More

    ಗಣಿ ಗಡಿ ಸಮೀಕ್ಷೆಯಲ್ಲಿ ಸಚಿವ ಈಶ್ವರಪ್ಪ ಪ್ರಭಾವ ಎಂದು ಆರೋಪಿಸಿದ ಗಣಿ ಉದ್ಯಮಿ ಟಪಾಲ್ ಗಣೇಶ

    ಬಳ್ಳಾರಿ: ಲೋಕಾಯುಕ್ತ ವರದಿಯಲ್ಲಿ ಗುತ್ತಿಗೆ ರದ್ದತಿಗೆ ಶಿಾರಸು ಆಗಿರುವ ಗಣಿ ಕಂಪನಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸಂಬಂಧಿಕರು ಹಾಗೂ ಆಪ್ತ ಪಾಲುದಾರಿಕೆ ಪಡೆದಿದ್ದಾರೆ. ಸಚಿವ ಈಶ್ವರಪ್ಪ ಪ್ರಭಾವದೊಂದಿಗೆ ಗಣಿ ಕಂಪನಿ ಮರು ಆರಂಭಕ್ಕೆ ಪ್ರಯತ್ನ ನಡೆಸಲಾಗಿದೆ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ ಆರೋಪಿಸಿದರು.

    ಆಂಧ್ರ ಗಡಿಯಲ್ಲಿ ವಿಠಲಾಪುರ ಬಳಿ 19 ಹೆಕ್ಟೇರ್ ಪ್ರದೇಶ ಹೊಂದಿರುವ ಹಿಂದ್ ಟ್ರೇಡರ್ಸ್ ಗಣಿ ಕಂಪನಿಯಲ್ಲಿ ಸಚಿವ ಈಶ್ವರಪ್ಪ ಸಂಬಂಧಿಕರಾದ ಬಂಗಾರು ಸೋಮಶೇಖರ, ಕೆ.ಎಸ್.ಶೈಲಾ ಹಾಗೂ ಆಪ್ತ ಪುಟ್ಟಸ್ವಾಮಿಗೌಡ ಶೇ.55 ಪಾಲುದಾರಿಕೆ ಪಡೆದಿದ್ದಾರೆ. ಆಂಧ್ರ ಪ್ರದೇಶದೊಂದಿಗಿನ ಗಡಿ ವಿವಾದದಿಂದ ಹಿಂದ್ ಟ್ರೇಡರ್ಸ್ ಗಣಿಗೆ ಸಂಬಂಧಿಸಿದ ಚಟುವಟಿಕೆಗಳು ಸ್ಥಗಿತಗೊಂಡಿವೆ. ಗಣಿಗಾರಿಕೆ ಮರು ಆರಂಭಕ್ಕೂ ಮುನ್ನ ಗಡಿ ವಿವಾದ ಇತ್ಯರ್ಥಗೊಳಿಸುವುದಕ್ಕಾಗಿ ಕೇಂದ್ರ ಗೃಹ ಇಲಾಖೆಯ ಮೊರೆ ಹೋಗಿದ್ದಾರೆ. ಸಚಿವ ಈಶ್ವರಪ್ಪ ಪ್ರಭಾವದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

    ಸಚಿವ ಈಶ್ವರಪ್ಪ ಪರೋಕ್ಷವಾಗಿ ಗಣಿಗಾರಿಕೆ ಬಗ್ಗೆ, ಅದರಲ್ಲೂ ಗುತ್ತಿಗೆ ರದ್ಧತಿಗೆ ಶಿಾರಸುಗೊಂಡಿರುವ ಗಣಿ ಬಗ್ಗೆ ಆಸಕ್ತಿ ತೋರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ಮೂಲಕ ಗಡಿ ಸಮೀಕ್ಷೆಯಲ್ಲೂ ಪ್ರಭಾವ ಬೀರಲಾಗುತ್ತಿದೆ ಎಂದು ಟಪಾಲ್ ಗಣೇಶ ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts