More

    ‘ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ದಿಗ್ವಿಜಯ ಸಿಂಗ್ ಅವರನ್ನು ಕಾಂಗ್ರೆಸ್ ಉಚ್ಛಾಟಿಸಿತ್ತಾ?’

    ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯನ್ನು ಕಾಂಗ್ರೆಸ್ ಹಾಗೂ ಇತರೆ ಸಂಘಟನೆಗಳು ವಿರೋಧಿಸುತ್ತಿವೆ. ಆದರೆ 2012ರಲ್ಲಿ ಇದೇ ಮಸೂದೆ ಜಾರಿಗೆ ತರಲು ಕಾಂಗ್ರೆಸ್ ಪಕ್ಷವೇ ಮುಂದಾಗಿತ್ತು. ಅದಕ್ಕೆ ಬೆಂಬಲ ಸೂಚಿಸಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ದಿಗ್ವಿಜಯ ಸಿಂಗ್ ಅವರನ್ನು ಕಾಂಗ್ರೆಸ್ ಉಚ್ಛಾಟಿಸಿತ್ತಾ?

    ಹೀಗೆಂದು ಪ್ರಶ್ನಿಸಿದವರು ಸಚಿವ ಕೆ.ಎಸ್.ಈಶ್ವರಪ್ಪ. ಕಾಂಗ್ರೆಸ್ 2012ರ ಚುನಾವಣಾ ಪ್ರಣಾಳಿಕೆಯಲ್ಲಿ ಕೃಷಿ ಮಸೂದೆ ವಿಷಯ ಸೇರಿಸಿಕೊಂಡಿತ್ತು. ಆದರೆ ಇದೀಗ ಸುಗ್ರೀವಾಜ್ಞೆ ಪಡೆದು ಜಾರಿಗೊಳ್ಳಲಿರುವ ಕೃಷಿ ಮಸೂದೆಗೆ ವಿರೋಧ ವ್ಯಕ್ತಪಡಿಸುವ ಮೂಲಕ ಕುತಂತ್ರ ರಾಜಕಾರಣ ಮಾಡುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

    ಇದನ್ನೂ ಓದಿ: ಡ್ರಗ್ಸ್​ ಜತೆಗೆ ಬದುಕುವವರೂ ಇದ್ದಾರೆ ಎಂದ ಕಾಂಗ್ರೆಸ್​ ಶಾಸಕ

    ಮಸೂದೆ ರೈತಪರವಾಗಿದ್ದು ಇಡೀ ದೇಶದ ರೈತರು ಸಂತಸಗೊಂಡಿದ್ದಾರೆ. ಆದರೂ ಕಾಂಗ್ರೆಸ್ ಹಾಗೂ ಇತರೆ ಸಂಘಟನೆಗಳು ಸುಳ್ಳು ಹೇಳುವ ಮೂಲಕ ರೈತರ ದಾರಿ ತಪ್ಪಿಸುತ್ತಿವೆ. ರೈತರ ಹೆಸರಲ್ಲಿ ಕಾಂಗ್ರೆಸ್, ಜೆಡಿಎಸ್, ರೈತ ಮತ್ತು ಇತರೆ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಈ ಕುತಂತ್ರ ರಾಜಕಾರಣವನ್ನು ರೈತರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಮನವಿ ಮಾಡಿದರು.

    ಇದನ್ನೂ ಓದಿ: ತೀರ್ಥೋದ್ಭವಕ್ಕೆ ದಿನಗಣನೆ, ತಲಕಾವೇರಿಗೆ ಹೋಗುವ ಮುನ್ನ ಇದನ್ನು ಮರೆಯದಿರಿ!

    ವಿರೋಧಿಸುವುದೇ ಪ್ರತಿಪಕ್ಷದ ಕೆಲಸವಲ್ಲ: ಜನ ವಿರೋಧಿ ನೀತಿಗಳ ವಿರುದ್ಧ ಆಡಳಿತ ಪಕ್ಷವನ್ನು ಎಚ್ಚರಿಸುವುದು ಪ್ರತಿಪಕ್ಷದ ಕೆಲಸ. ಆದರೆ ಎಲ್ಲವನ್ನೂ ವಿರೋಧಿಸುವುದಲ್ಲ, ಕೃಷಿ ನೂತನ ಮಸೂದೆ ಬಗ್ಗೆ ಸತ್ಯ ಅರಿತುಕೊಳ್ಳಬೇಕಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

    ಇದನ್ನೂ ಓದಿ: 5 ವರ್ಷ ಇಬ್ಬರು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡವನಿಗೆ ನ್ಯಾಯಾಧೀಶರು​ ಕೊಟ್ಟಿದ್ದು ಎಂಥಾ ಶಿಕ್ಷೆ ನೋಡಿ !

    ಕೇಂದ್ರ ಮತ್ತು ರಾಜ್ಯ ಸರ್ಕಾರ ಕೃಷಿ ಮಸೂದೆ ಜಾರಿಗೆ ತಂದರೂ ಕಾಂಗ್ರೆಸ್ ರೈತರನ್ನು ದಿಕ್ಕು ತಪ್ಪಿಸುತ್ತಿದೆ. ಭೂ ಸುಧಾರಣೆ ತಿದ್ದುಪಡಿ ಆದೇಶವನ್ನು ಕರೊನಾ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಜಾರಿಗೊಳಿಸಿ ರೈತನ ಸ್ಥಿತಿಗತಿ ಸುಧಾರಿಸಿಕೊಳ್ಳಲು ಅನುಕೂಲ ಆಗಲಿದೆ. ಕೃಷಿ ಪದವೀಧರರಿಗೆ ಈ ಕಾಯ್ದೆ ಉಪಯುಕ್ತವಾಗಲಿದೆ. ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಈಗಾಗಲೇ ಮಸೂದೆ ಜಾರಿಯಲ್ಲಿದ್ದು ರಾಜ್ಯದ ರೈತರಿಗೂ ವರದಾನ ಆಗುವುದರಲ್ಲಿ ಅನುಮಾನವಿಲ್ಲ ಎಂದರು.

    ಇದನ್ನೂ ಓದಿ: ಅಪ್ಪ ದೂರಾಗುತ್ತಿದ್ದಂತೆಯೇ ಅಜ್ಜಿಯ ಮೊರೆ ಹೋದ ಸಾರಾ …

    ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಎಂಎಲ್​ಸಿ ಆಯನೂರು ಮಂಜುನಾಥ್, ಮಾಜಿ ಎಂಎಲ್​ಸಿ ಎಂ.ಬಿ.ಭಾನುಪ್ರಕಾಶ್, ಮುಖಂಡರಾದ ಎಸ್.ದತ್ತಾತ್ರಿ, ಟಿ.ಡಿ.ಮೇಘರಾಜ್, ಪುರುಷೋತ್ತಮ್ ಡಿ.ಎಸ್.ಅರುಣ್, ಎಸ್.ಎನ್.ಚನ್ನಬಸಪ್ಪ, ಜಗದೀಶ್ ಸುದ್ದಿಗೋಷ್ಠಿಯಲ್ಲಿದ್ದರು.

    ಅಟಲ್​ ಜೀ ಕನಸು ಇಂದು ನನಸಾಗಿದೆ: ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts