More

    ಕಮಿಷನ್​ ಪಡೆಯುವ ಅಧಿಕಾರಿಗಳ ಬಗ್ಗೆ ಮಾಹಿತಿ ಕೊಡಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ: ಮಠಗಳ ಅನುದಾನದಲ್ಲಿ ಕಮಿಷನ್​​ ಹಣ ಕೇಳಿರುವವರ ಬಗ್ಗೆ ಹಾಗೂ ನೀವು ಯಾವ ಕಾಮಗಾರಿಯ ಹಣ ಬಿಡುಗಡೆಗೆ ಕಮಿಷನ್ ನೀಡಿದ್ದೀರಿ ಎಂಬ ಬಗ್ಗೆ ಮಾಹಿತಿ ಕೊಡಿ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ಉಡುಪಿಯಲ್ಲಿ ಮಾತನಾಡಿರುವ ಅವರು, ಸಾಧುಸಂತರು ಹೇಳಿಕೆ ಕೊಡುವಾಗ ಗೊಂದಲ ಇರಬಾರದು, ಮುಖ್ಯಮಂತ್ರಿ ಬೊಮ್ಮಾಯಿ ಅವರು 65 ಮಠಗಳಿಗೆ 190 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ನಿಮ್ಮ ಬಳಿ ಕಮಿಷನ್ ಹಣ ಕೇಳಿದವರು ಯಾರು ಎಂಬ ಬಗ್ಗೆ ಸ್ಪಷ್ಟಪಡಿಸಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.

    ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ.ಜಾತಿ ಪ. ಪಂಗಡಕ್ಕೆ ಸೇರಿದ 12 ಮಠಗಳು, ಹಿಂದುಳಿದ ವರ್ಗಕ್ಕೆ ಸೇರಿದ 53 ಮಠಗಳಿಗೆ ಅನುದಾನ ನೀಡಿದ್ದಾರೆ. ಮಹಜರು ಮತ್ತು ಯೋಜನಾ ವರದಿ ಪ್ರಕ್ರಿಯೆ ಮುಗಿದ ನಂತರ ಬಿಡುಗಡೆಯಾಗುತ್ತದೆ. ಕಮಿಷನ್ ಕೇಳಿದ ಇಲಾಖೆ ಮತ್ತು ಅಧಿಕಾರಿಯ ಹೆಸರನ್ನು ಬಹಿರಂಗಪಡಿಸಸಲಿ ಎಂದು ಹೇಳಿದರು.

    ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗ ಇಲಾಖೆ ಪಾರದರ್ಶಕವಾಗಿ ಕೆಲಸ ಮಾಡಬೇಕು ಅನ್ನೋದು ನನ್ನ ಇರಾದೆ.ಕಮಿಷನ್ ಪಡೆದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ನಮ್ಮ ಸರಕಾರ ನೇಮಿಸಿದ್ದಲ್ಲ.ಇದೇ ಅಧಿಕಾರಿಗಳು ಹಿಂದಿನ ಸರಕಾರಗಳ ಅವಧಿಯಲ್ಲಿ ಇದ್ದರು.ಆರೋಪ ಮಾಡಿ, ಆದರೆ ಸತ್ಯಕ್ಕೆ ಅಪಚಾರ ಮಾಡಬೇಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದರು.

    ಆರೋಪಗಳಿದ್ದರೆ ಮಂತ್ರಿಯಾದ ನನ್ನನ್ನು ತನಿಖೆಗೆ ಒಳಪಡಿಸಿ.ಹಿಂದೆ ಕಾರ್ಯನಿರ್ವಹಿಸಿದ ಮುಜುರಾಯಿ, ಮೀನುಗಾರಿಕೆ, ಬಂದರು ಇಲಾಖೆಈಗ ಕಾರ್ಯನಿರ್ವಹಿಸುತ್ತಿರುವ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಸೇರಿ ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರವಿದ್ದರೆ ಹೇಳಿ ಎಂದರು. ಮಠಗಳ ಅನುದಾನದಲ್ಲೂ ಕೆಲ ಅಧಿಕಾರಿಗಳು ಕಮಿಷನ್​ ಕೇಳುತ್ತಾರೆ ಎಂದು ಇತ್ತೀಚೆಗೆ ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದ್ದರು.

    ನಟಿ ಸೋನಂ ಕಪೂರ್​ ಮನೆಯಲ್ಲಿ ಚಿನ್ನ ಕದ್ದ ಕಳ್ಳರಿಗೆ ಸಿಗಲಿಲ್ಲ ಜಾಮೀನು

    ಪಾದಚಾರಿ ಮೇಲೆ ಹರಿದ ಬುಲೇರೋ ವಾಹನ: ಯುವಕ ಸ್ಥಳದಲ್ಲೇ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts