More

    ಸಿದ್ಧಗಂಗಾ ಮಠದಲ್ಲಿ 7.5 ಕೋಟಿ ರೂ. ವೆಚ್ಚದ ಶೀತಲಗೃಹ : ಸಚಿವ ಬಿ.ಸಿ.ಪಾಟೀಲ್

    ತುಮಕೂರು: ಬಡ ಮಕ್ಕಳ ಜ್ಞಾನ ಹಾಗೂ ಹಸಿವು ನೀಗಿಸುವ ಸಿದ್ಧಗಂಗಾ ಮಠದಲ್ಲಿ ಆಹಾರ ಪದಾರ್ಥ ಶೇಖರಿಸಿಡಲು 7.5 ಕೋಟಿ ರೂ. ವೆಚ್ಚದಲ್ಲಿ ಶೀತಲಗೃಹ ನಿರ್ಮಿಸಲು ಕೃಷಿ ಇಲಾಖೆ ತಿರ್ಮಾನಿಸಿದೆ ಎಂದು ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

    ಚಿತ್ರದುರ್ಗಕ್ಕೆ ತೆರಳುವ ಮಾರ್ಗಮಧ್ಯೆ ಸಿದ್ಧಗಂಗಾ ಮಠಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಜತೆ ಶುಕ್ರವಾರ ಭೇಟಿ ನೀಡಿದ್ದ ಅವರು, ಶ್ರೀಮಠದಲ್ಲಿ ಸುಮಾರು 10 ರಿಂದ 12 ಸಾವಿರ ಮಕ್ಕಳು ಪ್ರತಿದಿನ ಊಟ ಮಾಡುತ್ತಾರೆ, ತರಕಾರಿ, ದವಸಧಾನ್ಯ, ಹಾಲು ಕೆಡದಂತೆ ಇಡಲು ಕೋಲ್ಡ್ ಸ್ಟೋರೇಜ್ ಅಗತ್ಯದ ಬಗ್ಗೆ ಭಕ್ತರ ಸಲಹೆ ಮೇರೆಗೆ ಸರ್ಕಾರ ಒಪ್ಪಿಗೆ ನೀಡಿದೆ ಎಂದರು. ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ. ಎಲ್ಲಿಯೂ ಬಿತ್ತನೆ ಬೀಜ, ರಸಗೊಬ್ಬರದ ಅಭಾವವಿಲ್ಲ ಎಂದರು. ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಜ್ಯೋತಿಗಣೇಶ್ ಮತ್ತಿತರರು ಇದ್ದರು.

    ವಿಶ್ವನಾಥ್‌ಗೆ ಸಿಗಲಿದೆ ಸ್ಥಾನಮಾನ: ಪರಿಷತ್ ಚುನಾವಣೆಯಲ್ಲಿ ಮಾಜಿ ಸಚಿವ ಎಚ್.ವಿಶ್ವನಾಥ್ ಅವರಿಗೆ ಟಿಕೆಟ್ ಕೈತಪ್ಪಿರುವ ಬಗ್ಗೆ ಸಿಎಂ ಜತೆ ಚರ್ಚಿಸಿದ್ದು, ಮುಂದಿನ ದಿನದಲ್ಲಿ ಸೂಕ್ತ ಸ್ಥಾನಮಾನ ಖಚಿತ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಎಚ್.ವಿಶ್ವನಾಥ್ ಹೆಸರನ್ನೂ ಶಿಫಾರಸು ಮಾಡಲಾಗಿತ್ತು, ಹೈಕಮಾಂಡ್ ಮಟ್ಟದಲ್ಲಿ ತೀರ್ಮಾನ ತೆಗೆದುಕೊಳ್ಳುವಾಗ ಹೆಸರು ಕೈಬಿಟ್ಟಿರಬಹುದು ಎಂದು ತಿಳಿಸಿದರು. ನಮಗೆಲ್ಲರಿಗೂ ಸಿಎಂ ಮೇಲೆ ಸಂಪೂರ್ಣ ವಿಶ್ವಾಸ, ನಂಬಿಕೆ ಇದೆ. ಹಾಗೆಯೇ, ಹೈಕಮಾಂಡ್ ತೀರ್ಮಾನಕ್ಕೂ ಬದ್ಧರಾಗಿದ್ದೇವೆ. ನಮ್ಮಲ್ಲಿ ಯಾರಿಗೂ ಅಸಮಾಧಾನ ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು. ಮುನಿರತ್ನ ಹಾಗೂ ಪ್ರತಾಪ್‌ಗೌಡ ಪಾಟೀಲ್ ಅವರು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಸಚಿವರಾಗುತ್ತಾರೆ ಎಂದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts