More

    ಸಚಿವ ಹಾಲಪ್ಪ ತವರೂರಲ್ಲೇ ಗೊಬ್ಬರಕ್ಕೆ ರೈತರ ಪರದಾಟ

    ಕೊಪ್ಪಳ : ಜಿಲ್ಲೆಯಲ್ಲಿ ಗೊಬ್ಬರಕ್ಕಾಗಿ ರೈತರ ಪರದಾಟ ಮುಂದುವರೆದಿದೆ. ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ತವರೂರು ಕುಕನೂರು ತಾಲೂಕಿನ ಮಸಬ ಹಂಚಿನಾಳ ಗ್ರಾಮದಲ್ಲಿ ಗೊಬ್ಬರಕ್ಕಾಗಿ ಕಾದು ಸುಸ್ತಾದ ರೈತರು  ಸರತಿಯಲ್ಲಿ‌ ಪಾದರಕ್ಷೆ, ಕಲ್ಲು ಇಟ್ಟುವ ಕಾಯುವ ಸ್ಥಿತಿ ನಿರ್ಮಾಣವಾಗಿದೆ.


    ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ತುಂಗಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಬಿಟ್ಟಿದ್ದು, ಗಂಗಾವತಿ ಭಾಗದಲ್ಲಿ ಭತ್ತ ನಾಟಿ ಆರಂಭವಾಗಿದೆ. ಹೀಗಾಗಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ. ಇತ್ತ ಒಣ ಬೇಸಾಯ ಆಧಾರಿತ ಪ್ರದೇಶದಲ್ಲೂ ಬಿತ್ತನೆ ಚುರುಕು ಪಡೆದಿದೆ. ಬೇಡಿಕೆ ಅಧಿಕವಾಗಿದ್ದು ಪೂರೈಕೆ ಕೊರತೆಯಾಗಿದೆ. ಅಧಿಕಾರಿಗಳು ಕಾಗದದಲ್ಲಿ ಗೊಬ್ಬರ ಇದೆ ಎಂದು ತೋರಿಸುತ್ತಿದ್ದಾರೆ.


    ಸಚಿವರು, ಶಾಸಕರು ಗೊಬ್ಬರ ಕೊರತೆಯಿಲ್ಲ ಎಂದು ಸಬೂಬು ನೀಡುತ್ತಿದ್ದಾರೆ. ವಾಸ್ತವವಾಗಿ ಗೊಬ್ಬರ ಸ್ಟಾಕ್ ಇಲ್ಲ. ಹೀಗಾಗಿ ರೈತರ ಪರದಾಟದ ಫೋಟೋ ತೆಗೆದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
    ಜಿಲ್ಲಾ ಕೇಂದ್ರ ಕೊಪ್ಪಳದಲ್ಲೂ ಗೊಬ್ಬರಕ್ಕಾಗಿ ರೈತರು ಮುಗಿಬಿದ್ದಿದ್ದಾರೆ. ಟಿಎಪಿಎಸ್ಎಂಎಸ್ ಮುಂಭಾಗದಲ್ಲಿ ಕಿಲೊ ಮೀಟರ್ ಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

    ಬೆಳಗ್ಗೆ ಅಂಗಡಿ ತೆರೆದ ಕೆಲ ಗಂಟೆಗಳಲ್ಲೇ ಖಾಲಿಯಾಗುತ್ತಿದೆ. ಇಂದು ಗೊಬ್ಬರ ಬಂದಿದ್ದು, ಅಂಗಡಿ ತೆರೆಯುವ ಮುನ್ನವೇ ಅಂಗಡಿ ಮುಂದೆ ರೈತರು ಗುಂಪಾಗಿ ಕೂಡುವುದು ಸಾಮಾನ್ಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts