More

    ಶ್ರೀಮಠದ ಆಶೀರ್ವಾದಿಂದ ಉನ್ನತ ಹುದ್ದೆ ; ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಸಚಿವ ಸಿ.ಸಿ.ಪಾಟೀಲ್ ಭೇಟಿ

    ನೊಣವಿನಕೆರೆ: ತಿಪಟೂರು ತಾಲೂಕು ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಗುರುವಾರ ಸಂಜೆ ಸಚಿವ ಸಿ.ಸಿ.ಪಾಟೀಲ್, ಪತ್ಮಿ ಶೋಭಾ ಪಾಟೀಲ್ ಹಾಗೂ ಕುಟುಂಬ ಸದಸ್ಯರೊಂದಿಗೆ ಭೇಟಿ ನೀಡಿ ಪೀಠಾಧ್ಯಕ್ಷ ಡಾ.ಶ್ರೀಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರಸ್ವಾಮೀಜಿ ಆರ್ಶೀವಾದ ಪಡೆದರು.

    ಸಂಜೆ 6.30ಕ್ಕೆ ಶ್ರೀಮಠಕ್ಕೆ ಆಗಮಿಸಿದ ಸಚಿವರು ಮೂಲ ಕತೃ ಕಾಡಸಿದ್ದೇಶ್ವರರ ಗದ್ದುಗೆಗೆ ಆಗಮಿಸಿದಾಗ ಪೂರ್ಣ ಕಳಶದೊಂದಿಗೆ ಸ್ವಾಗತಿಸಲಾಯಿತು. ನಂತರ ವಿಶೇಷ ಪೂಜೆ, ಬಿಲ್ವಾರ್ಚನೆ, ಮಹಾಮಂಗಳಾರತಿ ಹಾಗೂ ಸಂಕಲ್ಪ ಮಾಡಿಸಲಾಯಿತು. ಸಚಿವ ಸಿ.ಸಿ.ಪಾಟೀಲ್ ಮಾತನಾಡಿ, ಬಸವರಾಜ ಬೊಮ್ಮಯಿ ಸಚಿವ ಸಂಪುಟ ವಿಸ್ತರಣೆಗೂ ಮುಂಚಿತವಾಗಿ ಶ್ರೀಮಠಕ್ಕೆ ಆಗಮಿಸಿ ಶ್ರೀಗಳ ಆರ್ಶೀವಾದ ಪಡೆದು ತೆರಳಿದ್ದೆ, ಶ್ರೀಗಳ ಆರ್ಶೀವಾದದಿಂದ ಸಚಿವ ಸಂಪುಟ ದರ್ಜೆಯ ಸಚಿವನಾಗಿ ಸೇವೆ ಮಾಡುವ ಅವಕಾಶ ಬಂದಿರುವ ಕಾರಣಕ್ಕೆ ಕುಟುಂಬ ಪರಿವಾರ ಸಹಿತ ಕಾಡಸಿದ್ದೇಶ್ವರ ಗದ್ದುಗೆಗೆ ಪೂಜೆಸಲ್ಲಿಸಿ, ಶ್ರೀಗಳ ಆರ್ಶಿವಾದ ಪಡೆಯಲು ಬಂದಿದ್ದೆ. ಶ್ರೀಗಳ ಆರ್ಶೀವಾದದಿಂದ ರಾಜ್ಯದಲ್ಲಿ ಪ್ರವಾಹ ಕಡಿಮೆಯಾಗಿ, ಮನುಕುಲಕ್ಕೆ ಆತಂಕಕಾರಿಯಾದ ಕರೊನಾ ನಿವಾರಣೆಯಾಗಿ ನೆಮ್ಮದಿಯ ಜೀವನ ಸಾಗುವಂತಾಗಲಿ. ಸರ್ಕಾರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಗಮನ ಅರಿಸುವಂತಾಗಲಿ ಎಂದರು.

    ಪೀಠಾಧ್ಯಕ್ಷ ಡಾ.ಶ್ರೀಕರಿವೃಷಭದೇಶಿಕೇಂದ್ರ ಶಿವಯೋಗಿಶ್ವರಸ್ವಾಮೀಜಿ ಮಾತನಾಡಿ, ರಾಜಕೀಯ ಬದಲಾವಣೆ ವ್ಯವಸ್ಥೆಯಲ್ಲಿ ಬಸವರಾಜ ಬೊಮ್ಮಯಿ ಸಿಎಂ ಆದ ನಂತರ ಸಿ.ಸಿ.ಪಾಟೀಲ್ ಶ್ರೀಮಠದ ಆರ್ಶೀವಾದ ಪಡೆದು ಸಚಿವರಾಗಿದ್ದು, ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಶ್ರೀಮಠಕ್ಕೆ ನಂಬಿಕೆ, ಶ್ರದ್ದೇ, ಭಕ್ತಿಯಿಂದ ಬರುವ ಭಕ್ತರಿಗೆ ಶ್ರೀಮಠದ ಆರ್ಶೀವಾದ ಹಾಗೂ ಪರಿಪೂರ್ಣ ಸಿದ್ಧಾಂತ ಹಡಗಿದ್ದು, ಕ್ಷೇತ್ರದ ಆರಾಧ್ಯ ದೈವ ಕಾಡಸಿದ್ದೇಶ್ವರ, ವೀರಗಂಗಾಧರೇಶ್ವರ ಹಾಗೂ ಕರಿಬಸವೇಶ್ವರ ಸ್ವಾಮೀಗಳ ಕೃಪಾಶೀವಾದಲ್ಲಿ ಕ್ಷೇತ್ರದ ಹಿರಿಮೆಯ ಸಂಕಲ್ಪ ಎಂಬ ಪದ್ಧತಿಯನ್ನು ಶ್ರದ್ಧೆ, ಭಕ್ತಿಯಿಂದ ಮಾಡಿದವರಿಗೆ ಶ್ರೀಮಠದ ಆರ್ಶೀವಾದದಿಂದ, ಉತ್ತಮ ಅಧಿಕಾರ ಸ್ಥಾನ ದೊರೆತಿದ್ದು, ಜಾತಿ, ಧರ್ಮ ಭೇದವಿಲ್ಲದೆ ಎಲ್ಲ ಪಕ್ಷದ ಮುಖಂಡರು ಶ್ರೀಮಠದ ಆರ್ಶೀವಾದಿಂದ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಎಲ್ಲ ವರ್ಗದ ಜನರು ಸಂಕಲ್ಪ ಆಚರಣೆಯಲ್ಲಿ ಪಾಲ್ಗೋಂಡು ಶ್ರೀಮಠದ ಮಕ್ಕಳಾಗಿ ಉತ್ತಮ ಜೀವನ ನಡೆಸೋಣ ಎಂದರು.

    ಮಠದ ಕಿರಿಯ ಶ್ರೀಗಳಾದ ಶ್ರೀ ಕರಿವೃಷಭಶಿವಯೋಗಿ ದೇವರು, ಹೆಗ್ಗಡೆಹಳ್ಳಿ ಮಠದ ಶ್ರೀ ವಿಶ್ವನಾಥಸ್ವಾಮೀಜಿ, ತುರುವೇಕೆರೆ ಶಾಸಕ ಮಸಾಲೆ ಜಯರಾಮ್, ಶ್ರೀಮಠ ಆಡಳಿತಮಂಡಳಿಯ ಶಂಭು, ನೊಣವಿನಕೆಠಾಣೆ ಪಿಎಸ್‌ಐ ಗಣೇಶ್, ಬಿಜೆಪಿ ಕಾರ್ಯಕರ್ತರು ಇದ್ದರು.

    ಕಾಡಸಿದ್ದೇಶ್ವರ ಮಠಕ್ಕೆ ಸಚಿವ ನಾಗೇಶ್ ಭೇಟಿ(ನೊಣವಿನಕೆರೆ): ತಿಪಟೂರು ತಾಲೂಕು ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಶುಕ್ರವಾರ ನೂತನ ಸಚಿವ ಬಿ.ಸಿ.ನಾಗೇಶ್ ಅವರು ಪುತ್ರಿ ಶಾರದಾ ಜತೆ ಭೇಟಿ ನೀಡಿ ಪೀಠಾಧ್ಯಕ್ಷ ಡಾ.ಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರಸ್ವಾಮೀಜಿ ಆರ್ಶೀವಾದ ಪಡೆದರು.ಬೆಳಗ್ಗೆ 9ಗಂಟೆಗೆ ಶ್ರೀಮಠಕ್ಕೆ ಆಗಮಿಸಿದ ಸಚಿವರು ಮೂಲ ಕತೃ ಕಾಡಸಿದ್ದೇಶ್ವರ ಗದ್ದುಗೆಗೆ ಭೇಟಿ ನೀಡಿ ವಿಶೇಷ ಪೂಜೆ, ಸಂಕಲ್ಪ ಹಾಗೂ ಮಂಗಳಾರತಿ ಸೇವೆ ಸಲ್ಲಿಸಿ ಗುರುಭವನಕ್ಕೆ ತೆರಳಿದರು, ಪ್ರತಿ ಶುಕ್ರವಾರ ಶ್ರೀಗಳು ಮೌನಾಚರಣೆಯಲ್ಲಿರುವ ಹಿನ್ನೆಲೆಯಲ್ಲಿ ಕೇವಲ ಆರ್ಶೀವಾದ ಪಡೆದರು. ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ನಾವು ತಂದೆಯವರ ಕಾಲದಿಂದ ಶ್ರೀಮಠದ ಭಕ್ತರಾಗಿ ನಡೆದುಕೊಳ್ಳುತ್ತಿದ್ದು, ಸ್ಥಳೀಯ ಶಾಸಕನಾಗಿ, ಸಾಮಾನ್ಯ ಭಕ್ತನಾಗಿ ಶ್ರೀಮಠದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಸಚಿವನಾಗಿ ಭೇಟಿ ನೀಡುತ್ತಿಲ್ಲ. ಶ್ರೀಗಳ ಮೌನಾಚರಣೆಯಲ್ಲಿರುವ ಕಾರಣ ಮುಂದಿನ ದಿನಗಳಲ್ಲಿ ಭೇಟಿ ನೀಡಿ ಶ್ರೀಗಳ ಜತೆ ಮಾತನಾಡುತ್ತೇನೆ ಎಂದರು. ಕಿರಿಯ ಶ್ರೀಗಳಾದ ಶ್ರೀಕರಿಬಸವ ಶಿವಯೋಗಿದೇವರು ಇತರರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts