More

    ಮನೆಯಲ್ಲೇ ಕೋವಿಡ್​ ವ್ಯಾಕ್ಸಿನ್ ಪಡೆಯಲು ಅವಕಾಶವಿಲ್ಲ: ಸಚಿವ ಡಾ.ಸುಧಾಕರ್

    ಬೆಂಗಳೂರು: ಮನೆಯಲ್ಲಿ ಯಾರೂ ಕೂಡ ಕೋವಿಡ್​ ವ್ಯಾಕ್ಸಿನೇಷನ್​ ಪಡೆಯಬಾರದು. ಆಸ್ಪತ್ರೆಯಲ್ಲೇ ಪಡೆಯಬೇಕು. ಈ ಬಗ್ಗೆ ಸುತ್ತೊಲೆ ಹೊರಡಿಸುತ್ತೇನೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್​ ಹೇಳಿದ್ದಾರೆ.

    ಇಂದು(ಸೋಮವಾರ) ಬೆಳಗ್ಗೆ ಹಿರೇಕೆರೂರು ಆಸ್ಪತ್ರೆಯ ಸಿಬ್ಬಂದಿ ಕೃಷಿ ಸಚಿವ ಬಿ.ಸಿ. ಪಾಟೀಲ್​ರ ಮನೆಗೆ ಬಂದು ಸಚಿವರು ಮತ್ತು ಅವರ ಪತ್ನಿ ವನಜಾ ಪಾಟೀಲ್​ಗೆ ಲಸಿಕೆ ಹಾಕಿದ್ದರು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಆಸ್ಪತ್ರೆಗೆ ಹೋಗಿ ಲಸಿಕೆ ಪಡೆದಿದ್ದಾರೆ. ಆದರೆ, ಬಿ.ಸಿ.ಪಾಟೀಲ್​ ಮಾತ್ರ ಆರೋಗ್ಯ ಸಿಬ್ಬಂದಿಯನ್ನ ತನ್ನ ಮನೆ ಬಾಗಿಲಿಗೇ ಕರೆಸಿಕೊಂಡು ಲಸಿಕೆ ಪಡೆದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದರು. ಅಲ್ಲದೆ, ಕೋವಿಡ್​ ವ್ಯಾಕ್ಸಿನೇಷನ್​ನಲ್ಲೂ ‘ವಿವಿಐಪಿ ಸಂಸ್ಕೃತಿ’ ಇದ್ಯಾ? ಎಂದು ಸಚಿವರ ನಡೆಗೆ ಕಿಡಿಕಾರಿದ್ದರು. ಇದನ್ನೂ ಓದಿರಿ ಮೊದಲ ರಾತ್ರಿಯೇ ಮದುಮಗಳ ದುರಂತ ಸಾವು! ಮದ್ವೆ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

    ಮನೆಯಲ್ಲೇ ಕೋವಿಡ್​ ವ್ಯಾಕ್ಸಿನ್ ಪಡೆಯಲು ಅವಕಾಶವಿಲ್ಲ: ಸಚಿವ ಡಾ.ಸುಧಾಕರ್ನರೇಂದ್ರ ಮೋದಿಗಿಂತಲೂ ಬಿ.ಸಿ.ಪಾಟೀಲ್​ ದೊಡ್ಡವರಾ? ಹಿರಿ ಜೀವಗಳು ಆಸ್ಪತ್ರೆ ಬಾಗಿಲಲ್ಲಿ ಕಾದರೂ ಪರವಾಗಿಲ್ಲ, ಇವರ ಮನೆ ಬಾಗಿಲಿಗೆ ಆರೋಗ್ಯ ಸಿಬ್ಬಂದಿಯೇ ಬಂದು ಲಸಿಕೆ ಕೊಡುತ್ತಾರೆ. ಇದೆಂಥಾ ನ್ಯಾಯ? ಜನಸಾಮಾನ್ಯರಿಗೆ ಒಂದು ಇವರಿಗೊಂದು ಏಕೆ? ಎಂದು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದ ಬಿ.ಸಿ.ಪಾಟೀಲ್​, ಇವತ್ತು ನನ್ನನ್ನು ಭೇಟಿಯಾಗಲು ಹಲವರು ಬಂದಿದ್ದರು. ಆಸ್ಪತ್ರೆಗೆ ಹೋದ್ರೆ ಅರ್ಧ ಗಂಟೆ ಕಾಯಬೇಕಾಗಿತ್ತು. ಸ್ವಾಮಿ ಕಾರ್ಯದ ಜೊತೆಗೆ ಸ್ವ ಕಾರ್ಯ ಸಹ ಅಗಬೇಕು. ಆದ್ರೆ ಇದನ್ನು ವಿವಾದ ಅಂತ ಹೇಳಿದ್ರೆ ಏನ್​ ಮಾಡೋಕೆ ಆಗಲ್ಲ. ವಿವಾದ ಅಂತ ಮೊದಲೇ ಗೊತ್ತಾಗಿದ್ದರೆ ಆಸ್ಪತ್ರೆಯಲ್ಲಿ ಲಸಿಕೆ ಪಡೆದುಕೊಳ್ಳುತ್ತಿದ್ದೆ ಎಂದು ಸಮರ್ಥಿಸಿಕೊಂಡಿದ್ದರು.

    ಈ ಎಲ್ಲ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಡಾ.ಕೆ.ಸುಧಾಕರ್​, ನಾನು ಬಿ.ಸಿ.ಪಾಟೀಲ್​ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡುವೆ. ನಮ್ಮ ಅಧಿಕಾರಿಗಳು ಅವರಿಗೆ ಹೇಳಬಹುದಿತ್ತು. ಆದರೆ, ಅವರು ಮಂತ್ರಿಗಳು ಅನ್ನೋ ಕಾರಣಕ್ಕೆ ಬಹುಶಃ ಅವರು ಹೇಳಿಲ್ಲ ಅನ್ನಿಸುತ್ತದೆ. ಯಾರ ಮನೆಗೂ ಹೋಗಿ ಲಸಿಕೆ ಹಾಕುವ ಹಾಗಿಲ್ಲ. ಮನೆಯಲ್ಲಿ ಲಸಿಕೆ ಪಡೆದ್ರೆ ತಪ್ಪಿಲ್ಲ ಅನ್ನೋ ತಪ್ಪು ಗ್ರಹಿಕೆಯಿಂದಾಗಿ ಈ ಘಟನೆ ನಡೆದಿದೆ. ಬಿ.ಸಿ.ಪಾಟೀಲ್​ರು ಉದ್ದೇಶಪೂರ್ವಕವಾಗಿ ಮಾಡಿಲ್ಲ. ಸ್ವಲ್ಪ ತಪ್ಪಾಗಿದ್ದು, ಮತ್ತೆ ಈ ರೀತಿ ಆಗದಂತೆ ಎಚ್ಚರವಹಿಸುತ್ತೇವೆ. ಅಧಿಕಾರಿಗಳು ಮಾರ್ಗಸೂಚಿಗಳ ಬಗ್ಗೆ ಹೇಳಬಹುದಾಗಿತ್ತು ಎಂದು ಸ್ಪಷ್ಟಪಡಿಸಿದರು.

    ಕೋವಿಡ್​ ವ್ಯಾಕ್ಸಿನೇಷನ್​ನಲ್ಲೂ ‘ವಿವಿಐಪಿ ಸಂಸ್ಕೃತಿ’ ಇದ್ಯಾ? ಬಿ.ಸಿ.ಪಾಟಿಲ್​ ನಡೆಗೆ ಆಕ್ರೋಶ

    ಕಾಲೇಜು ಕಟ್ಟಡದಿಂದ ಜಿಗಿದು ಬಿಇ ವಿದ್ಯಾರ್ಥಿ ಆತ್ಮಹತ್ಯೆ! ಡೆತ್​ನೋಟ್​ ಪತ್ತೆ, ಸಹಪಾಠಿಗಳ ಪ್ರತಿಭಟನೆ

    ಜೀವಂತ ಯುವಕನನ್ನೇ ಪೋಸ್ಟ್ ಮಾರ್ಟಂಗೆ ಕರೆದೊಯ್ದ ಆಸ್ಪತ್ರೆ ಸಿಬ್ಬಂದಿ! ಮುಂದೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts