More

    ಶೀಘ್ರ ದುರಸ್ತಿ ಕಾಮಗಾರಿ ಕೈಗೊಳ್ಳಿ

    ಚನ್ನರಾಯಪಟ್ಟಣ: ಹಿರೀಸಾವೆ ಕೆರೆ ಏರಿಯ ದುರಸ್ತಿ ಕಾಮಗಾರಿಯನ್ನು ಶೀಘ್ರವೇ ಕೈಗೊಳ್ಳಬೇಕು ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

    ತಾಲೂಕಿನ ಹಿರೀಸಾವೆ ಗ್ರಾಮದ ದೊಡ್ಡ ಕೆರೆಯ ಏರಿಯ ಒಂದು ಭಾಗದಲ್ಲಿ ಮಣ್ಣು ಕುಸಿದಿರುವ ಸ್ಥಳವನ್ನು ಗುರುವಾರ ಪರಿಶೀಲಿಸಿ ಮಾತನಾಡಿ, ಕೆರೆ ಏರಿ ಒಡೆಯದಂತೆ ತಕ್ಷಣ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದರು.

    ಕಾಮಗಾರಿಗೆ ತಗುಲಬಹುದಾದ ಅಂದಾಜು ವೆಚ್ಚದ ಮಾಹಿತಿಯನ್ನು ಅಧಿಕಾರಿಗಳು ತಕ್ಷಣ ನೀಡಬೇಕು. ಸರ್ಕಾರದಿಂದ ತಕ್ಷಣ ಅನುದಾನವನ್ನು ಒದಗಿಸಲಾಗುವುದು ಎಂದು ತಿಳಿಸಿದರು.

    ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಈ ಕೆರೆಗೆ ಹತ್ತಕ್ಕೂ ಹೆಚ್ಚು ಕೆರೆಗಳ ನೀರು ಹರಿದು ಬರುತ್ತಿದ್ದು, 18 ವರ್ಷದ ನಂತರ ಕೆರೆ ತುಂಬಿದೆ. ಕೆರೆ ಪಕ್ಕದ ರೈತರ ಭೂಮಿಗೆ ನೀರು ಹರಿದು ತೇವಾಂಶದಿಂದ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಏರಿಯ ಪಕ್ಕದಲ್ಲಿ ಕಾಲುವೆಗಳನ್ನು ನಿರ್ಮಾಣ ಮಾಡಿ ರೈತರಿಗೆ ಮತ್ತು ಕೆರೆಗೆ ಸಮಸ್ಯೆಯಾಗದಂತೆ ಶಾಶ್ವತ ಕಾಮಗಾರಿ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

    ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಸಿ.ಮೃತ್ಯುಂಜಯಸ್ವಾಮಿ, ಮುಖ್ಯಇಂಜಿನಿಯರ್ ರಾಘವನ್, ಸೂಪರಿಂಟೆಂಡೆಂಟ್ ಇಂಜಿನಿಯರ್ ಕಿಶೋರ್, ಕಾರ್ಯಪಾಲಕ ಇಂಜಿನಿಯರ್ ವಿಶ್ವನಾಥ್, ಇಲಾಖೆಯ ಇಂಜಿನಿಯರ್‌ಗಳಾದ ವಿಶ್ವನಾಥ, ಸುಂದರಾಜ್, ಎಚ್.ಇ.ರಾಮಕೃಷ್ಣ, ಗಿರೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts