ಬಳೇ ಮಹಿಳಾ ಮಂತ್ರಿ. ನಾನು ಸಮರ್ಪಕವಾಗಿ ಕೆಲಸ ಮಾಡುತ್ತಿರುವೆ. ನಾನೇಕೆ ಸಚಿವ ಸ್ಥಾನ ತ್ಯಾಗ ಮಾಡಲಿ?’ ಎಂದು ಶಶಿಕಲಾ ಜೊಲ್ಲೆ ಗರಂ ಆದರು.

    ‘ಲಾಕ್​ಡೌನ್ ವೇಳೆ ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ತುಮಕೂರು ಜಿಲ್ಲೆಯಲ್ಲೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ‌ ಹೆಚ್ಚಾಗಿದೆ. ಇದಕ್ಕೆ ಕಾರಣ ಮತ್ತು ಶಿಕ್ಷೆ ಕುರಿತು ಅಧಿಕಾರಗಳ ಸಭೆ ನಡೆಸುವೆ’ ಎಂದರು.

    ಯಡಿಯೂರಪ್ಪಗೆ ನನ್ನ ದರ್ದಿಲ್ಲ! ಸಿಎಂ ವಿರುದ್ಧ ಸಂಸದ ಆಕ್ರೋಶ

    ನಿನ್ನ ಹೆಂಡ್ತಿ-ಮಕ್ಕಳನ್ನು ನನಗೇ ಬಿಟ್ಟುಕೊಡು ಎಂದು ಮನೆಗೆ ಬಂದ ಭೂಪ! ಆ ರಾತ್ರಿ ನಡೆದೇ ಹೋಯ್ತು ಘೋರ ಕೃತ್ಯ

    ಲೈಂಗಿಕ ದೌರ್ಜನ್ಯ ಭೀತಿಗೊಳಗಾಗಿದ್ದ ಬಾಲಕಿ ಮನೆಗೆ ಸಚಿವೆ ಜೊಲ್ಲೆ ಭೇಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts