More

    ರೈತ ಮಹಿಳೆಗೆ ಅವಾಜ್ ಹಾಕಿದ ಸಚಿವ ಮಾಧುಸ್ವಾಮಿ!

    ಕೋಲಾರ: ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ. ನಳಿನಿ ಅವರಿಗೆ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ನಿಂದಿಸಿದ ಪ್ರಸಂಗ ನಡೆದಿದೆ.
    ಕೆರೆ ಒತ್ತುವರಿ ತೆರವಿಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಒತ್ತುವರಿ ಮಾಡಿಕೊಂಡವರಿಗೆ ಪಹಣಿ ನೀಡಲಾಗಿದ್ದು, ಇದಕ್ಕೆ ಯಾರು ಹೊಣೆ ಎಂದು ನಳಿನಿ ಸಚಿವರಿಗೆ ಪ್ರಶ್ನಿಸಿದರು.

    ಇದರಿಂದ ಸಿಟ್ಟಿಗೆದ್ದ ಸಚಿವರು ‘‘ನಾನು ಬಹಳ ಕೆಟ್ಟ ಮನುಷ್ಯ, ಬಾಯಿ ಮುಚ್ಚಿಕೊಂಡು ಇಲ್ಲಿಂದ ಹೋಗು’’ ಎಂದು ಅಬ್ಬರಿಸಿದರು.
    ಬುಧವಾರ ತಾಲೂಕಿನ ಎಸ್.ಅಗ್ರಹಾರ ಕೆರೆ ಬಳಿ ಕೆಸಿ ವ್ಯಾಲಿ ಯೋಜನೆಯಡಿ ಕೆರೆಗಳಿಗೆ ನೀರು ಹರಿಯುತ್ತಿರುವುದನ್ನು ವೀಕ್ಷಿಸಲು ಸಚಿವರು ಬಂದಿದ್ದರು.
    ಕೆರೆಯ ಒಂದು ಭಾಗವನ್ನು ಒಡೆದು ಹಾಕಿದ್ದು ಮಳೆ ಬಂದಲ್ಲಿ ಕೆರೆಗೆ ಅಪಾಯ ಆಗುವುದರಿಂದ ಕೂಡಲೇ ದುರಸ್ತಿ ಮಾಡಿಸಬೇಕು ಎಂದು ನಳಿನಿ ಒತ್ತಾಯಿಸಿದರು.

    ಇದನ್ನೂ ಓದಿ: ಪ್ರಧಾನಮಂತ್ರಿ ವಯವಂದನಾ ಯೋಜನೆ ವಿಸ್ತರಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿಗೆ

    ‘‘ಕೆರೆ ವೀಕ್ಷಣೆ ನಂತರ ಸಮಸ್ಯೆ ಆಲಿಸುವೆ’’ ಎಂದು ಸಚಿವರು ಮುಂದೆ ಸಾಗುತ್ತಿದ್ದಂತೆ ಸಚಿವರ ಎದುರಿಗೇ ಬಂದು ನಿಂತ ನಳಿನಿ, ‘‘ನೂರಾರು ಎಕರೆ ಒತ್ತುವರಿಯಾಗಿದೆ. ಭೂಗಳ್ಳರಿಗೆ ಪಹಣಿ ಮಾಡಿಕೊಡಲಾಗಿದ್ದು ಇದಕ್ಕೆ ಹೊಣೆ ಯಾರು’’ ಎಂದು ಕೇಳಿದರು. ಆಗ ಸಚಿವರು ಈ ರೀತಿ ಪ್ರತಿಕ್ರಿಯೆ ನೀಡಿ ಮುಂದೆ ಸಾಗಿದರು.

    ಆಗ ನಳಿನಿ ಮತ್ತು ಇನ್ನೊಬ್ಬ ಕಾರ್ಯಕರ್ತೆ ಉಮಾ ಅವರನ್ನು ಪೊಲೀಸರು ಕೆರೆಯ ದಡದಿಂದ ಎಳೆದೊಯ್ದರು. ರೈತರ ಸಮಸ್ಯೆ ಹೇಳಿಕೊಳ್ಳಲು ಹಾಗೂ ಮನವಿ ನೀಡಲು ಅವಕಾಶ ನೀಡುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿ ಮನವಿ ಹರಿದು ಹಾಕಿ ಮಹಿಳೆಯರು ನಿರ್ಗಮಿಸಿದರು.

    ತಂಗಿ ಮಗನನ್ನೇ ಕರೆಸಿಲ್ಲ ನಾನು: ಸಚಿವ ನಾರಾಯಣಗೌಡ ಅಳಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts